ಟಾಟಾ ಮೋಟರ್ಸ್ ವಿದೇಶಗಳಲ್ಲಿ ಹೊಸ ಘಟಕ

ಟಾಟಾ ಮೋಟರ್ಸ್ 2010-11ರ ವಾರ್ಷಿಕ ವರದಿಯಲ್ಲಿ ಜಾಗತಿಕವಾಗಿ ಹೊಸ ಘಟಕಗಳನ್ನು ಸ್ಥಾಪಿಸುವ ಕುರಿತು ಪ್ರಸ್ತಾಪ ಮಾಡಿದೆ. ಅದರಲ್ಲೂ ಹೆಚ್ಚು ಇಂಧನ ದಕ್ಷತೆಯ ವಾಹನಗಳನ್ನು ಉತ್ಪಾದಿಸಲು ಕಂಪನಿ ಹೆಚ್ಚು ಆದ್ಯತೆ ನೀಡಲಿದೆ ಎಂದು ಒತ್ತಿ ಹೇಳಿದೆ. ಆದರೆ ಕಂಪನಿಯು ಯಾವ ದೇಶಗಳಲ್ಲಿ ಹೊಸ ಘಟಕ ಸ್ಥಾಪಿಸಲಿದೆ ಎಂದು ವರದಿಯಲ್ಲಿ ಹೇಳಿಲ್ಲ.
ಹೆಚ್ಚಿನ ಮಾಹಿತಿಗೆ ಕಂಪನಿಯ ವಕ್ತಾರರನ್ನು ಸಂಪರ್ಕಿಸಲಾಯಿತು. "ವಿದೇಶಗಳಲ್ಲಿ ಘಟಕ ನಿರ್ಮಿಸುವುದು ಖಚಿತ. ಆದರೆ ಯಾವ ದೇಶಗಳಲ್ಲಿ ನಿರ್ಮಿಸಬೇಕೆಂದು ಕಂಪನಿ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ನಾವು ಮೊದಲಿಗೆ ಕಾರುಗಳನ್ನು ಅಭಿವೃದ್ಧಿಪಡಿಸುತ್ತೇವೆ. ನಂತರ ಈ ಕಾರು ಯಾವೆಲ್ಲ ದೇಶಗಳಿಗೆ ಸೂಕ್ತವೆಂದು ಪರಿಶೀಲಿಸುತ್ತೇವೆ" ಎಂದು ಟಾಟಾ ವಕ್ತಾರರು ಹೇಳಿದ್ದಾರೆ.


Click it and Unblock the Notifications








