ನಿಸ್ಸಾನ್ ನಿಂದ ಶೇ. 20ರಷ್ಟು ಮಿನಿ ವ್ಯಾನ್ ರಫ್ತು

Nissan Mini-Van
ಮೇಡ್ ಇನ್ ಇಂಡಿಯಾ ಟ್ಯಾಗ್ ನೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ದೇಶದ ವ್ಯಾನ್ ಗಳು ಸವಾರಿ ಮಾಡಲಿವೆ. ಜಪಾನಿನ ನಿಸ್ಸಾನ್ ಭಾರತದ ಅಶೋಕ್ ಲೇಲ್ಯಾಂಡ್ ಜಂಟಿ ಉದ್ಯಮ ನೆರವಿನಿಂದ ಮಿನಿ ವ್ಯಾನ್ ನಿರ್ಮಿಸುತ್ತಿದೆ. ಇದರಲ್ಲಿ ಶೇಕಡಾ 20ರಷ್ಟು ಮಿನಿ ವ್ಯಾನ್ ಗಳು ಜಾಗತಿಕ ಮಾರುಕಟ್ಟೆಗೆ ರಫ್ತಾಗಲಿದೆ ಎಂದು ಕಂಪನಿ ಹೇಳಿದೆ.

"ಕಂಪನಿಯು ಮುಂದಿನ ವರ್ಷ ಮಿನಿ ವ್ಯಾನ್ ಗಳನ್ನು ಹೊರತರಲಿದೆ. ನಿಸ್ಸಾನ್ ಸುಮಾರು 55 ಸಾವಿರ ಇಂತಹ ಪ್ರಯಾಣಿಕ ಸಾರಿಗೆ ವ್ಯಾನ್ ಗಳನ್ನು ನಿರ್ಮಿಸಲಿದೆ. ಇದರಲ್ಲಿ ಶೇಕಡಾ 20ರಷ್ಟು ವ್ಯಾನ್ ಗಳನ್ನು ಹತ್ತಿರದ ರಾಷ್ಟ್ರಗಳಿಗೆ ರಫ್ತು ಮಾಡಲಿದ್ದೇವೆ" ಎಂದು ಕಂಪನಿಯ ಉಪಾಧ್ಯಕ್ಷರಾದ ಆಂಡಿ ಪಾಲ್ಮೆರ್ ಹೇಳಿದ್ದಾರೆ.

ಅಶೋಕ್ ಲೇಲ್ಯಾಂಡ್ ನಿಸ್ಸಾನ್ ವೆಹಿಕಲ್ಸ್ ಜಂಟಿ ಉದ್ಯಮದಲ್ಲಿ ನಿಸ್ಸಾನ್ ಶೇಕಡಾ 51ರಷ್ಟು ಪಾಲು ಹೊಂದಿದೆ. ಕಂಪನಿಯು ರೆನಾಲ್ಟ್ ನೊಂದಿಗೆ ಕೂಡ ಸಹಭಾಗಿತ್ವ ಮಾಡಿಕೊಂಡಿದೆ. (ಚಿತ್ರದಲ್ಲಿರುವುದು ನಿಸ್ಸಾನ್ ಕ್ಯೂಸ್ಟ್ ಮಿನಿವ್ಯಾನ್)

More from DriveSpark

Article Published On: Monday, August 1, 2011, 10:14 [IST]
English summary
Nissan to export 20 percent of mini-vans made in India ians reported.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+