ನಾಲ್ಕು ಸಾವಿರ ಟೊಯೊಟಾ ಎಟಿಯೋಸ್ ಲಿವಾ ಬುಕ್ಕಿಂಗ್

ಲಿವಾ ಕಾರಿನ ಬೇಡಿಕೆ ನಿಧಾನಗತಿಯಲ್ಲಿರಲು ಎರಡು ಕಾರಣಗಳಿವೆ. ಎಟಿಯೋಸ್ ಲಿವಾ ಕೇವಲ ಪೆಟ್ರೊಲ್ ಆವೃತ್ತಿಗಳಲ್ಲಿ ದೊರಕುತ್ತಿದೆ. ಎರಡನೆಯ ಕಾರಣವೆಂದರೆ ಹೆಚ್ಚಿನ ಗ್ರಾಹಕರು ಪೆಟ್ರೊಲ್ ಆವೃತ್ತಿ ಖರೀದಿಸಲು ಹಿಂದು ಮುಂದು ನೋಡುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಪೆಟ್ರೊಲ್ ದರ ಗಗನಕ್ಕೇರುತ್ತಿರುವುದೇ ಇದಕ್ಕೆ ಕಾರಣವಾಗಿದೆ.
ಯಾರು ಎರಡುವರೆ ಸಾವಿರ ಕಿ.ಮೀ.ಗಿಂತ ಕಡಿಮೆ ಪ್ರಯಾಣಿಸುತ್ತಾರೋ ಅವರಿಗೆ ಪೆಟ್ರೊಲ್ ಆವೃತ್ತಿ ಸೂಕ್ತವಾಗಿದೆ ಎಂದು ಕಂಪನಿ ಈ ಹಿಂದೆ ಹೇಳಿತ್ತು. ಜೊತೆಗೆ ಕಂಪನಿಯು ಎಟಿಯೋಸ್ ಲಿವಾದ ಡೀಸಲ್ ಆವೃತ್ತಿ ಹೊರತರಲಿದೆ ಎಂದು ಕೆಲವು ವರದಿಗಳು ಹೇಳಿವೆ. ಆದರೆ ಬೇಡಿಕೆಗೆ ತಕ್ಕಂತೆ ಉತ್ಪಾದನಾ ಪ್ರಮಾಣ ಇಲ್ಲದಿರುವುದರಿಂದ ನೂತನ ಡೀಸಲ್ ಕಾರು ಶೀಘ್ರದಲ್ಲಿ ರಸ್ತೆಗಿಳಿಯುವ ಸಾಧ್ಯತೆಗಳಿಲ್ಲ.
ಸದ್ಯ ಕಂಪನಿಯು ಜನಪ್ರಿಯ ನೂತನ ಟೊಯೊಟಾ ಇನ್ನೋವಾಕ್ಕೆ ಹೆಚ್ಚಿನ ಗಮನ ನೀಡುತ್ತಿದೆ. ಈ ಕಾರು ಮುಂದಿನ ವರ್ಷದ ಜೂನ್-ಜುಲೈ ವೇಳೆಗೆ ರಸ್ತೆಗಿಳಿಯುವ ನಿರೀಕ್ಷೆಯಿದೆ.
ಲಿವಾ ಮಾಹಿತಿ: ನೂತನ ಹ್ಯಾಚ್ ಬ್ಯಾಕ್ ಲಿವಾ ಶಕ್ತಿಶಾಲಿ 1197 ಸಿಸಿಯ 16 ಕವಾಟದ ಡಿಒಎಚ್ ಸಿ ಪೆಟ್ರೊಲ್ ಎಂಜಿನ್ ಹೊಂದಿದೆ. ಇದು 5600 ಆರ್ ಪಿಎಂಗೆ 78.9 ಹಾರ್ಸ್ ಪವರ್ ನೀಡುತ್ತದೆ. ಈ ಕಾರು 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಟೊಯೊಟಾ ಎಟಿಯೋಸ್ ಲಿವಾ ಪ್ರತಿಲೀಟರ್ ಇಂಧನಕ್ಕೆ 18.31 ಕಿ.ಮೀ. ಮೈಲೇಜ್ ನೀಡುತ್ತದೆ. ಎಕ್ಸ್ ಶೋರೂಂನಲ್ಲಿ ಇದರ ದರ 3.99 ಲಕ್ಷ ರು. ನಿಂದ 5.99 ಲಕ್ಷ ರು.ವರೆಗಿದೆ


Click it and Unblock the Notifications








