ಹೀರೋ ಹೋಂಡಾ: ಹೆಸರು ಬದಲಾಯಿಸಲಾಗುವುದು!

ಇದರೊಂದಿಗೆ ಕಂಪನಿಯು ಜಾಗತಿಕವಾಗಿ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಹಲವು ಕಾರ್ಯತಂತ್ರಗಳನ್ನು ಹೊಂಇದೆ. ಇದರಲ್ಲಿ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ನಾಯಕತ್ವ ಸ್ಥಾನವನ್ನು ಅಜೀವ ಪರ್ಯಂತ ಉಳಿಸಿಕೊಳ್ಳುವ ಉಪಾಯಗಳೂ ಇವೆ ಎಂದು ಕಂಪನಿ ಹೇಳಿದೆ. ಇದರೊಂದಿಗೆ ಕಂಪನಿಯು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೊಸ ಉತ್ಪನ್ನಗಳನ್ನು ಪರಿಚಯಿಸಲು ನಿರ್ಧರಿಸಿದೆ.
ಕಳೆದ ವರ್ಷ ಹೋಂಡಾ ಮತ್ತು ಹೀರೋ ಗ್ರೂಪ್ ಜಂಟಿ ಉದ್ಯಮ ಕೊನೆಗೊಂಡಿತ್ತು. ಶೇಕಡಾ 26ರಷ್ಟು ಪಾಲನ್ನು ಮುಂಜಾಲ್ ಖರೀದಿಸಿದ ನಂತರ ಹೀರೋ ಹೋಂಡಾ ಸ್ವತಂತ್ರ ಕಂಪನಿಯಾಗಿ ಹೊರಹೊಮ್ಮಿತ್ತು. ಇದೀಗ ಕಂಪನಿಯು ಹೊಸ ಹೆಸರು, ಹೊಸ ಬ್ರಾಂಡ್ ಪ್ರತಿಷ್ಠೆ ಪ್ರತಿಷ್ಠಾಪನೆ ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.


Click it and Unblock the Notifications








