ಇ-ಅಲ್ಫಾ ಮಿನಿ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆ ಮಾಡಿದ ಮಹೀಂದ್ರಾ

Written By:

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಮತ್ತು ಮಾರಾಟ ಹೊಸ ಸಂಚಲನ ಸೃಷ್ಠಿಸಿರುವ ಮಹೀಂದ್ರಾ ಸಂಸ್ಥೆಯು, ಇದೀಗ ಹೊಸ ಮಾದರಿಯ ಇ-ಅಲ್ಫಾ ಮಿನಿ ಎಲೆಕ್ಟ್ರಿಕ್ ರಿಕ್ಷಾ ಉತ್ಪನ್ನಗಳನ್ನು ಪರಿಚಯಿಸುತ್ತಿದೆ.

ಇ-ಅಲ್ಫಾ ಮಿನಿ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆ ಮಾಡಿದ ಮಹೀಂದ್ರಾ

ಜೀರೋ ಎಮಿಷನ್ ವಾಹನಗಳ ಉತ್ಪಾದನೆಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ನಗರ ಪ್ರದೇಶಗಳಿಗೆ ಸರಿಹೊಂದಬಹುದಾದ ಎಲೆಕ್ಟ್ರಿಕ್ ರಿಕ್ಷಾ ಮಾದರಿಗಳು ಪರಿಚಯಿಸುತ್ತಿರುವ ಮಹೀಂದ್ರಾ, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.1.12 ಲಕ್ಷಕ್ಕೆ ಇ-ಅಲ್ಫಾ ರಿಕ್ಷಾ ಆವೃತ್ತಿಯನ್ನು ಹೊರತಂದಿದೆ.

ಇ-ಅಲ್ಫಾ ಮಿನಿ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆ ಮಾಡಿದ ಮಹೀಂದ್ರಾ

ಪ್ರಸ್ತುತ ಆಟೋ ಮಾದರಿಗಳಿಂತ ಉತ್ತಮ ಹೊರ ವಿನ್ಯಾಸ ಮತ್ತು ಕವಚವನ್ನು ಹೊಂದಿರುವ ಇ-ಅಲ್ಫಾ ಮಾದರಿಗಳಲ್ಲಿ ಚಾಲಕ ಸೇರಿದಂತೆ ಒಟ್ಟು 4 ಜನ ಆರಾಮದಾಯಕವಾಗಿ ಪ್ರಯಾಣ ಮಾಡುವಂತೆ ಕ್ಯಾಬಿನ್ ವಿಸ್ತಾರವನ್ನು ಹೆಚ್ಚಿಸಲಾಗಿದೆ.

ಇ-ಅಲ್ಫಾ ಮಿನಿ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆ ಮಾಡಿದ ಮಹೀಂದ್ರಾ

ಜೊತೆಗೆ ಇ-ಅಲ್ಫಾ ಮಾದರಿಗಳಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ 120ಎಹೆಚ್ ಬ್ಯಾಟರಿ ಒದಗಿಸಲಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದ್ದಲ್ಲಿ 85 ಕಿ.ಮಿ ಮೈಲೇಜ್ ಒದಗಿಸುತ್ತವೆ ಎಂದು ಮಹೀಂದ್ರಾ ಸಂಸ್ಥೆ ಹೇಳಿಕೊಂಡಿದೆ.

ಇ-ಅಲ್ಫಾ ಮಿನಿ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆ ಮಾಡಿದ ಮಹೀಂದ್ರಾ

ಇದಲ್ಲದೇ ಪ್ರತಿಗಂಟೆಗೆ 25 ಕಿಮಿ ವೇಗದಲ್ಲಿ ಚಾಲನೆ ಮಾಡಬಹುದಾಗಿದ್ದು, ಮೊದಲ ಹಂತದಲ್ಲಿ ದೆಹಲಿ ಸೇರಿದಂತೆ ಕೆಲವು ಆಯ್ದ ನಗರಗಳಲ್ಲಿ ಮಾತ್ರ ಮಹೀಂದ್ರಾ ಆಟೋಗಳು ಖರೀದಿಗೆ ಲಭ್ಯವಿರಲಿವೆ ಎನ್ನಲಾಗಿದೆ.

ಇ-ಅಲ್ಫಾ ಮಿನಿ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆ ಮಾಡಿದ ಮಹೀಂದ್ರಾ

ಈ ಬಗ್ಗೆ ಮಾತನಾಡಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಆಟೋಮೆಟಿವ್ ವಿಭಾಗದ ಅಧ್ಯಕ್ಷ ರಾಜನ್ ವದೇರಾ 'ಎಲೆಕ್ಟ್ರಿಕ್ ಆಟೋ ಮಾದರಿಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಭವಿಷ್ಯವಿದ್ದು, ಈ ಹಿನ್ನೆಲೆ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಎಲೆಕ್ಟ್ರಿಕ್ ಆಟೋಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದ್ದೇವೆ' ಎಂದಿದ್ದಾರೆ.

ಇ-ಅಲ್ಫಾ ಮಿನಿ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆ ಮಾಡಿದ ಮಹೀಂದ್ರಾ

ಇನ್ನೊಂದು ಪ್ರಮಖ ವಿಚಾರ ಅಂದ್ರೆ ಮೊದಲ ಬಾರಿಗೆ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಆಟೋ ಮಾದರಿಗಳನ್ನು ಪರಿಚಯಿಸುತ್ತಿರುವ ಮಹೀಂದ್ರಾ ಸಂಸ್ಥೆಯು, ಮೊದಲ ಹಂತದ ಮಾರಾಟ ಪ್ರಕ್ರಿಯೆ ವೇಳೆ ಗ್ರಾಹಕರಿಗೆ ಕೆಲವು ಸೌಲಭ್ಯಗಳನ್ನು ಉಚಿತ ಹಾಗೂ ರಿಯಾಯ್ತಿ ದರದಲ್ಲಿ ಒದಗಿಸುವ ಬಗ್ಗೆ ಸುಳಿವು ನೀಡಿದೆ.

ಇ-ಅಲ್ಫಾ ಮಿನಿ ಎಲೆಕ್ಟ್ರಿಕ್ ರಿಕ್ಷಾ ಬಿಡುಗಡೆ ಮಾಡಿದ ಮಹೀಂದ್ರಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ದೇಶದಲ್ಲೇ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡುವ ಏಕೈಕ ಸಂಸ್ಥೆಯಾಗಿರುವ ಮಹೀಂದ್ರಾ, ಈಗಾಗಲೇ ಕೆಲವು ಎಲೆಕ್ಟ್ರಿಕ್ ಮಾದರಿಗಳಲ್ಲಿ ಜನಪ್ರಿಯತೆ ಸಾಧಿಸಿದೆ. ಹೀಗಾಗಿ ಮಹೀಂದ್ರಾ ಪರಿಚಯಿಸಿರುವ ಆಟೋ ಮಾದರಿಗಳು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

English summary
Read in Kannda about Mahindra Launches e-Alfa Mini Electric Rickshaw In India.
Story first published: Saturday, September 9, 2017, 11:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark