ಹೊಸ ನವೀಕರಣಗಳೊಂದಿಗೆ ಆಕರ್ಷಕ ಬೆಲೆಗೆ ಬಂದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ

80ರ ದಶಕದಲ್ಲಿ ಭಾರತೀಯರ ಪ್ರೀತಿಯ ಸಾರಥಿಯಾಗಿತ್ತು. ಹೆಚ್ಚಿನ ಜನರ ಮನೆಯಲ್ಲೂ ಸಾಮಾನ್ಯವಾಗಿದ್ದ ಸ್ಕೂಟರ್ ಇದಾಗಿದ್ದು, ಅಷ್ಟರಮಟ್ಟಿಗೆ ಬಜಾಜ್ ಚೇತಕ್ ಸ್ಕೂಟರ್ ಭಾರತೀಯರನ್ನು ಆವರಿಸಿಬಿಟ್ಟಿತ್ತು. 2005ರ ಈ ಜನಪ್ರಿಯ ಹಮಾರ ಬಜಾಜ್ ಸ್ಕೂಟರ್ ಸ್ಥಗಿತಗೊಂಡಿತು. ಮತ್ತೆ ವರ್ಷಗಳ ಹಿಂದೆ ಎಲೆಕ್ಟ್ರಿಕ್ ಅವತಾರದಲ್ಲಿ ಮತ್ತೆ ಭಾರತದ ರಸ್ತೆಗಿಳಿಯಿತು.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ (Bajaj Chetak Electric Scooter) ರೂಪದಲ್ಲಿ ಮರಳಿ ಬಂದು ಮತ್ತೆ ಮಾರುಕಟ್ಟೆಯಲ್ಲಿ ಸಂಚಲನ ಸೃಸಃಟಿಸಲು ಪ್ರಯತ್ನಿಸಿತು. ಆದರೆ ಈ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಪ್ರತಿಸ್ಪರ್ಧಿಗಳಾದ ಎಥರ್, ಓಲಾ ಮತ್ತು ಹೀರೋ ವಿಡಾದಂತಹ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳ ತೀವ್ರ ಸ್ಪರ್ಧೆಯಿಂದ ಸ್ವಲ್ಪ ಹಿಂದೆ ಉಳಿದಿತ್ತು. ಆದ್ದರಿಂದ, ಇದು ನಾಲ್ಕು ವರ್ಷಗಳ ನಂತರ, ಚೇತಕ್ ಮಾದರಿಯಲ್ಲಿ ಕಂಪನಿಯು ದೊಡ್ಡ ಬದಲಾವಣೆಗಳನ್ನು ಮಾಡಿದೆ.

2024 Bajaj Chetak Review

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಸಾಮಾನ್ಯ ಜನರ ಜೊತೆ ಸೆಲಬ್ರಿಟಿಗಳನ್ನು ಈ ಸ್ಕೂಟರ್ ಆಕರ್ಷಿಸಿತು. ಇನ್ನು ಹೊಸ ನವೀಕರಣಗಳೊಂದಿಗೆ ಮತ್ತಷ್ಟು ಗ್ರಾಹರನ್ನು ಸೆಳೆಯುವ ಸಾಧ್ಯತೆಗಳಿದೆ. ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಾವು ಇತ್ತೀಚೆಗೆ ಬೆಂಗಳೂರಿನಲ್ಲಿ ರೈಡ್ ಮಾಡಿದ್ದೇವೆ. ಈ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸ, ಫಿಚರ್ಸ್, ಹೊಸ ಬದಲಾವಣೆ ಮತ್ತು ರೈಡಿಂಗ್ ಅನುಭವದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೊಸ ಬದಲಾವಣೆಗಳು: ಹೊಸ ಬಜಾಜ್ ಚೇತಕ್ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ನ ಎರಡು ಆವೃತ್ತಿಗಳಲ್ಲಿ ಆಕರ್ಷಕ ಬೆಲೆಯೊಂದಿಗೆ ಹೆಚ್ಚು ಶಕ್ತಿಶಾಲಿ ಪವರ್‌ಟ್ರೇನ್ ಮತ್ತು ಹೆಚ್ಚಿನ ತಂತ್ರಜ್ಞಾನಗಳೊಂದಿಗೆ ಬಂದಿದೆ. ಪ್ರಮುಖವಾಗಿ ಬಜಾಜ್ ಚೇತಕ್ ಯುವ ಖರೀದಿದಾರನ್ನು ಆಕರ್ಷಿಸುವ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, 5-ಇಂಚಿನ ಟಿಎಫ್‌ಟಿ ಡಿಸ್ಪ್ಲೇ ಟೆಕ್‌ಪ್ಯಾಕ್ (TecPac) ಪ್ಯಾಕೇಜ್ ನೊಂದಿಗೆ ಬಂದಿದೆ.

2024 Bajaj Chetak Review

ಇದು ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್, ಕಾಲ್ ಅಲರ್ಟ್ ಹಾಗೂ ಡಿಸ್ಪ್ಲೇ ಥೀಮ್ ರೀತಿಯ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಇವುಗಳೊಂದಿಗೆ ಹಿಲ್ ಹೋಲ್ಡ್, ರಿವರ್ಸ್ ಮೋಡ್, ಸ್ಪೋರ್ಟ್ಸ್ ಮೋಡ್‌ನ್ನು ಒಳಗೊಂಡಿದೆ. ಚೇತಕ್ ಪ್ರೀಮಿಯಂನಲ್ಲಿ ಪರಿಚಯಿಸಲಾದ ಇತರ ವೈಶಿಷ್ಟ್ಯಗಳೆಂದರೆ ಸ್ಪೆಲ್ಫ್-ಕ್ಯಾನ್ಸೆಲಿಂಗ್ ಬ್ಲಿಂಕರ್‌ಗಳು, ಲೆಪ್ಟ್ ಮತ್ತು ರೈಟ್ ಕಂಟ್ರೋಲ್ ಗಳ ಸ್ವಿಚ್‌ಗಳು, ಎಲೆಕ್ಟ್ರಾನಿಕ್ ಹ್ಯಾಂಡಲ್ ಲಾಕ್ ಮತ್ತು ಸೀಟ್ ತೆರೆಯುವ ಸ್ವಿಚ್ ಅನ್ನು ಹೊಂದಿದೆ.

ಸೀಟ್ ಒಳಗೆ 18.5 ಲೀಟರ್ ಸ್ಪೇಸ್ ಅನ್ನು ಹೊಂದಿದೆ. ಇನ್ನು ಹೊಸ 2024ರ ಬಜಾಜ್ ಚೇತಕ್ ಪ್ರೀಮಿಯಂ ದೊಡ್ಡದಾದ 3.2kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದ್ದು, ಇದು ಸಿಂಗಲ್ ಚಾರ್ಜ್‌ನಲ್ಲಿ 126 ಕಿಲೋಮೀಟರ್ ರೇಂಜ್ ಅನ್ನು ನೀಡುತ್ತದೆ. ಇನ್ನು ಚೇತಕ್ ಪ್ರೀಮಿಯಂ 650w ಆನ್‌ಬೋರ್ಡ್ ಚಾರ್ಜರ್‌ನೊಂದಿಗೆ ಬರುತ್ತದೆ. ಇದರ ಮೂಲಕ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಬಹುದು.

2024 Bajaj Chetak Review

ಇದರ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಇದು 5.63bhp ಅನ್ನು 22.7Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ 73 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಚೇತಕ್ ಸ್ಪೋರ್ಟ್ಸ್ ಮೋಡ್, ಹಿಲ್-ಹೋಲ್ಡ್, ಸೀಕ್ವೆನ್ಷಿಯಲ್ ಬ್ಲಿಂಕರ್‌ಗಳು, ರಿವರ್ಸ್ ಮೋಡ್, ಜಿಯೋಫೆನ್ಸಿಂಗ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಮುಂದುವರೆಸಿದೆ. ಈ ಕೆಲವು ವೈಶಿಷ್ಟ್ಯಗಳನ್ನು ಆಯ್ಕೆಗೆಗೆ ಹೆಚ್ಚುವರಿ ಹಣ ಪಾವತಿಸಬೇಕಾಕಿದೆ.

ರೈಡಿಂಗ್ ಅನುಭವ: ಹೊಸ 2024ರ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ರೈಡಿಂಗ್ ಅನುಭವ ಹಿಂದಿನ ಮಾದರಿಗೆ ಹೋಲಿಸಿದರೆ ಹೆಚ್ಚು ಭಿನ್ನವಾಗಿಲ್ಲ. ಹೊಸ ಚೇತಕ್ ಚಲಿಸುವಾಗ ಕ್ಷಿಪ್ರವಾಗಿದಂತೆ ಭಾಸವಾಗುತ್ತದೆ. ಹೊಸ ಚೇತಕ್ ಸ್ಪೋರ್ಟ್ಸ್ ಮೋಡ್ ನಲ್ಲಿ ಉತ್ತಮ ಪರ್ಫಾಮೆನ್ಸ್ ಅನ್ನು ನೀಡುತ್ತದೆ. ಆಫರ್‌ನಲ್ಲಿರುವ ಇತರ ಮೋಡ್, ಇಕೋ ಬಗ್ಗೆ ಮಾತನಾಡಲು ಹೆಚ್ಚೇನಿಲ್ಲ.

2024 Bajaj Chetak Review

ರಿವರ್ಸ್ ಗೇರ್ ಆಯ್ಕೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನೀವು ಸುಲಭವಾಗಿ ಪಾರ್ಕಿಂಗ್ ಮಾಡಬಹುದು ಮತ್ತು ಪಾರ್ಕ್ ಮಾಡಿದ ಸ್ಥಳದಿಂದ ಹೊರಗೆ ಸುಲಭವಾಗಿ ಹೊರಗೆ ಬರಬಹುದು. ಎಲೆಕ್ಟ್ರಿಕ್ ವೈವಿಧ್ಯದ ಕೆಲವು ಇತರ ಸ್ಕೂಟರ್‌ಗಳಂತೆ ಸಸ್ಪೆನ್ಷನ್ ಸೆಟಪ್ ಸ್ವಲ್ಪ ಕಠಿಣವಾಗಿದೆ, ವಿಶೇಷವಾಗಿ ಸ್ವಲ್ಪ ಒರಟಾದ ರಸ್ತೆಗಳಲ್ಲಿಯು ಆರಾಮದಾಯಕವಾಗಿ ಚಲಸಬಹುದು.

ನಗರದ ರಸ್ತೆಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಸುಲಭವಾಗಿ ಚಲಿಸುತ್ತದೆ. ಚೇತಕ್ ಸಾಕಷ್ಟು ವೇಗವುಳ್ಳದ್ದಾಗಿದ್ದು, ಬೆಂಗಳೂರಿನಂತಹ ಕಿಕ್ಕಿರಿದ ಟ್ರಾಫಿಕ್ ನಲ್ಲೂ ಸುಲಭವಾಗಿ ಚಲಿಸುತ್ತದೆ. 2024ರ ಚೇತಕ್ ಸ್ವಲ್ಪಮಟ್ಟಿಗೆ ಅದರ ಬ್ರೇಕಿಂಗ್ ಸಿಸ್ಟಂ ಉತ್ತಮವಾಗಿದೆ. ಹೊಸ ಬಜಾಜ್ ಚೇತಕ್ ಪ್ರೀಮಿಯಂ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಡ್ರಮ್ ಅನ್ನು ಕಾಂಬಿ-ಬ್ರೇಕಿಂಗ್ ಸಿಸ್ಟಮ್‌ ಅನ್ನು ಹೊಂದಿದೆ.

2024 Bajaj Chetak Review

2024ರ ಬಜಾಜ್ ಚೇತಕ್ ಪ್ರೀಮಿಯಂ ವೇರಿಯೆಂಟ್ 3 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಅವುಗಳೆಂದರೆ ಇಂಡಿಗೋ ಬ್ಲೂ, ಬ್ರೂಕ್ಲಿನ್ ಬ್ಲಾಕ್ ಮತ್ತು ಹ್ಯಾಝೆಲ್ನಟ್. ಅದೇ ರೀತಿಯಲ್ಲಿ ಅರ್ಬೇನ್ ರೂಪಾಂತರ ಕೋರ್ಸ್ ಗ್ರೇ, ಸೈಬರ್ ವೈಟ್, ಬ್ರೂಕ್ಲಿನ್ ಬ್ಲಾಕ್ ಮತ್ತು ಇಂಡಿಗೋ ಮೆಟಾಲಿಕ್ ಬ್ಲೂ ಸೇರಿದಂತೆ ಆಕರ್ಷಕ 4 ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: 2024ರ ಬಜಾಜ್ ಚೇತಕ್ ಪ್ರೀಮಿಯಂ ರೆಟ್ರೊ ಲುಕ್, ಮೆಟಲ್ ಬಾಡಿ ಮತ್ತು ಓಹ್-ಸೋ-ಕಾಂಫರ್ಟೆಬಲ್ ಸೀಟ್ ಅನ್ನು ಉಳಿಸಿಕೊಂಡು ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ. ನವೀಕರಣಗಳೊಂದಿಗೆ ಅಗ್ಗದ ಬೆಲೆಗೆ ಬಜಾಜ್ ಚೇತಕ್ ಇ-ಸ್ಕೂಟರ್ ಬಿಡುಗಡೆಯಾಗಿರುವುದು ಗ್ರಾಹಕರಿಗೆ ಖುಷಿ ತಂದಿದೆ. ಅತ್ಯಾಧುನಿಕ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಮುಂಬರುವ ದಿನಗಳಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೆಚ್ಚಿನ ಬೇಡಿಕೆ ಬಂದರೂ ಅಚ್ಚರಿಯಿಲ್ಲ.

More from DriveSpark

Article Published On: Tuesday, January 16, 2024, 10:00 [IST]
English summary
2024 bajaj chetak electric scooter riding impressions range features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+