ಚಿತ್ರದುರ್ಗ ಬೆಂಗ್ಳೂರು ರಸ್ತೆಯಲ್ಲಿ ಹೀರೋ ಮತ್ತು ದೀಪು

ಕನ್ನಡ ಡ್ರೈವ್ ಸ್ಪಾರ್ಕ್ ಓದುಗರಾದ ದೀಪು ಎನ್ ತನ್ನ ಪ್ರೀತಿಯ ಬೈಕ್ ಕುರಿತು ಅನುಭವ ಹಂಚಿಕೊಂಡಿದ್ದಾರೆ. ಹೀರೋ ಹೋಂಡಾ ಫ್ಯಾಮಿಲಿಯ ಸಿಬಿಝಡ್ ಎಕ್ಸ್ ಟ್ರೀಂ ಬೈಕನ್ನು ಅವರೆಷ್ಟು ಪ್ರೀತಿಸುತ್ತಾರೆ ಎನ್ನುವುದನ್ನು ಅವರ ಮಾತಲ್ಲೇ ಕೇಳಿ....

ನನಗೆ ಮೊದಲಿನಿಂದಲೂ ಹೀರೋ ಹೋಂಡಾ ಸಿಬಿಝಡ್ ಎಕ್ಸ್ ಟ್ರೀಂ ತೆಗೆದುಕೊಳ್ಳಬೇಕೆಂಬ ಆಸೆಯಿತ್ತು. ಏನ್ಮಾಡ್ಲಿ. ಹಣಕಾಸು ತೊಂದರೆಯಿತ್ತು. ಅರೆಮನಸ್ಕನಾಗಿ ಬಜಾಜ್ ಡಿಸ್ಕವರ್ ಖರೀದಿಸಿಬಿಟ್ಟೆ. ಮೈಲೇಜ್ ಚೆನ್ನಾಗಿದ್ದರೂ ನನ್ನ ಮನಸ್ಸು ಹಂಬಲಿಸುತ್ತಿದ್ದದ್ದು ಸಿಬಿಝಡ್ ಎಕ್ಸ್ ಟ್ರೀಂ ಕಡೆಗೆ.

ಆಸೆ ಪಟ್ಟದು ಸಿಗ್ಲೇ ಬೇಕು. ಅದ್ಕೆ ಒಳ್ಳೆ ಮಹೂರ್ತ ಸಿಕ್ಕಿದ್ದು ಹೊಸ ವರ್ಷದಂದು. ಅಂದ್ರೆ 2012ರ ಜನವರಿ ಒಂದರಂದು ನನ್ನ ಹೃದಯದಲ್ಲಿ ಬಹುದಿನದಿಂದ ಕಾಡುತ್ತಿದ್ದ ಕನಸನ್ನು ನನಸು ಮಾಡಿಕೊಂಡೆ. ಹೀರೋ ಹೋಂಡಾ ಸಿಬಿಝಡ್ ಎಕ್ಸ್ ಟ್ರೀಂ ಖರೀದಿಸಿಬಿಟ್ಟೆ. ಹಳೆಯ ಡಿಸ್ಕವರ್ ತಂದೆಗೆ ಕೊಟ್ಟುಬಿಟ್ಟೆ

ಚಿತ್ರದುರ್ಗ ಸಮೀಪದ ಕೊನಬೇವು ನನ್ನೂರು. ಬೆಂಗಳೂರಿನಿಂದ ಇಲ್ಲಿಗೆ ಸುಮಾರು 250 ಕಿ.ಮೀ. ದೂರ. ನನ್ನ ಲಾಂಗ್ ಡ್ರೈವ್ ಆಸೆ ನೆರವೇರಿಸಲು ಇದು ನೆರವಾಯಿತು. ನಿಮ್ಗೊತ್ತ? ಈ ಬೈಕ್ ಖರೀದಿಸಿ ಎರಡು ತಿಂಗಳು ಇಪ್ಪತ್ತೇಳು ದಿನವಾಗಿದೆಯಷ್ಟೇ! ಇಷ್ಟರಲ್ಲೇ ಇದನ್ನು 5,250 ಕಿ.ಮೀ. ಓಡಿಸಿದ್ದೇನೆ. ಹೆಸರಿನಂತೆ ಈ ಬೈಕ್ ಸವಾರಿ ಅನುಭವ EXTREME... ವಿಪರೀತ ಸ್ಪೀಡ್ ಹುಚ್ಚಿರುವರಿಗೆ ಬೆಸ್ಟ್ ಬೈಕ್.

ಡಿಸ್ಕವರ್, ಪಲ್ಸರ್, ಅಪಾಚೆ ಈ ಎಲ್ಲಾ ಬೈಕುಗಳಲ್ಲೂ ಚಿತ್ರದುರ್ಗಾ-ಬೆಂಗಳೂರು ಲಾಂಗ್ ಡ್ರೈವ್ ಮಾಡಿದ್ದೀನಿ. ಆದರೆ ಹೀರೋ ಹೋಂಡಾದ ಎಕ್ಸ್ ಟ್ರೀಂ ನೀಡಿದ ಅನನ್ಯ ರೈಡಿಂಗ್ ಅನುಭವ ಯಾವ ಬೈಕಿನಲ್ಲೂ ಸಿಕ್ಕಿಲ್ಲ. ಬೇರೆಲ್ಲ ಬೈಕಲ್ಲಿ ನಂಗೆ ಬೆನ್ನುನೋವು ಬರುತ್ತಿತ್ತು. ಆದ್ರೆ ಎಕ್ಸ್ ಟ್ರೀಂ ತುಂಬಾ ಕಂಪರ್ಟ್ ಬೈಕ್.

ಅದೊಂದು ದಿನ ನಾನು ನನ್ನ ಪ್ರೀತಿಯ ಬೈಕಲ್ಲಿ ಹೋಗುತ್ತಿದ್ದೆ. ಆಗ ನನ್ನನ್ನು ಹಿಂದಿಕ್ಕಿ ಪಲ್ಸರ್ 180 ಸಿಸಿ ಬೈಕ್ ಮುಂದಕ್ಕೆ ಹೋಯ್ತು. ಬಿಡ್ತಿನಾ ನಾನು... ನನ್ನ ಬೈಕ್ ವೇಗ ಹೆಚ್ಚಿಸಿದೆ. ಅವನಿಗೂ ಇದು ಅರಿವಾಯ್ತು. ಅವನೂ ಹೆಚ್ಚಿಸಿದ. ಒಳ್ಳೆ ರೇಸ್ ತರಹ ಹೋಗ್ತಾ ಇದ್ದೇವು. ನಂಬಿದ್ರೆ ನಂಬಿ ನಾನು ಆ ಬೈಕನ್ನು ಹಿಂದಿಕ್ಕಿಬಿಟ್ಟೆ. ನಿಜಕ್ಕೂ ಅಚ್ಚರಿಪಡಬೇಕು. ಅವನದು 180 ಸಿಸಿ ಬೈಕ್. ನಂದು 150 ಸಿಸಿ ಬೈಕ್.... ಅವತ್ತಿಂದ ನನ್ನ ಬೈಕ್ ಮೇಲಿನ ಪ್ರೀತಿ ದುಪ್ಪಟ್ಟು ಹೆಚ್ಚಾಯಿತು.

ಮೈಲೇಜ್ ಕೂಡ ಪರವಾಗಿಲ್ಲರೀ.. ಪ್ರತಿಲೀಟರಿಗೆ 40-45 ಕಿ.ಮೀ. ಸಿಗುತ್ತೆ. ಡಿಜಿಟಲ್ ಮೀಟರ್, ವಿನ್ಯಾಸ, ಮೈಲೇಜ್ ಇತ್ಯಾದಿ ವಿಷಯಗಳಲ್ಲಿ ಹಳೆಯ ಎಕ್ಸ್ ಟ್ರೀಂಗೂ ಹೊಸ ಆವೃತ್ತಿಗೂ ತುಂಬಾ ವ್ಯತ್ಯಾಸವಿದೆ.

ನಾನಂತು ನನ್ನ ಹೀರೋ ಹೋಂಡಾ ಎಕ್ಸ್ ಟ್ರೀಂನ್ನೂ ತುಂಬಾ ಇಷ್ಟಪಟ್ಟೆ. ನಿಮ್ಗೂ ಇಷ್ಟ ಆದ್ರೆ ತಿಳಿಸಿ. ನನ್ನ ಅಭಿಪ್ರಾಯ ಹಂಚಿಕೊಳ್ಳಲು ನೆರವಾದ ದಟ್ಸ್ ಕನ್ನಡ ಸಮೂಹದ ಕನ್ನಡ ಡ್ರೈವ್ ಸ್ಪಾರ್ಕಿಗೆ ಹೃದಯಪೂರ್ವಕ ಧನ್ಯವಾದಗಳು.

ಪ್ರೀತಿಯಿಂದ- ದೀಪು ಎನ್

ನೀವು ಇತ್ತೀಚೆಗೆ ಹೊಸ ಬೈಕ್ ಕಾರು ಖರೀದಿಸಿದ್ರಾ? ಅಥವಾ ನಿಮ್ಮಲ್ಲೂ ಹಳೆಯ ಕಾರು ಬೈಕು ಇರಬಹುದಲ್ವಾ? ಅಥವಾ ಯಾವುದಾದ್ರೂ ವಾಹನ ಖರೀದಿಸೋ ಕನಸಲ್ಲಿದ್ದೀರಾ? ನಿಮ್ಮ ಕನಸಿನ ಕಾರು ಬೈಕು ಖರೀದಿಸಿದ ಅಥವಾ ಖರೀದಿಸಲಿರುವ ಕಥೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಖರೀದಿ ಅನುಭವ, ವಾಹನ ನೀಡೋ ಮೈಲೇಜ್, ಪ್ಲಸ್ ಮತ್ತು ಮೈನಸ್ ಪಾಯಿಂಟ್ ಎಲ್ಲವನ್ನೂ ಕನ್ನಡ ಡ್ರೈವ್ ಸ್ಪಾರ್ಕ್ ನಲ್ಲಿ ಬಿಚ್ಚಿಡಿ. ಇದು ಇನ್ನು ಮುಂದೆ ವಾಹನ ಖರೀದಿಸುವರಿಗೆ ಮಾರ್ಗದರ್ಶನವಾಗಲಿ. ನಿಮ್ಮ ಲೇಖನ ಇಂಗ್ಲಿಷ್ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿಬರಲಿದೆ. ಇನ್ಯಾಕೆ ತಡ.. ಈಗ್ಲೇ ಲೇಖನ ಕಳುಹಿಸಿ.

ನಮ್ಮ ಇಮೇಲ್ ವಿಳಾಸ: [email protected]

More from DriveSpark

Article Published On: Tuesday, March 27, 2012, 14:51 [IST]
English summary
Deepu from Chitradurga has shared his user experience on the Hero Honda CBZ Extreme. It is his dream bike and he enjoys taking it on long drives. In his own words, the CBZ Extreme offers extreme performance which other bikes such as the Pulsar, Discover, Apache cannot match.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+