ನೂತನ ಷೆವರ್ಲೆ ಬೀಟ್ ಡೀಸಲ್ ಜುಲೈ 25ರಂದು ರಸ್ತೆಗೆ

"ದೇಶದಲ್ಲಿ ಪೆಟ್ರೊಲ್ ದರ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಜನರು ಡೀಸಲ್ ಬೀಟ್ ಕಾರು ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆ ನಮ್ಮದು. ಸಣ್ಣ ಕಾರು ಸೆಗ್ಮೆಂಟಿನಲ್ಲಿ ತನ್ನ ಇಂಧನ ದಕ್ಷತೆಯಿಂದ ನೂತನ ಷೆವರ್ಲೆ ಬೀಟ್ ಡೀಸಲ್ ಭರವಸೆ ಮೂಡಿಸಲಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕಾರು ಗ್ರಾಹಕರಿಗೆ ದೊರಕಲಿದೆ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಕಾರ್ಲ್ ಸ್ಯಾಮ್ ಹೇಳಿದ್ದಾರೆ.
ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್(ಎಆರ್ಎಐ) ಪ್ರಕಾರ ನೂತನ ಷೆವರ್ಲೆ ಬೀಟ್ ಪ್ರತಿಲೀಟ್ ಗೆ 24 ಕಿ.ಮೀ. ಮೈಲೇಜ್ ನೀಡುತ್ತಿದೆ. ಇದು ಫಿಯೆಟ್ ನ 1.3 ಮಲ್ಟಿಜೆಟ್ ಡೀಸಲ್ ಎಂಜಿನ್ ಹೊಂದಿದೆ. ಒಂದು ಮೂಲದ ಪ್ರಕಾರ ಈ ಕಾರಿನ ದರ ಸುಮಾರು 4.25 ಲಕ್ಷ ರು.ನಿಂದ 6 ಲಕ್ಷ ರು. ಆಸುಪಾಸಿನಲ್ಲಿರಲಿದೆ.


Click it and Unblock the Notifications








