ಅಜ್ಜಅಜ್ಜಿ ಜೊತೆಗಿದ್ದರೆ ಮಕ್ಕಳು ವಾಹನದಲ್ಲಿ ಸೇಫ್

ಅಪ್ಪಅಮ್ಮನೊಂದಿಗೆ ಪ್ರಯಾಣಿಸುವಾಗ ಆಗುವ ಅಪಾಯಕ್ಕಿಂತ ಅಜ್ಜ ಅಜ್ಜಿಯ ಜೊತೆಗೆ ಪ್ರಯಾಣಿಸುವಾಗ ಆಗುವ ಅಪಾಯ ಕಡಿಮೆ ಎಂಬುದು ಈ ಅಧ್ಯಯನದ ಸಾರ. ಜೊತೆಗೆ ಅಜ್ಜ ಅಜ್ಜಿ ವಾಹನವನ್ನು ಸುರಕ್ಷಿತವಾಗಿ ಚಾಲನೆ ಮಾಡುತ್ತರಂತೆ.
ಅಧ್ಯಯನ ನಡೆಸುವ ಮುಂಚಿನ ಯೋಚನೆಯೇ ಬೇರೆ ಇತ್ತಂತೆ. ಹಿರಿಯರೊಂದಿಗೆ ಮಕ್ಕಳು ಹೆಚ್ಚು ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಫಲಿತಾಂಶ ಮಾತ್ತ ಉಲ್ಟಾ ಆಗಿತ್ತು.
ಫಿಲಿಡೆಲ್ಪಿನಿಯಾದ ಆಸ್ಪತ್ರೆಯೊಂದರ ಮಕ್ಕಳ ತುರ್ತು ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಫ್ರಿಡ್ ಹೆನರಿಟ್ಜ್ (64) ಈ ಅಧ್ಯಯನಕ್ಕೆ ಪ್ರೇರಕ. ತನ್ನ ಮೊಮ್ಮಗ ಕಾರು ಚಲಾಯಿಸುವುದನ್ನು ಕಂಡಾಗ ಇಂತಹ ಅಧ್ಯಯನ ಮಾಡಬೇಕೆಂದು ಅನಿಸಿತಂತೆ. ಸ್ಟೇಟ್ ಫರ್ಮ್ ಇನ್ಶೂರೆನ್ಸ್ ಈ ಸಮೀಕ್ಷೆ ಆಯೋಜಿಸಿತ್ತು.
2003ರಿಂದ 2007ರವರೆಗೆ 15 ದೇಶಗಳಲ್ಲಿ ನಡೆದ ಅಪಘಾತಗಳನ್ನು ಪರಿಶೀಲಿಸಲಾಯಿತು. ಹಲವು ಡ್ರೈವರ್ ಗಳನ್ನು ಸಂದರ್ಶನ ನಡೆಸಲಾಗಿತ್ತು. ಜೊತೆಗೆ 15 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 12 ಸಾವಿರ ಮಕ್ಕಳ ಕೂಡ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
ಸಮೀಕ್ಷೆಯಲ್ಲಿ ತಿಳಿದು ಬಂದ ಅಂಶವೆಂದರೆ ಹೆಚ್ಚಿನ ಅಪಘಾತಗಳಲ್ಲಿ ಹಿರಿಯರು ಜೊತೆಗಿದ್ದರೆ ಮಕ್ಕಳಿಗೆ ಗಾಯಗಳಾಗಿದ್ದು ಕಡಿಮೆಯಂತೆ. 58 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರನ್ನು ಸಮೀಕ್ಷೆ ನಡೆಸಲಾಗಿತ್ತು. ಮೊಮ್ಮಕಳನ್ನು ಅಜ್ಜಅಜ್ಜಿಯರೊಂದಿಗೆ ಪ್ರಯಾಣಿಸಲು ಅಡ್ಡಿ ಮಾಡದಿರಿ ಎಂದು ಸಮೀಕ್ಷೆ ನಡೆಸಿದ ವಿಮಾ ಕಂಪನಿ ಪೋಷಕರಿಗೆ ಕಿವಿಮಾತು ಹೇಳಿದೆ.


Click it and Unblock the Notifications