ಡಿ-ಕಂಪನಿಯಲ್ಲಿ ದರ್ಶನ್ ತೂಗುದೀಪ ಆಟೋ ಫೋಟೊ

ಡಿ ಕಂಪನಿ ಹೇಳುವ ಪ್ರಕಾರ ಶಂಕರ್ ನಾಗ್ ನಂತರ ಆಟೋ ಚಾಲಕರ ಭವಣೆಗಳ ಬಗ್ಗೆ ಕಾಳಜಿ ತೋರಿಸುವ ನಟ ದರ್ಶನ್. ಇದನ್ನು ಹೆಚ್ಚಿನ ಆಟೋ ಚಾಲಕರು ಒಪ್ಪುತ್ತಾರೆ.
ರಿಕ್ಷಾಗಳ ಟೆಕ್ ಮಾಹಿತಿ: ನಾಲ್ಕು ಸ್ಟ್ರೋಕ್ ನ ಬಜಾಜ್ ಆಟೋ ರಿಕ್ಷಾಗಳಿಗಿಂದು ಅತ್ಯಧಿಕ ಬೇಡಿಕೆಯಿದೆ. ಹೆಚ್ಚಿನ ರಿಕ್ಷಾಗಳು ಸುಮಾರು 173 ಸಿಸಿ ಪವರ್ ನೀಡುತ್ತವೆ. ಬಜಾಜ್ ಆಟೋ ರಿಕ್ಷಾಗಳು ಸಿಂಗಲ್ ಸಿಲಿಂಡರ್, ಫೋರ್ಸ್ಡ್ ಏರ್ ಕೂಲ್ಡ್ ಎಂಜಿನ್ ಹೊಂದಿವೆ.
ಇಲ್ಲಿ ವಿಷಯ ಅದಲ್ಲ. ನಾವೀಗ ಮಾತನಾಡಬೇಕಿರುವುದು ಬೆಂಗಳೂರು ಆಟೋ ರಿಕ್ಷಾಗಳ ಬಗ್ಗೆ. ಮೊದಲನೆಯದಾಗಿ ಬೆಂಗಳೂರಿನಲ್ಲಿ ಆಟೋ ರಿಕ್ಷಾಗಳ ಸಂಖ್ಯೆ ಹೆಚ್ಚಾಗಲಿದೆ. ಯಾಕೆಂದರೆ 40 ಸಾವಿರ ಹೆಚ್ಚುವರಿ ಆಟೋಗೆ ಪರ್ಮಿಟ್ ಸಿಕ್ಕಿದೆ. ಎರಡನೆಯದಾಗಿ ಆಟೋ ರಿಕ್ಷಾ ಚಾಲಕರಿಂದ ಏನಾದರೂ ಕಿರಿಕಿರಿಯಾದರೆ ಎಸ್ಎಂಎಸ್ ಮೂಲಕ ದೂರು ಸಲ್ಲಿಸಬಹುದು.
ದಿನಾ ಹೊಸ ಕಾರು, ಹಳೆಯಕಾರುಗಳ ಸುದ್ದಿಗಳ ಓದುತ್ತಿದ್ದವರಿಗೆ ಇವತ್ತು ಚೂರು ಭಿನ್ನ ಆಮಂತ್ರಣ. ಬೆಂಗಳೂರು ರಿಕ್ಷಾ ಮತ್ತು ರಿಕ್ಷಾ ಚಾಲಕರ ಕುರಿತು ನೀವ್ಯಾಕೆ ಇಲ್ಲಿ ಚರ್ಚಿಸಬಾರದು?


Click it and Unblock the Notifications








