ಸ್ವಿಫ್ಟ್, ಪೊಲೊಗೆ ಎದುರಾಳಿ ರೆನಾಲ್ಟ್ ಸಣ್ಣ ಕಾರು

ಕಂಪನಿಯು ಇದರೊಂದಿಗೆ ಚೆನ್ನೈನಲ್ಲಿ ಹೊಸ ಘಟಕವೊಂದನ್ನು ನಿರ್ಮಿಸುತ್ತಿದೆ. ಈ ಘಟಕವು ಮುಂದಿನ ವರ್ಷದಿಂದ ಉತ್ಪಾದನೆ ಆರಂಭಿಸಲಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಂಪನಿಯು ಈ ಘಟಕದಲ್ಲಿಯೇ ಸಣ್ಣ ಕಾರುಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಆದರೆ ನೂತನ ಕಾರು ಅದಕ್ಕೂ ಮುನ್ನ ಅಂದರೆ ಜನವರಿ ತಿಂಗಳಲ್ಲಿ ರಸ್ತೆಗಿಳಿಯಲಿದೆ. ಹೊಸ ಘಟಕ ನಿರ್ಮಾಣವಾಗುವರೆಗೆ ತನ್ನ ಇತರ ಘಟಕಗಳಲ್ಲಿ ಸಣ್ಣ ಕಾರುಗಳನ್ನು ಉತ್ಪಾದಿಸಲಿದೆ.
ಕಂಪನಿಯು ತನ್ನ ಫ್ರಾನ್ಸ್ ಘಟಕದಲ್ಲಿ ಸಣ್ಣ ಘಟಕಗಳ ಬಿಡಿಭಾಗಗಳನ್ನು ನಿರ್ಮಿಸಿ ಭಾರತದಲ್ಲಿ ಅಸೆಂಬಲ್(ಜೋಡಣೆ) ಮಾಡಲಿದೆ. 2012ರಲ್ಲಿ ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಈ ಕಾರುಗಳನ್ನು ಕಂಪನಿ ಪ್ರದರ್ಶಿಸಲಿದೆ. ಈ ಸಣ್ಣ ಕಾರು ಪೆಟ್ರೊಲ್ ಮತ್ತು ಡೀಸಲ್ ಎಂಜಿನ್ ಗಳಲ್ಲಿ ದೊರಕಲಿದೆ. ಇದಕ್ಕೂ ಮುನ್ನ ಕಂಪನಿಯು ಸ್ಪೋರ್ಟ್ಸ್ ಯುಟಿಲಿಟಿ ಕಾರೊಂದನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಿದೆ.


Click it and Unblock the Notifications








