ಐಕಾನಿಕ್ ವೆಸ್ಪಾ ಎಲ್ಎಕ್ಸ್ 125: ಸಂಪೂರ್ಣ ವಿಮರ್ಶೆ

ದೇಶದ ಸ್ಕೂಟರ್ ಪ್ರಿಯರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಐಕಾನಿಕ್ ಸ್ಕೂಟರ್ ದೇಶದ ರಸ್ತೆಗೆ ಬಂದಿದೆ. ಕೆಲವು ದಶಕಗಳ ಹಿಂದೆ ದೇಶದ ರಸ್ತೆಯಲ್ಲಿ ರಾಜನಂತೆ ಮೆರೆದಿದ್ದ ಈ ಸ್ಕೂಟರ್ ಮತ್ತೆ ರಾಜಕುಮಾರನಂತೆ ಆಗಮಿಸಿದೆ. ನೂತನ ವೆಸ್ಪಾ ಸ್ಕೂಟರಿನ ದರ, ಟೆಕ್ ಮಾಹಿತಿ, ಮೈಲೇಜ್, ಕಾರ್ಯಕ್ಷಮತೆ ಇತ್ಯಾದಿಗಳತ್ತ ಒಂದು ನೋಟ ಇಲ್ಲಿದೆ.

ದರ: ವೆಸ್ಪಾ ಎಲ್ಎಕ್ಸ್ 125 ಸ್ಕೂಟರಿನ ಎಕ್ಸ್ ಶೋರೂಂ ದರ 66,661 ರುಪಾಯಿ. ಹೋಂಡಾ ಆಕ್ಟಿವಾ, ಸುಜುಕಿ ಆಕ್ಸೆಸ್ 125 ಸ್ಕೂಟರುಗಳಿಗೆ ಹೋಲಿಸಿದರೆ ದರ ದುಬಾರಿ ಎಂದೆನಿಸುತ್ತದೆ. ಆದರೆ ವೆಸ್ಪಾ ಬ್ರಾಂಡ್ ಇಷ್ಟಪಡುವರು ದರದ ಕುರಿತು ಹೆಚ್ಚು ಚಿಂತಿಸುವುದು ಸಂಶಯ.

ಎಂಜಿನ್: 124 ಸಿಸಿಯ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ನೂತನ ಸ್ಕೂಟರ್ 8,250 ಆವರ್ತನಕ್ಕೆ 7.65 ಅಶ್ವಶಕ್ತಿ ಮತ್ತು 7,250 ಆವರ್ತನಕ್ಕೆ 9.6 ಟಾರ್ಕ್ ಪವರ್ ನೀಡುತ್ತದೆ. ಇದರಲ್ಲಿ ಎಂಜಿನ್ ಏರ್ ಕೂಲಿಂಗ್, ಎಲೆಕ್ಟ್ರಾನಿಕ್ ಇಂಜೆಕ್ಷನ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ ಗೇರ್ ಹೊಂದಿದೆ. ಇದರಿಂದಾಗಿ ವೆಸ್ಪಾ ಸವಾರಿ ಸುಲಭ ಮತ್ತು ಆರಾಮದಾಯಕವಾಗಿರಲಿದೆ.

ಮೈಲೇಜ್: ಮೈಲೇಜ್ ವಿಷ್ಯದಲ್ಲಿ ವೆಸ್ಪಾ ಅಷ್ಟೇನೂ ನಿರಾಶೆ ಮಾಡುವುದಿಲ್ಲ. ಹಾಗಂತ ಖುಷಿಯನ್ನೂ ಮಾಡುವುದಿಲ್ಲ. ವೆಸ್ಪಾ ಮೈಲೇಜ್ ಪ್ರತಿಲೀಟರಿಗೆ ಸುಮಾರು 45 ಕಿ.ಮೀ. ಆಸುಪಾಸಿನಲ್ಲಿ ದೊರಕಲಿದೆ. ಆಕ್ಸಿಲರೇಷನ್ ಮತ್ತು ಪಿಕಪ್ ವಿಷಯದಲ್ಲೂ ಈ ಸ್ಕೂಟರ್ ಬೇಜಾರು ಮಾಡೋದಿಲ್ಲ.

ಲುಕ್: ಪಿಯಾಗಿಯೊ ವೆಸ್ಪಾ ಸ್ಕೂಟರ್ ನೋಡಲು ಬಜಾಜ್ ಸ್ಕೂಟರುಗಳಂತೆ ಕಾಣುತ್ತದೆ. ಕೆಲವು ದಶಕಗಳ ಹಿಂದೆ ಇಂದಿರ ಗಾಂಧಿ ಸರಕಾರ ವೆಸ್ಪಾ ಪರವಾನಿಗೆ ನವೀಕರಿಸದೆ ಇದ್ದ ಹಿನ್ನಲೆಯಲ್ಲಿ ಭಾರತಕ್ಕೆ ವೆಸ್ಪಾ ಸ್ಕೂಟರ್ ಗುಡ್ ಬೈ ಹೇಳಿತ್ತು. ನಂತರ ಬಜಾಜ್ ಚೇತಕ್ ಜನಪ್ರಿಯವಾಗಿತ್ತು.

ತೂಕ: ವೆಸ್ಪಾ ಸ್ಕೂಟರಿನ ಅಲಾಯ್ ವೀಲ್ ಕಣ್ಮನ ಸೆಳೆಯುತ್ತದೆ. ಸ್ಪಷ್ಟವಾಗಿರುವ ಹೆಡ್ ಲ್ಯಾಂಪ್, ಹಿಂಭಾಗದಲ್ಲಿರುವ ಮಿಣುಕು ದೀಪದಿಂದಾಗಿ ಕತ್ಲಲ್ಲೂ ದೈರ್ಯದಿಂದ ಸ್ಕೂಟರ್ ಸವಾರಿ ಮಾಡಬಹುದಾಗಿದೆ. ಈ ಸ್ಕೂಟರಿನ ಕರ್ಬ್ ತೂಕ 114 ಕೆಜಿ. ಇಂಧನ ಟ್ಯಾಂಕ್ ಸಾಮರ್ಥ್ಯ 8.5 ಲೀಟರ್. ಇಂಧನ ಮತ್ತು ವೇಗದ ಮಾಹಿತಿ ತಿಳಿಸಲು ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಇದೆ. ಒಟ್ಟಾರೆ ವೆಸ್ಪಾ ಸ್ಟೈಲ್ ವಿಷ್ಯದಲ್ಲಿ ಗಮನ ಸೆಳೆಯುತ್ತದೆ.

ಆರಾಮದಾಯಕತೆ: ಚಾಲಕ ಮತ್ತು ಹಿಂಬದಿ ಸವಾರನಿಗೆ ಆರಾಮವಾಗಿ ಕುಳಿತುಕೊಳ್ಳಲು ನೆರವಾಗುವ ವಿಶಾಲ ಸೀಟ್ ವೆಸ್ಪಾ ಸ್ಕೂಟರಲ್ಲಿದೆ. ಸೆಲ್ಪ್ ಸ್ಟಾರ್ಟ್ ಫೀಚರಿಂದ ಕಂಫರ್ಟ್ ಆಗಿ ಡ್ರೈವ್ ಮಾಡಬಹುದಾಗಿದೆ. ನೂತನ ಸಸ್ಪೆನ್ಷನ್ ಸಿಸ್ಟಮ್ ರೈಡಿಂಗ್ ಅನುಭವವನ್ನು ಹೆಚ್ಚಿಸಿದೆ. ಕಾಲಿಡುವ ಫೂಟ್ ಪೆಗ್ಸ್ ಮತ್ತು ಫೂಟ್ ರೆಸ್ಟ್ ಕೂಡ ಸೀಟಿನಲ್ಲಿ ಆರಾಮವಾಗಿ ಕುಳಿತುಕೊಳ್ಳಲು ನೆರವಾಗುತ್ತದೆ.

ಟೈರ್: ಅಲಾಯ್ ವೀಲ್ ಇರುವುದರಿಂದ ವೆಸ್ಪಾ ಸ್ಕೂಟರಿನ ಸ್ಪೋರ್ಟಿ ಮತ್ತು ಆಕರ್ಷಕತೆ ಹೆಚ್ಚಿದೆ. ಮುಂಭಾಗದ ಚಕ್ರ 11 ಇಂಚು ಮತ್ತು ಹಿಂಭಾಗದ ಚಕ್ರದ ಗಾತ್ರ 10 ಇಂಚು ಇದೆ. ಟೈರ್ ಗಾತ್ರ ದೊಡ್ಡದಾಗಿರುವ ಕಾರಣ ರಸ್ತೆಯ ಮೇಲೆ ಸ್ಕೂಟರಿಗೆ ಅತ್ಯುತ್ತಮ ಹಿಡಿತ ಸಿಗಲಿದೆ.

ಸದ್ಯ ವೆಸ್ಪಾದ ಕುರಿತು ಇಷ್ಟು ಮಾಹಿತಿ ಸಾಕು ಅಲ್ವೆ?

Most Read Articles

Kannada
English summary
Piaggio Vespa Lx 125 Review. Piaggio vespa launched in India. Now time to read about Vespa Price, Mileage, average, Pick up, colours, Dimensions, Suspension and Features etc. 
Story first published: Thursday, April 26, 2012, 15:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X