ಎಕ್ಸ್‌ಕ್ಲೂಸಿವ್ ರಿವ್ಯೂ: ಮಾರುತಿ ಎರ್ಟಿಗಾ ನೋಡು ಬಾ

ಇದು ಎರ್ಟಿಗಾ. ಕುಟುಂಬ ಸವಾರಿಗೆ ಸೂಕ್ತ ಕಾರು. ಕಂಪನಿಯ ಪ್ರಕಾರ ಇದು ಲೈಟ್ ಯುಟಿಲಿಟಿ ವೆಹಿಕಲ್. ಶಾರ್ಟ್ ಆಗಿ ಹೇಳ್ಬೇಕಾದ್ರೆ ಇದು ಎಲ್‌ಯುವಿ. ಅಂದ್ರೆ ಲವ್. 5.89 ಲಕ್ಷ ರು. ಆರಂಭಿಕ ದರದ ಈ ಕಾರಿನ ಎಕ್ಸ್‌ಕ್ಲೂಸಿವ್ ವಿಮರ್ಶೆ ಕನ್ನಡ ಡ್ರೈವ್‌ಸ್ಪಾರ್ಕ್ ಓದುಗರಿಗಾಗಿ. ಕಾರು ಕನಸು ಹೊಂದಿರುವರ ಗಮನಸೆಳೆಯುವ ಈ ಕಾರಿನತ್ತ ಒಂದು ಸಮಗ್ರ ನೋಟ ಇಲ್ಲಿದೆ.

ಬೆಂಗಳೂರಿನಲ್ಲಿಂದು(ಏಪ್ರಿಲ್ 13) ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ ಎಲ್‌ಯುವಿ ಕಾರನ್ನು ಹೊರತಂದಿದೆ. ಎಲ್‌ಯುವಿ ಅಥವಾ ಎಂಪಿವಿ ಮಾರುತಿಗೆ ಹೊಸ ಸೆಗ್ಮೆಂಟ್. ಈ ಕ್ಷೇತ್ರದಲ್ಲಿ ಕಂಪನಿ ಈಗಷ್ಟೇ ಅಂಬೆಗಾಲಿಡುತ್ತಿದೆ. ಎರ್ಟಿಗಾ ಅಭಿವೃದ್ಧಿಪಡಿಸಲು ಕಂಪನಿಯು ಸುಮಾರು 430 ಕೋಟಿ ರುಪಾಯಿ ವೆಚ್ಚ ಮಾಡಿದೆ. ಮೊದಲ ನೋಟಕ್ಕೆ ಎರ್ಟಿಗಾ ವಿನ್ಯಾಸ ಕಣ್ಮನ ಸೆಳೆಯುತ್ತದೆ. ವಿನ್ಯಾಸಗಾರರ ನಾಜೂಕು, ಕುಶಲತೆ ಅಚ್ಚರಿ ಹುಟ್ಟಿಸುತ್ತದೆ.

ಎಂಜಿನ್: ಇದು ತಲಾ ಮೂರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರಕುತ್ತದೆ. ಪೆಟ್ರೋಲ್ ಆವೃತ್ತಿಯು ಕೆ14ಬಿ, 1.4 ಲೀಟರ್ ಮೋಟರ್ ಎಂಜಿನ್ ಹೊಂದಿದೆ. ಇದು 6 ಸಾವಿರ ಆವರ್ತನಕ್ಕೆ 95 ಅಶ್ವಶಕ್ತಿ ಮತ್ತು 4 ಸಾವಿರ ಆವರ್ತನಕ್ಕೆ 130ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಕೆ ಸರಣಿ ಎಂಜಿನ್ ಇಂಧನ ದಕ್ಷತೆಗೆ ಹೆಸರು ಗಳಿಸಿದೆ.

ಡೀಸೆಲ್ ಆವೃತ್ತಿಗಳು 1.3 ಲೀಟರ್ ಎಂಜಿನ್ ಹೊಂದಿದ್ದು 4 ಸಾವಿರ ಆವರ್ತನಕ್ಕೆ ಗರಿಷ್ಠ 90 ಅಶ್ವಶಕ್ತಿ ಮತ್ತು 1,750 ಆವರ್ತನಕ್ಕೆ 200ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದೇ ಎಂಜಿನ್ ಸ್ವಿಫ್ಟ್ ಕಾರಿನಲ್ಲೂ ಇದೆ ಎನ್ನುವುದಿಲ್ಲಿ ಉಲ್ಲೇಖನಿಯ. ಮಾರುತಿ ಎಂಪಿವಿ 5 ಸ್ಪೀಡ್ ಮ್ಯಾನುಯಲ್ ಗೇರ್ ವ್ಯವಸ್ಥೆ ಹೊಂದಿದೆ.

ಇನ್ನೋವಾಕ್ಕಿಂತ ಎರ್ಟಿಗಾ ಸಣ್ಣದಾಗಿದೆ. ಹಾಗಂತ ಸ್ಥಳಾವಕಾಶವೇನೂ ಕಡಿಮೆಯಾಗಿಲ್ಲ. 4,265 ಮಿ.ಮೀ. ಉದ್ದ ಮತ್ತು 2,740 ಮಿ.ಮೀ. ವೀಲ್‌ಬೇಸ್ ಹೊಂದಿದೆ. ಟಾಪ್ ಎಂಡ್ ಆವೃತ್ತಿಗಳಲ್ಲಿ ಎರಡು ಏರ್‌ಬ್ಯಾಗುಗಳು ಇವೆ. ಎರ್ಟಿಗಾ ಆವೃತ್ತಿಗಳಲ್ಲಿ ಎಬಿಎಸ್ ಸ್ಟಾಂಡರ್ಡ್ ಫೀಚರ್ ಆಗಿದೆ.

ಎರ್ಟಿಗಾ ಎಂಪಿವಿ ಆರು ಆವೃತ್ತಿಗಳಲ್ಲಿ ದೊರಕುತ್ತದೆ. ಎಲ್‌ಎಕ್ಸ್‌ಐ, ವಿಎಕ್ಸ್‌ಐ, ಝಡ್‌ಎಕ್ಸ್‌‌ಐ, ಎಲ್‌ಡಿಐ, ವಿಡಿಐ ಮತ್ತು ಝಡ್‌ಎಕ್ಸ್ಐ ಆರು ಪ್ರಮುಖ ಆವೃತ್ತಿಗಳಾಗಿವೆ. ಮಧ್ಯಮ ಮತ್ತು ಟಾಪ್ ಎಂಡ್ ಆವೃತ್ತಿಗಳು ಅವಳಿ ಏರ್ ಕಂಡಿಷನ್, ಮೂರು ಹಂತದಲ್ಲಿ ಭಾಗಿಸಬಹುದಾದ ಪವರ್ ಸ್ಟಿಯರಿಂಗ್, ಚಾಲಕನ ಬದಿಯಲ್ಲಿ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಪವರ್ ವಿಂಡೋ ಇವೆ. ಉಳಿದಂತೆ ಸೆಂಟ್ರಲ್ ಲಾಕಿಂಗ್, ಆಡಿಯೋ ಸಿಸ್ಟಮ್, ಬಹುಮಾಹಿತಿ ನೀಡುವ ಡಿಸ್‌ಪ್ಲೇ, ಕಿಲೆಸ್ಸ್ ಎಂಟ್ರಿ ಇತ್ಯಾದಿ ಫೀಚರುಗಳಿವೆ.

Most Read Articles

Kannada
English summary
Maruti Suzuki Ertiga Full review. Maruti Ertiga Price, Mileage, acceleration, Power, Pickup, Interior, Exterior, Comfort, Wheels, Handling, Color, Features Review.
Story first published: Friday, April 13, 2012, 16:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X