Honda Activa e: ಎಲೆಕ್ಟ್ರಿಕ್ ಆಕ್ಟಿವಾ ರಿವ್ಯೂ... ರಿವರ್ಸ್ ಗೇರ್‌ನೊಂದಿಗೆ ಎಂಟ್ರಿ: ಮಸ್ತ್ ಫೀಚರ್ಸ್!
ಹಲವು ವರ್ಷಗಳ ಊಹಾಪೋಹಗಳ ನಂತರ, ಹೋಂಡಾ ಅಂತಿಮವಾಗಿ ಕಳೆದ ನವೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 'ಹೋಂಡಾ ಆಕ್ಟಿವಾ ಇ' (Honda Activa e) ಮತ್ತು 'ಕ್ಯೂಸಿ 1' (QC1) ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ತನ್ನ ಪ್ರಮುಖ ಇಂಧನ ಚಾಲಿತ ಸ್ಕೂಟರ್ ಆಗಿರುವ ಆಕ್ಟಿವಾ ಹೆಸರನ್ನು ಕೈಬಿಡಿದೆ, ಹೋಂಡಾ ತನ್ನ ಇವಿ ವಲಯದಲ್ಲಿ ಕ್ರಾಂತಿಯನ್ನು ತರಲು ಆ ಐಕಾನಿಕ್ ಸ್ಕೂಟರ್ ಹೆಸರನ್ನು ಹಾಗೆಯೇ ಇವಿಗಳಿಗೆ ಬಳಸಿಕೊಂಡಿದೆ. ಬೆಲೆಗಳ ವಿಷಯಕ್ಕೆ ಬಂದರೆ ಆಕ್ಟಿವಾ ಇ ರೂ.1.17 ಲಕ್ಷ ಮತ್ತು ರೋಡ್‌ಸಿಂಕ್ ಡ್ಯುಯೊ ಆವೃತ್ತಿಗೆ ರೂ.1.52 ಲಕ್ಷ (ಎಕ್ಸ್ ಶೋರೂಂ ಬೆಲೆಗಳು) ಬೆಲೆಯಿದೆ.
ಈಗ, ಹೋಂಡಾ ಆಕ್ಟಿವಾ-ಇ ಸ್ಕೂಟರ್ ದೆಹಲಿ, ಮುಂಬೈ ಮತ್ತು ಬೆಂಗಳೂರಿನ ಬೀದಿಗಳಲ್ಲಿ ಬಿಡುಗಡೆಯಾದ ಎರಡು ತಿಂಗಳ ನಂತರ, ನಾವು ಉದ್ಯಾನ ನಗರಿ ಬೆಂಗಳೂರಿನ ಬೀದಿಗಳಲ್ಲಿ ಹೊಸ ಎಲೆಕ್ಟ್ರಿಕ್ ಆಕ್ಟಿವಾವನ್ನು ಸವಾರಿ ಮಾಡಿದ್ದೇವೆ. ಹೊಸ ಹೋಂಡಾ ಆಕ್ಟಿವಾ-ಇ ಸ್ಕೂಟರ್ ಓಡಿಸಿದ ಬಳಿಕ ಅದರ ಸಂಪೂರ್ಣ ರಿವ್ಯೂ ಅನ್ನು ಇಲ್ಲಿ ವಿವರಿಸಿದ್ದೇವೆ.

ವಿನ್ಯಾಸ ಮತ್ತು ವೈಶಿಷ್ಟ್ಯಗಳು: ಹೋಂಡಾ ಆಕ್ಟಿವಾ-ಇ ಡಿಸೈನ್ ನೋಡಿದರೆ ಸ್ವಲ್ಪ ಆಕ್ಟಿವಾದಂತೆ ಕಾಣುತ್ತದೆ, ಅದರ ನಯವಾದ ಬಾಡಿ ಪ್ಯಾನೆಲ್‌ಗಳು ಆಕ್ಟೀವಾದ ಫ್ಯೂಚರಿಸ್ಟಿಕ್ ಡಿಸೈನ್‌ನಂತೆ ಕಾಣುತ್ತದೆ. ಹೋಂಡಾ ಆಕ್ಟಿವಾ-ಇ ಮುಂಭಾಗವು ತೀಕ್ಷ್ಣವಾಗಿದ್ದು, ಎಲ್‌ಇಡಿ ಹೆಡ್‌ಲೈಟ್ ಮತ್ತು ಮುಂಭಾಗದ ಇಂಡಿಕೇಟರ್‌ಗಳು ಅದರ ಏಪ್ರನ್‌ನ ಕೆಳಗೆ ನೀಡಲಾಗಿದೆ. ಇದರ ಕೆಳಗೆ ಬಾಡಿ-ಕಲರ್ ಫ್ರಂಟ್ ಫೆಂಡರ್, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು 12-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ ನೀಡಲಾಗಿದೆ.
ಬದಿಗಳಿಂದ, ಡೈಮಂಡ್-ಕಟ್ ಅಲಾಯ್ ವೀಲ್‌ಗಳ ಹೊರತಾಗಿ ಆಕ್ಟಿವಾ-ಇ ಬ್ಯಾಡ್ಜಿಂಗ್ ಹೊಂದಿರುವ ಸೈಡ್ ಪ್ಯಾನೆಲ್‌ಗಳು, ಪಿಲಿಯನ್‌ಗಾಗಿ ಫ್ಲಶ್ ಫುಟ್‌ರೆಸ್ಟ್‌ಗಳು, ಡ್ಯುಯಲ್-ಟೋನ್ ಸೀಟ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಪೀಸ್ ಗ್ರಾಬ್‌ಹ್ಯಾಂಡಲ್ ನೀಡಲಾಗಿದೆ. ಹಿಂಭಾಗದ ಸಸ್ಪೆನ್ಷನ್ ಅನ್ನು ಸ್ವಿಂಗ್‌ಆರ್ಮ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಸಂಯೋಜಿಸಲಾಗಿದೆ.

ಹಾಗೆಯೇ ಹಿಂಭಾಗದಲ್ಲಿ ಎಲ್‌ಇಡಿ ಲೈಟಿಂಗ್ ಸೆಟಪ್ ಆಕ್ಟಿವಾ-ಇ ಯ ಫ್ಯೂಚರಿಸ್ಟಿಕ್ ಡಿಸೈನ್ ಅನ್ನು ನಿಜವಾಗಿಯೂ ಎತ್ತಿ ತೋರಿಸುತ್ತದೆ. ಆಕ್ಟಿವಾ-ಇ ಸ್ಕೂಟರ್ ಪರ್ಲ್ ಶಾಲೋ ಬ್ಲೂ, ಪರ್ಲ್ ಸೆರೆನಿಟಿ ಬ್ಲೂ, ಪರ್ಲ್ ಮಿಸ್ಟಿ ವೈಟ್, ಮ್ಯಾಟ್ ಫಾಗ್ಗಿ ಸಿಲ್ವರ್ ಮೆಟಾಲಿಕ್ ಮತ್ತು ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಎಂಬ ಐದು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಿಸಲಾಗಿದೆ.
ಟಾಪ್ - ಸ್ಪೆಕ್ ಹೋಂಡಾ ಆಕ್ಟಿವಾ-ಇ ದೊಡ್ಡ 7-ಇಂಚಿನ ಕಲರ್ಡ್ LCD (ಬೇಸ್ ವೇರಿಯೆಂಟ್ 5 - ಇಂಚಿನ ಘಟಕದೊಂದಿಗೆ ಬರುತ್ತದೆ) ಅನ್ನು ಹೊಂದಿದೆ. ಇದನ್ನು ಎಡಭಾಗದ ಸ್ವಿಚ್‌ಗೇರ್‌ನಲ್ಲಿರುವ ಜಾಯ್‌ಸ್ಟಿಕ್ ಮತ್ತು ಬಟನ್‌ಗಳಿಂದ ನಿಯಂತ್ರಿಸಬಹುದು. ಸ್ಕ್ರೀನ್ ಬ್ಲೂಟೂತ್ ಸಂಪರ್ಕವನ್ನು ಸಹ ಸಪೋರ್ಟ್ ಮಾಡುತ್ತದೆ.

ಇದು ಟರ್ನ್ - ಬೈ - ಟರ್ನ್ ನ್ಯಾವಿಗೇಷನ್ (ಅಂತರ್ ನಿರ್ಮಿತ ಸ್ವಾಪಿಂಗ್ ಸ್ಟೇಷನ್ ಲೊಕೇಶನ್‌ಗಳೊಂದಿಗೆ) ಕರೆ ಮತ್ತು SMS ನೋಟಿಫಿಕೇಷನ್‌ನೊಂದಿಗೆ ಜಿಯೋಫೆನ್ಸಿಂಗ್ ಮತ್ತು ಹೋಂಡಾದ ರೋಡ್‌ಸಿಂಕ್ ಡ್ಯುಯೊ ಅಪ್ಲಿಕೇಶನ್‌ನ ಸಹಾಯದಿಂದ ಸಕ್ರಿಯಗೊಳಿಸಲಾದ ಇತರ ವೈಶಿಷ್ಟ್ಯಗಳನ್ನು ಅನುಮತಿಸುತ್ತದೆ. ಡೇ & ನೈಟ್ ಮೋಡ್‌ಗಳು ಉತ್ತಮವಾಗಿದ್ದರೂ, ಇದು ಹೆಚ್ಚಿನ ರೆಸಲ್ಯೂಶನ್ ಪ್ಯಾನಲ್ ಆಗಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು.
ಟಾಪ್-ಸ್ಪೆಕ್ ಮಾದರಿಯು ಹೋಂಡಾದ ಸ್ಮಾರ್ಟ್ ಕೀ ಸೆಟಪ್ ಅನ್ನು ಸಹ ಪಡೆಯುತ್ತದೆ, ಅದು ನಿಮ್ಮ ಆಕ್ಟಿವಾ ಇ ಅನ್ನು ದೂರದಿಂದಲೇ ಹುಡುಕಲು, ಅನ್‌ಲಾಕ್ ಮಾಡಲು ಅಥವಾ ಸುರಕ್ಷಿತವಾಗಿರಿಸಲು ಅನುವುಮಾಡಿಕೊಡುತ್ತದೆ. ಪ್ರಾಯೋಗಿಕತೆಯ ವಿಷಯಕ್ಕೆ ಬಂದರೆ, ಮುಂಭಾಗದ ಏಪ್ರನ್‌ನಲ್ಲಿ ನಿಮ್ಮ ಫೋನ್ ಅನ್ನು ಇಡಬಹುದಾದ ಎರಡು ಸಣ್ಣ ಶೇಖರಣಾ ಸ್ಥಳಗಳಿವೆ.

USB-C ಟೈಪ್ ಚಾರ್ಜಿಂಗ್ ಪೋರ್ಟ್ ಮತ್ತು ಲಗೇಜ್ ಹುಕ್ ಕೂಡ ಇದೆ. ಸೀಟನ್ನು ತೆರೆದರೆ ಒಳಗೆ ತೆಗೆದು ಹಾಕಬಹುದಾದ ಬ್ಯಾಟರಿಗಳು ಮತ್ತು ಈಗಾಗಲೇ ಟೂಲ್ ಕಿಟ್ ಅನ್ನು ಹೋಸ್ಟ್ ಮಾಡುವ ಮತ್ತು ಬಹುಶಃ ಸಣ್ಣ ನೀರಿನ ಬಾಟಲಿಯನ್ನು ಹಿಡಿದಿಟ್ಟುಕೊಳ್ಳುವ ಸಣ್ಣ ಶೇಖರಣಾ ಸ್ಥಳವನ್ನು ನೀಡಲಾಗಿದೆ. ನೀವು ಪ್ರಾಯೋಗಿಕ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಹುಡುಕಾಟದಲ್ಲಿದ್ದರೆ ಇದು ಬೆಸ್ಟ್ ಎಂದು ಹೇಳಬಹುದು.
ಮೋಟಾರ್ ಮತ್ತು ಮೆಕ್ಯಾನಿಕಲ್ ಬಿಟ್‌ಗಳು: ಹೋಂಡಾ ಆಕ್ಟಿವಾ-ಇ ಎರಡು ತೆಗೆದು ಹಾಕಬಹುದಾದ ಮತ್ತು ಬದಲಾಯಿಸಬಹುದಾದ 1.5kWh ಬ್ಯಾಟರಿ ಪ್ಯಾಕ್‌ಗಳಿಂದ ಚಾಲಿತವಾಗಿದ್ದು, ಇವು ಸೀಟಿನ ಕೆಳಗೆ ಕುಳಿತುಕೊಳ್ಳುತ್ತವೆ. (ನಿಮ್ಮ ಅಂಡರ್‌ಸೀಟ್ ಸ್ಟೋರೇಜ್ ಜಾಗವನ್ನು ಕಸಿದುಕೊಳ್ಳುತ್ತವೆ). ಆಕ್ಟಿವಾ-ಇ ಒಂದೇ ಚಾರ್ಜ್‌ನಲ್ಲಿ 102 ಕಿ.ಮೀ ಓಡುತ್ತದೆ ಎಂದು ಹೋಂಡಾ ಹೇಳಿಕೊಂಡಿದೆ.

ಬ್ಯಾಟರಿಯನ್ನು ತೆಗೆದು ಬೇರೊಂದು ಬ್ಯಾಟರಿಯನ್ನು ಹಾಕುವ ಸಮಯವು ಚಾರ್ಜ್ ಮಾಡುವುದಕ್ಕಿಂತ ಹೆಚ್ಚು ವೇಗವಾಗಿದೆ ಎಂಬ ಅಂಶವನ್ನು ಮೆಚ್ಚಬಹುದು, ಬ್ಯಾಟರಿ ಪ್ಯಾಕ್‌ಗಳು ಸ್ವಲ್ಪ ಭಾರವಾಗಿರುತ್ತವೆ. ಹೇಗಿದ್ದರೂ, ಬ್ಯಾಟರಿ ಪ್ಯಾಕ್‌ಗಳು 6kW (8.04bhp) ಗರಿಷ್ಠ ಪವರ್ ಉತ್ಪಾದನೆಯನ್ನು ಹೊರಹಾಕುವ ಸ್ವಿಂಗ್‌ಆರ್ಮ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ಗೆ ಪವರ್ ನೀಡುತ್ತವೆ.
ಇದು ಆಕ್ಟಿವಾ 110 ಮತ್ತು 22Nm ಗರಿಷ್ಠ ಟಾರ್ಕ್‌ನಂತೆಯೇ ಇರುತ್ತದೆ. ಆಕ್ಟಿವಾ-ಇ 60 ಕಿ.ಮೀ/ಗಂಟೆ ವೇಗವನ್ನು 7.3 ಸೆಕೆಂಡುಗಳಲ್ಲಿ ತಲುಪುತ್ತದೆ. 80 ಕಿ.ಮೀ/ಗಂಟೆಯ ಗರಿಷ್ಠ ವೇಗವನ್ನು ತಲುಪಬಲ್ಲದು ಎಂದು ಹೋಂಡಾ ಹೇಳಿಕೊಂಡಿದೆ. ಇಕಾನ್, ಸ್ಟ್ಯಾಂಡರ್ಡ್ ಮತ್ತು ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್‌ಗಳು ಲಭ್ಯವಿದೆ, ಜೊತೆಗೆ ಪಾರ್ಕಿಂಗ್ ಸ್ಥಳಗಳಿಂದ ಹೊರಬರುವುದನ್ನು ಸುಲಭಗೊಳಿಸಲು ರಿವರ್ಸ್ ಮೋಡ್ ಸಹ ನೀಡಲಾಗಿದೆ.

ಹೋಂಡಾ ಆಕ್ಟಿವಾ-ಇ ನಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಅಳವಡಿಸಿದ್ದರೆ, ಹಿಂಭಾಗದಲ್ಲಿ 3-ಹಂತದ ಹೊಂದಾಣಿಕೆ ಮಾಡಬಹುದಾದ ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಮೊನೊಶಾಕ್ ಸೆಟಪ್ ನೀಡಲಾಗಿದೆ. ಆಕ್ಟಿವಾ ಇ 90/90 (ಮುಂಭಾಗ) ಮತ್ತು 110/80 (ಹಿಂಭಾಗ) ಟೈರ್‌ಗಳನ್ನು ಹೊಂದಿರುವ 12-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳನ್ನು ಹೊಂದಿದೆ.
ಬ್ರೇಕಿಂಗ್ ವಿಷಯಕ್ಕೆ ಬಂದರೆ 160 ಎಂಎಂ ಡಿಸ್ಕ್ (ಬೇಸ್ ರೂಪಾಂತರಕ್ಕಾಗಿ ಡ್ರಮ್) ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ನೀಡಲಾಗಿದೆ. ಹೋಂಡಾ ಆಕ್ಟಿವಾ ಇ 1,854 ಎಂಎಂ ಉದ್ದ, 700 ಎಂಎಂ ಅಗಲ ಮತ್ತು 1,125 ಎಂಎಂ ಎತ್ತರ ಮತ್ತು 1,310 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ.

ಆಕ್ಟಿವಾ-ಇ 119 ಕೆ.ಜಿ (ಬೇಸ್ ಡ್ರಮ್ ವೇರಿಯೆಂಟ್ 118 ಕೆ.ಜಿ) ತೂಕ, 171 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 675 ಎಂಎಂ ಉದ್ದದ ಸೀಟನ್ನು ಹೊಂದಿದೆ. ಹೋಂಡಾ ಆಕ್ಟಿವಾ-ಇ ಗೆ 3 ವರ್ಷಗಳು/ 50,000 ಕಿ.ಮೀ (ಯಾವುದು ಮೊದಲು ಬರುತ್ತದೆಯೋ ಅದು) ವಾರೆಂಟಿಯನ್ನು ನೀಡಲಾಗಿದೆ ಎಂದು ಕಂಪನಿ ಹೇಳಿದೆ.
ಹೋಂಡಾ ಆಕ್ಟಿವಾ-ಇ ಒಡಿಸಲು ಹೇಗಿದೆ: ಆಕ್ಟಿವಾ ಇ ತನ್ನ ಇಂಧನ ಚಾಲಿತ ಆಕ್ಟೀವಾಗೆ ಹೋಲಿಸಿದರೆ ಉತ್ತಮವಾಗಿಯೇ ಇದೆ. ಇದು ಸ್ಟ್ಯಾಂಡರ್ಡ್ ರೈಡಿಂಗ್ ಮೋಡ್‌ನಲ್ಲಿ ಸುಗಮ ಸವಾರಿ ಅನುಭವವನ್ನು ನೀಡುತ್ತದೆ. ಸ್ಪೋರ್ಟ್ ಮೋಡ್‌ನಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದೆಯಾದರೂ, ಬ್ಯಾಟರಿಗಳು ಬೇಗನೆ ಖಾಲಿ ಆಗುತ್ತವೆ ಎಂಬುದನ್ನು ಇಲ್ಲಿ ಗಮನಿಸಬೇಕಾದ ಸಂಗತಿ.

ಬೆಂಗಳೂರಿನಲ್ಲಿ ಎಲ್ಲಾ ಮೋಡ್‌ಗಳ ಮಿಶ್ರ ಬಳಕೆಯಲ್ಲಿ (ಮೂರು ವಿಧಾನಗಳಲ್ಲಿ ಸವಾರಿ ಮಾಡಿದಾಗ), ಆಕ್ಟಿವಾ-ಇ ಬ್ಯಾಟರಿ ಪ್ಯಾಕ್‌ಗಳು ಬೇಗನೆ ಖಾಲಿಯಾಗುತ್ತವೆ. ಹಾಗಾಗಿ ಪ್ರತಿ 70 ರಿಂದ 75 ಕಿ.ಮೀ ಒಡಿಸಿದ ಬಳಿಕ ಸ್ವಾಪ್ ಪಾಯಿಂಟ್‌ಗಳನ್ನು ತಲುಪಲು ನಾವು ಸೂಚಿಸುತ್ತೇವೆ. ವಿನಿಮಯ ಪ್ರಕ್ರಿಯೆಯು ಯಾವುದೇ ತೊಂದರೆಯಿಲ್ಲದೆ ಇದ್ದರೂ, ಬ್ಯಾಟರಿ ಪ್ಯಾಕ್‌ಗಳು ಸುಮಾರು 10-15 ಕಿಲೋಗ್ರಾಂಗಳಷ್ಟು ತೂಗುತ್ತವೆ.
ಆಕ್ಟಿವಾ-ಇ ಸೀಟು ಸಾಕಷ್ಟು ಆರಾಮದಾಯಕವಾಗಿದ್ದು, ಹಿಂಭಾಗದಲ್ಲಿರುವ ವ್ಯಕ್ತಿಗೆ ಹೆಚ್ಚುವರಿ ಲಗೇಜ್ ಇದ್ದರೂ ಸಹ ಇಬ್ಬರು ಸುಲಭವಾಗಿ ಸ್ಕೂಟರ್ ಸವಾರಿ ಮಾಡಲು ಸಿಟ್ ಅನುವು ಮಾಡಿಕೊಡುವಷ್ಟು ಉದ್ದವಾಗಿದೆ. ಸೀಟು ಸಾಕಷ್ಟು ಕಡಿಮೆ ಎತ್ತರ ಇರುವುದರಿಂದ ಸಾಮಾನ್ಯ ಭಾರತೀಯ ಸವಾರನು ತಮ್ಮ ಪಾದಗಳನ್ನು ನೆಲದ ಮೇಲೆ ಸುಲಭವಾಗಿ ಇಡಲು ಅನುವು ಮಾಡಿಕೊಡುತ್ತದೆ.

ಸೀಟು ಚೆನ್ನಾಗಿ ಪ್ಯಾಡ್ ಮಾಡಲಾಗಿದೆ ಮತ್ತು ಆರಾಮದಾಯಕವಾಗಿದೆ, ಆದರೆ ಆಕ್ಟಿವಾ ಇ ಸಸ್ಪೆನ್ಷನ್ ಸೆಟಪ್ ಸ್ವಲ್ಪ ಕಡಿಮೆ ಗಟ್ಟಿಯಾಗಿದ್ದರೆ ಇನ್ನೂ ಉತ್ತಮವಾಗುತ್ತಿತ್ತು. ಆಕ್ಟಿವಾ ಇ ಬ್ರೇಕ್‌ಗಳು ಚೆನ್ನಾಗಿ ಕೆಲಸ ಮಾಡುತ್ತವೆ, 12-ಇಂಚಿನ ವೀಲ್‌ಗಳು ನಮ್ಮ ಬೀದಿಗಳಲ್ಲಿ ಎಲೆಕ್ಟ್ರಿಕ್ ಆಕ್ಟಿವಾದ ಸ್ಥಿರ ಸ್ವರೂಪಕ್ಕೆ ಮೆರುಗು ನೀಡುತ್ತವೆ.
ಜಾಯ್‌ಸ್ಟಿಕ್ ಮತ್ತು ಬಟನ್‌ಗಳೊಂದಿಗೆ ಡಿಸ್ಪ್ಲೇ ಬಳಸಲು ಸುಲಭವಾಗಿದೆ. ಅಗತ್ಯವಿದ್ದಾಗ ಸಾಕಷ್ಟು ವಿವರಗಳನ್ನು ನೀಡುತ್ತದೆ. ಆದರೂ, ಡಿಸ್ಪ್ಲೇ ಮತ್ತು ಸ್ಕೂಟರ್ ಅನ್ನು ಪ್ರಾರಂಭಿಸಲು ಸ್ವಿಚ್‌ಗೇರ್ ಎರಡನ್ನೂ ಬಳಸುವುದು ನೀವು ಒಗ್ಗಿಕೊಳ್ಳಬೇಕಾದ ವಿಷಯವಾಗಿದೆ. ನೀವು ಹೊಸ ವಾಹನವನ್ನು ಬಳಸುವಾಗ ಇದು ಸಾಮಾನ್ಯ ವಿಷಯ ಹೌದಲ್ಲವೇ?

ಅಂತಿಮ ಅನಿಸಿಕೆ: ಹೋಂಡಾ ತನ್ನ ಆಕ್ಟಿವಾ-ಇ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಐಕಾನಿಕ್ ಆಕ್ಟಿವಾ ಹೆಸರನ್ನು ಹಾಕಿರುವುದು ವಿಶೇಷ. ಹಳೇ ಹೆಸರಿನೊಂದಿಗೆ ಹೋಂಡಾ ಆಕ್ಟಿವಾ-ಇ ಭವಿಷ್ಯದಿಂದ ಬಂದ ಆಕ್ಟಿವಾದಂತೆ ಕಾಣುತ್ತದೆ. ಆದರೆ, ಈ ಎಲೆಕ್ಟ್ರಿಕ್ ಆಕ್ಟಿವಾ ಆವೃತ್ತಿಗಾಗಿ ನಾವು ನಿಜವಾಗಿ ಕಾಯಬೇಕೇ ಎಂದು ಆಶ್ಚರ್ಯಪಡುವಂತಹ ಕೆಲವು ನ್ಯೂನತೆಗಳನ್ನು ಸಹ ಹೊಂದಿದೆ.
ಏಕೆಂದರೆ ಸ್ಟೋರೇಜ್ ಕೊರತೆ ಮತ್ತು ಹೋಂಡಾ ಆಕ್ಟಿವಾ ಇ ಅನ್ನು ಮನೆಯಲ್ಲಿ ಚಾರ್ಜ್ ಮಾಡಲು ಅಸಮರ್ಥತೆಯು ದೊಡ್ಡ ಸಮಸ್ಯೆಯಂತೆ ಭಾಸವಾಗುತ್ತದೆ. ನೀವು ಹೋಂಡಾ ಅಭಿಮಾನಿಯಾಗಿದ್ದರೆ ಮತ್ತು ಎಲೆಕ್ಟ್ರಿಕ್ ಆಕ್ಟಿವಾಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದರೆ, ನೀವು ಇದನ್ನು ಖರೀದಿಸುವಂತೆ ನಾವು ಸೂಚಿಸುತ್ತೇವೆ. ಆದರೆ ನಿಮ್ಮ ನಿತ್ಯ ಸಂಚಾರದ ಮಾರ್ಗಗಳಲ್ಲಿ ಕೆಲವು ಬ್ಯಾಟರಿ ಸ್ವಾಪ್ ಸ್ಟೇಷನ್‌ಗಳನ್ನು ಹೊಂದಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.


Click it and Unblock the Notifications








