ಮಾರುತಿ ಸುಜುಕಿ ಎರ್ಟಿಗಾ: ಮೈಲೇಜ್ ಮತ್ತು ಪವರ್
ಮಾರುತಿ ಸುಜುಕಿ ಕಂಪನಿಯ ನೂತನ ಎರ್ಟಿಗಾ ಪವರ್ ಮತ್ತು ಮೈಲೇಜ್ ಕುರಿತು ಎಲ್ಲರಿಗೂ ಕುತೂಹಲವಿರಬಹುದು. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರ್ಟಿಗಾ ಆವೃತ್ತಿಗಳು ನೀಡುವ ಮೈಲೇಜ್ ಗಮನಾರ್ಹವಾಗಿವೆ. ಮೈಲೇಜ್ ವಿಷ್ಯದಲ್ಲಿ ಎರ್ಟಿಗಾ ಗ್ರಾಹಕರಿಗೆ ಬೇಜಾರು ಮಾಡುವುದಿಲ್ಲ.
ಹೊಸ ತಲೆಮಾರಿನ ಕೆ ಸರಣಿಯ ಎಂಜಿನ್ ಹೊಂದಿರುವ ಕಾರಣ ಎರ್ಟಿಗಾ ಬಿಎಸ್4 ನೀತಿನಿಯಮಗಳಿಗೆ ಪೂರಕವಾಗಿದೆ. ಮಾರುತಿ ಸುಜುಕಿ ಎರ್ಟಿಗಾ ಪೆಟ್ರೋಲ್ ಆವೃತ್ತಿಯು ಲೀಟರಿಗೆ 16.02 ಕಿ.ಮೀ. ಮೈಲೇಜ್ ನೀಡುತ್ತದೆ. ಇದು ಎಂಪಿವಿಗಳಲ್ಲಿ ಗಮನಸೆಳೆಯುವ ಮೈಲೇಜ್. ಡೀಸೆಲ್ ಎಂಜಿನ್ ಪ್ರತಿಲೀಟರಿಗೆ 20.77 ಕಿ.ಮೀ. ಮೈಲೇಜ್ ನೀಡುತ್ತದೆ.
ಓದುಗರು ಒಂದು ವಿಷಯವನ್ನು ಗಮನಿಸಬೇಕು. ಮೇಲೆ ತಿಳಿಸಿರುವ ಮೈಲೇಜ್ ಹೆದ್ದಾರಿಗಳಲ್ಲಿ ಮಾತ್ರ ದೊರಕಬಹುದು. ಸಿಟಿ ರಸ್ತೆಯಲ್ಲಿ ಎರ್ಟಿಗಾ ಮೈಲೇಜ್ ಕೊಂಚ ಕಡಿಮೆ ಇರಬಹುದು. ಮಾರುತಿ ಸುಜುಕಿ ಎರ್ಟಿಗಾ ಕಾರು ವಿವಿಟಿ ತಂತ್ರಜ್ಞಾನ ಹೊಂದಿದೆ. ವಿವಿಟಿ ತಂತ್ರಜ್ಞಾನವು ದಕ್ಷತೆಯಿಂದ ಇಂಧನ ಬಳಸಲು ನೆರವಾಗುತ್ತದೆ. ಜೊತೆಗೆ ಇದು ಎಂಜಿನ್ ದಕ್ಷತೆ ಹೆಚ್ಚಿಸುತ್ತದೆ, ಪರಿಸರಕ್ಕೆ ಹೊರಸೂಸುವ ಹಾನಿಕಾರಕ ಇಂಗಾಲ ಇತ್ಯಾದಿಗಳನ್ನು ಕಡಿಮೆ ಮಾಡುತ್ತದೆ. ಈ ಕಾರಿನ ಎಂಜಿನ್ ಮಾಹಿತಿ ಪಡೆಯಿರಿ.
ಆಕ್ಸಿಲರೇಷನ್ ಮತ್ತು ಪಿಕಪ್: ಮಾರುತಿ ಸುಜುಕಿ ಎರ್ಟಿಗಾ ಐದು ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಸೊನ್ನೆಯಿಂದ 100 ಕಿ.ಮೀ. ವೇಗವನ್ನು ಪೆಟ್ರೋಲ್ ಎರ್ಟಿಗಾದಲ್ಲಿ 15 ಸೆಕೆಂಡಿನಲ್ಲಿ ಮತ್ತು ಡೀಸೆಲ್ ಕಾರಿನಲ್ಲಿ 15.5 ಸೆಕೆಂಡಿನಲ್ಲಿ ಪಡೆಯಬಹುದಾಗಿದೆ. ಪ್ರತಿಗಂಟೆಗೆ ಗರಿಷ್ಠ 155 ಕಿ.ಮೀ. ತಲುಪಲು ಇದಕ್ಕೆ ಹೆಚ್ಚು ಸಮಯಬೇಕಿಲ್ಲ. ಇದರಿಂದಾಗಿ ಇದರ ಡ್ರೈವಿಂಗ್ ನಮ್ಮ ದೇಶದ ರಸ್ತೆಯಲ್ಲಿ ಅತ್ಯುತ್ತಮವಾಗಿರಲಿದೆ.
ಎರ್ಟಿಗಾ ಫೀಚರುಗಳು, ವಿಶೇಷತೆಗಳನ್ನು ತಿಳಿಯಲು ಮುಂದಿನ ಪುಟ ಪ್ರವೇಶಿಸಿ>>


Click it and Unblock the Notifications









