ಭಾರತಕ್ಕೆ ಇನ್ನಷ್ಟು ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್

"ಈಗ ಲ್ಯಾಂಡ್ ರೋವರ್ ಫ್ರೀಲಾಂಡರ್ ಕಾರುಗಳನ್ನು ಭಾರತದಲ್ಲಿ ಜೋಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಲ್ಯಾಂಡ್ ರೋವರ್ ಉತ್ಪನ್ನಗಳನ್ನು ಪರಿಚಯಿಸಲು ಯೋಜಿಸಿದ್ದೇವೆ" ಎಂದು ಟಾಟಾ ಹೇಳಿದ್ದಾರೆ. ಟಾಟಾ ಮೋಟರ್ಸ್ ನ ವಾರ್ಷಿಕ ವರದಿ 2010-11 ಪ್ರಕಟಿಸುತ್ತ ಷೇರುದಾರರಿಗೆ ರತನ್ ಟಾಟಾ ಈ ಮಾಹಿತಿ ನೀಡಿದ್ದಾರೆ.
ಪ್ರಸಕ್ತ ವರ್ಷ ಮೇ ತಿಂಗಳಲ್ಲಿ ಜೆಎಲ್ಆರ್ ಪುಣೆಯಲ್ಲಿ ಮೊದಲ ಅಸೆಂಬಲ್ ಘಟಕ ನಿರ್ಮಿಸಿತ್ತು. ಇಲ್ಲಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಫ್ರೀಲಾಂಡರ್ 2ನ್ನು ಸಿಕೆಡಿ ನಿರ್ಮಿಸಲಾಗುತ್ತಿದೆ. ಅಂದರೆ ಇಂಗ್ಲೆಂಡಿನಿಂದ ಎಲ್ಲಾ ಬಿಡಿಭಾಗಗಳನ್ನು ತಂದು ಜೋಡಿಸಲಾಗುತ್ತಿದೆ.
ಚೀನಾದಲ್ಲಿ ವಹಿವಾಟು ವಿಸ್ತರಿಸುವ ಕುರಿತಾದ ಪ್ರಶ್ನೆಗೆ "ಜಿಎಲ್ಆರ್ ಕೆಲವು ಉತ್ಪನ್ನಗಳನ್ನು ಚೀನಾಕ್ಕೆ ಪರಿಚಯಿಸಲಿದೆ. ಚೀನಾವು ಕಂಪನಿಗೆ ಪ್ರಮುಖ ಮಾರುಕಟ್ಟೆಯಾಗಿದೆ" ಎಂದು ಹೇಳಿದ್ದಾರೆ. ಭಾರತ ಮತ್ತು ಇಂಗ್ಲೆಂಡಿನಲ್ಲಿ ಹಲವು ಉತ್ಪಾದನಾ ಘಟಕವನ್ನು ನಿರ್ಮಿಸುವ ಯೋಜನೆಯನ್ನು ಜಿಎಲ್ಆರ್ ಮತ್ತು ಟಾಟಾ ಮೋಟರ್ಸ್ ಹೊಂದಿದೆ. ಇದರೊಂದಿಗೆ ಕಂಪನಿಗಳೆರಡು ಜಂಟಿಯಾಗಿ ಎಂಜಿನ್ ಗಳನ್ನು ಅಭಿವೃದ್ಧಿಪಡಿಸಲಿದೆ ಎಂದರು.


Click it and Unblock the Notifications








