ಮಾರುತಿ ಸುಜುಕಿ ಎರ್ಟಿಗಾ ಕಾರಲ್ಲಿ ಏನು ವಿಶೇಷತೆಯಿದೆ?
ಜಪಾನಿನ ಸುಜುಕಿ ಕಂಪನಿಯ ವಿನ್ಯಾಸ ಕೌಶಲ್ಯತೆ ಎರ್ಟಿಗಾದಲ್ಲಿ ಎದ್ದು ಕಾಣುತ್ತಿದೆ. ಆದರೆ ಮೇಡ್ ಇನ್ ಇಂಡಿಯಾ ಮಾಡುವುದಕ್ಕಾಗಿ ಇದನ್ನು ಸ್ವಿಫ್ಟ್ ಪ್ಲಾಟ್‌ಫಾರ್ಮ್‌ನಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ.
ಎಕ್ಸ್‌ಟೀರಿಯರ್:ಏರೋಡೈನಾಮಿಕ್ ವಿನ್ಯಾಸ ಕಣ್ಮನಸೆಳೆಯುತ್ತದೆ. ಅಲಾಯ್ ವೀಲ್ ಮತ್ತು ಇನ್ ಬುಲ್ಟ್ ಫಾಗ್ ಲ್ಯಾಂಪ್ ಕಾರಿನ ಅಂದ ಹೆಚ್ಚಿಸಿವೆ. ಕ್ಲಸ್ಟರ್ ಲ್ಯಾಂಪ್ ಲ್ಯಾಂಪ್ ಆಕರ್ಷಕವಾಗಿದೆ. ಸೈಡ್ ಮಿರರ್ ಮತ್ತು ಹಿಂಬದಿ ಮಿಣುಕು ದೀಪದ ವಿನ್ಯಾಸವೂ ಸೂಪರ್ ಎನ್ನಬಹುದು. ಆದರೆ ಇನ್ನೋವಾ ಮುಂದೆ ಈ ಕಾರು ಪುಟ್ಟದಾಗಿ ಕಾಣುತ್ತದೆ.

ಇಂಟಿರಿಯರ್: ಎರ್ಟಿಗಾ ಕಾರಿನೊಳಗಿನ ಸ್ಥಳಾವಕಾಶ ಓಕೆ. ಮಧ್ಯಮಗಾತ್ರದ ಏಳುಜನರು ಕುಳಿತಾಗ ಕೊಂಚ ಇಕ್ಕಟ್ಟು ಅನಿಸಬಹುದು. ಆದರೆ ಮೊದಲ ನೋಟಕ್ಕೆ ಇದರ ಇಂಟಿರಿಯರ್ ವಿಶಾಲವಾಗಿ ಕಾಣುತ್ತದೆ. ಸ್ವಿಫ್ಟ್ ಮಾದರಿಯಲ್ಲಿಯೇ ಎರ್ಟಿಗಾ ಇಂಟಿರಿಯರ್ ಇದೆ. ಅಂದರೆ ಹಗುರ ಸಾಮಾಗ್ರಿಗಳನ್ನು ಬಳಸಿದರೂ ಐಷಾರಾಮಿ ಲುಕ್ ನೀಡುತ್ತದೆ. ನಡುವಿನ ಸೀಟನ್ನು 60:40 ಬಾಗಿಸಬಹುದಾಗಿದೆ. ಇದರಿಂದಾಗಿ ಸೀಟು ಬಾಗಿಸಿ ಹಿಂಬದಿ ಸೀಟಿಗೆ ಜಂಪ್ ಮಾಡಬಹುದು. ಹಿಂಭಾಗದ ಸೀಟುಗಳಿಗೆ ಆರಾಮವಾಗಿ ಕೈಯಿಡಬಹುದಾದ ಆರ್ಮ್ ರೆಸ್ಟ್ ಇದೆ.
ಎಲೆಕ್ಟ್ರಿಕ್ ಹೊಂದಾಣಿಕೆಯ ಪವರ್ ವಿಂಡೋ ಇದೆ. ಇದರಲ್ಲಿ ಡ್ರೈವರ್ ಪಕ್ಕದ ಕಿಟಕಿಯ ಗಾಜನ್ನು ಆಟೋಮ್ಯಾಟಿಕ್ ಆಗಿ ಕೆಳಗಿಳಿಸಬಹುದು. ಮೂರು ಹಂತಕ್ಕೆ ಭಾಗಿಸಬಹುದಾದ ಟಿಲ್ಟ್ ಪವರ್ ಸ್ಟಿಯರಿಂಗ್ ವೀಲ್ ಚಾಲನೆ ಅನುಭವವನ್ನು ಮತ್ತಷ್ಟು ಹೆಚ್ಚಿಸಲಿದೆ. ಸ್ಟಿಯರಿಂಗ್‌ನಲ್ಲೇ ಆಡಿಯೋ ಕಂಟ್ರೋಲ್ ಮಾಡಬಹುದಾಗಿದೆ. ಉಳಿದಂತೆ ಯುಎಸ್‌ಬಿ. ಸೆಂಟ್ರಲ್ ಲಾಕಿಂಗ್, ಆಡಿಯೋ ಸಿಸ್ಟಮ್ ಇದೆ. 4 ಪ್ಲಸ್ 2 ಸ್ಪೀಕರ್ ಇರುವುದರಿಂದ ಮ್ಯೂಸಿಕ್ ಮಸ್ತಿಯೂ ಮಾಡಬಹುದಾಗಿದೆ.
ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಎರಡು ಟ್ರಿಪ್ ಮೀಟರ್ ಮತ್ತು ಬಹುಮಾಹಿತಿ ನೀಡುವ ಡಿಸ್‌ಪ್ಲೇ ಹೊಂದಿದೆ. ಸೆಂಟ್ರಲ್ ಲಾಕಿಂಗ್, ಫ್ಯೂಯಲ್ ಪಿಲ್ಲರ್ ಮತ್ತು ಬೂಲಟ್ ಲಿಡ್ ನಿರ್ವಹಣೆಗೆ ರಿಮೋಟ್ ವ್ಯವಸ್ಥೆಯಿದೆ. ಡ್ರೈವರ್ ಸೀಟು ಎಲೆಕ್ಟ್ರಿಕ್ ಹೊಂದಾಣಿಕೆ ಫೀಚರು ಹೊಂದಿದೆ. ಕಾರಿನೊಳಗೆ ಬಾಟಲ್ ಹೋಲ್ಡರ್, ಕಾಯಿನ್ ಹೋಲ್ಡರ್, ಸನ್ ಗ್ಲಾಸ್ ಹೋಲ್ಡರ್ ಇತ್ಯಾದಿಗಳಿವೆ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications








