ಬ್ಯಾಟರಿ ಚಾಲಿತ ವಾಹನ ಕ್ಷೇತ್ರದಲ್ಲಿ ಹೊಸ ಮಿಂಚು ಪರಿಸರ ಸ್ನೇಹಿ 'ಈ ರಿಕ್ಷಾ'

By Nagaraja

ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪರ್ಯಾಯ ಇಂಧನ ಹಾಗೂ ಪರ್ಯಾಯ ಶಕ್ತಿಯ ಮೂಲಗಳನ್ನು ಆವಿಷ್ಕರಿಸುವ ಪ್ರಯತ್ನಗಳು ಸಾಕಷ್ಟು ನಡೆಯುತ್ತಲಿವೆ. ಈ ಪ್ರಯತ್ನದ ಭಾಗವಾಗಿ ಬ್ಯಾಟರಿ ಚಾಲಿತ ಹೊಸ "ಈ ರಿಕ್ಷಾ" ವನ್ನು ಆವಿಷ್ಕರಿಸಿದ್ದು, ಇನ್ನು ಮುಂದೆ ದೇಶದ ಎಲ್ಲಾ ಮೆಟ್ರೋ ಸಿಟಿಗಳಲ್ಲಿ ಬ್ಯಾಟರಿ ಚಾಲಿತ ಪರಿಸರ ಸ್ನೇಹಿ ಆಟೋಗಳು ಸಂಚರಿಸುವ ಕಾಲ ಸನ್ನಿಹಿತವಾಗಿದೆ.

ಬ್ಯಾಟರಿ ಪವರ್‍ ನಿಂದಲೇ ಚಲಿಸುವ 'ಈ ರಿಕ್ಷಾ' ಪರಿಸರ ಸ್ನೇಹಿ ತಂತ್ರಜ್ಞಾನದೊಂದಿಗೆ ರೂಪುಗೊಂಡಿದೆ. ಇದರ ಹೆಸರು 'ಈ ರಿಕ್ಷಾ'. ಬ್ಯಾಟರೀ ಚಾಲಿತ ಈ ವಾಹನ ಕೇವಲ 8 ಗಂಟೆಗಳ ಚಾರ್ಜ್‍ನಿಂದ 100 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಹೌದಾ, ಹಾಗಾದ್ರೆ ಇದರ ಸೀಟಿಂಗ್ ಸಾಮರ್ಥ್ಯ ಕಡಿಮೆ ಇರಬೇಕು ಎನ್ನುವ ನಿಮ್ಮ ಅನುಮಾನಕ್ಕೆ ಇದು ಬಹಳ ವಿರುದ್ದವಾಗಿ ಉತ್ತರ ನೀಡುತ್ತದೆ.

ಬ್ಯಾಟರಿ ಚಾಲಿತ ವಾಹನ ಕ್ಷೇತ್ರದಲ್ಲಿ ಹೊಸ ಮಿಂಚು ಪರಿಸರ ಸ್ನೇಹಿ 'ಈ ರಿಕ್ಷಾ'

450 ಕೆ.ಜಿ ತೂಕವಿರುವ ಈ ವಾಹನ 4+1 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. 1.25 ಲಕ್ಷ ರೂಪಾಯಿಗೆ ಮಾಲಿಕರ ಕೈಸೇರಲಿರುವ ಈ 'ಈ ರಿಕ್ಷಾ' ಕೇವಲ 8 ಯೂನಿಟ್ ವಿದ್ಯುತ್‍ನ್ನು ಬಳಸಿಕೊಳ್ಳುತ್ತದೆ. ಅಲ್ಲದೆ, ಕೇವಲ 65 ಪೈಸೆಗೆ ಒಂದು ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಬ್ಯಾಟರಿ ಚಾಲಿತ ವಾಹನ ಕ್ಷೇತ್ರದಲ್ಲಿ ಹೊಸ ಮಿಂಚು ಪರಿಸರ ಸ್ನೇಹಿ 'ಈ ರಿಕ್ಷಾ'

ಈಗ ಒಂದು ಆಟೋ ರಿಕ್ಷಾವನ್ನು ನಿರ್ವಹಣೆ (ಮೇಂಟೇನ್) ಮಾಡಲು ಚಾಲಕರಿಗೆ ಪ್ರತಿನಿತ್ಯ ಒಂದು ಕಿಲೋಮೀಟರ್‍ ಗೆ 5 ರೂಪಾಯಿ ತಗಲುತ್ತದೆ. ಆದರೆ, 'ಈ ರಿಕ್ಷಾ' ದಲ್ಲಿ ಕೇವಲ 65 ಪೈಸೆ ಮಾತ್ರ ಸಾಕು. ಒಂದು ಬಾರಿ ಚಾರ್ಜ್ ಮಾಡಿದ ಈ ಆಟೋದ ಬ್ಯಾಟರಿಯಿಂದ 100 ಕಿಲೋಮೀಟರ್‍ ಗಳಷ್ಟು ಮೈಲೇಜ್ ಪಡೆಯಬಹುದು.

ಬ್ಯಾಟರಿ ಚಾಲಿತ ವಾಹನ ಕ್ಷೇತ್ರದಲ್ಲಿ ಹೊಸ ಮಿಂಚು ಪರಿಸರ ಸ್ನೇಹಿ 'ಈ ರಿಕ್ಷಾ'

ಇತ್ತೀಚಿನ ದಿನಗಳಲ್ಲಿ ಬ್ಯಾಟರಿ ರಿಚಾರ್ಜ್ ಪಾಯಿಂಟ್‍ಗಳು ನಗರದಲ್ಲಿ ಹೆಚ್ಚಾಗಿದ್ದು ಬ್ಯಾಟರಿ ಚಾರ್ಜಿಂಗ್ ಸ್ಟೇಷನ್‍ಗಳಲ್ಲಿ ಭೇಟಿ ನೀಡಿದರೆ ಸಾಕು. ಮುಂದಿನ ದಿನಗಳಲ್ಲಿ ಬ್ಯಾಟರಿ ಚಾಲಿತ "ಈ ಲೋಡರ್ ಕಾರ್ಗೋ" ಹಾಗೂ "ಈ ಫೂಡ್ ಕಾರ್ಟ್" ನ್ನು ಮಾರುಕಟ್ಟೆಗೆ ಪರಿಚಯಗೊಳಿಸುವ ಯೋಜನೆ ಎಕ್ಸ್ಟ್ರಾಮೈಲ್ ಗ್ಯಾಸ್ ಟೆಕ್‍ನ ಉದ್ದೇಶವಾಗಿದೆ.

ಬ್ಯಾಟರಿ ಚಾಲಿತ ವಾಹನ ಕ್ಷೇತ್ರದಲ್ಲಿ ಹೊಸ ಮಿಂಚು ಪರಿಸರ ಸ್ನೇಹಿ 'ಈ ರಿಕ್ಷಾ'

ಮುಂದಿನ ದಿನಗಳಲ್ಲಿ 2 ಸ್ಟ್ರೋಕ್ ಆಟೋಗಳ ಸಂಚಾರ ನಿರ್ಭಂಧಗೊಳ್ಳಲಿದ್ದು, ಅಂತಹ ಆಟೋ ಚಾಲಕರೆಲ್ಲರೂ ಬ್ಯಾಟರಿ ಚಾಲಿತ "ಈ ರಿಕ್ಷಾ" ದತ್ತ ಆಕರ್ಷಣೆಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿವೆ. 2 ಸ್ಟ್ರೋಕ್ ಆಟೋ ಮಾಲೀಕರಿಗೆ ಅನುಕೂಲವಾಗುವಂತಹ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಎಕ್ಸ್ಟ್ರಾಮೈಲ್ ಗ್ಯಾಸ್ ಟೆಕ್ ಕಾರ್ಯೋನ್ಮುಖವಾಗಿದೆ.

ಬ್ಯಾಟರಿ ಚಾಲಿತ ವಾಹನ ಕ್ಷೇತ್ರದಲ್ಲಿ ಹೊಸ ಮಿಂಚು ಪರಿಸರ ಸ್ನೇಹಿ 'ಈ ರಿಕ್ಷಾ'

ಈ ಹೊಸ ಕ್ರಾಂತಿಕಾರಿ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ವಾಹನಗಳನ್ನು ಎಕ್ಸ್ಟ್ರಾಮೈಲ್ ಗ್ಯಾಸ್ ಟೆಕ್‍ನ ನಿರ್ದೇಶಕರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಎಕ್ಸ್ಟ್ರಾಮೈಲ್ ಗ್ಯಾಸ್ ಟೆಕ್‍ನ ಮನೀಶ್ ದಾಸಡಿಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Most Read Articles

Kannada
English summary
E-Rickshaw, Road King, Set to make a mark on Indian roads
Story first published: Wednesday, April 20, 2016, 17:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X