ನೇಪಾಳದಲ್ಲಿ ನ್ಯಾನೊ: ಗ್ರಾಹಕರಿಗೆ ಸಣ್ಣ ಕಾರು ಡೆಲಿವರಿ

ಕಂಪನಿಯ ನಿರೀಕ್ಷೆಗೂ ಮೀರಿ ನೇಪಾಳದಲ್ಲಿ ನ್ಯಾನೊ ಕಾರಿಗೆ ಬೇಡಿಕೆ ಬಂದಿದೆ. ನೇಪಾಳಕ್ಕೆ ರಫ್ತು ಮಾಡಲಾದ 352 ಕಾರುಗಳನ್ನು ಗ್ರಾಹಕರು ಬುಕ್ಕಿಂಗ್ ಮಾಡಲಾಗಿದ್ದು, ಸದ್ಯ ಬುಕ್ಕಿಂಗ್ ಕ್ಲೋಸ್ ಮಾಡಲಾಗಿದೆ. ಇದರಲ್ಲಿ ಮೊದಲ ಬ್ಯಾಚ್ ನಲ್ಲಿ 250 ಕಾರುಗಳು ಗ್ರಾಹಕರ ಕೈ ಸೇರಿವೆ.
ನೇಪಾಳದ ಗ್ರಾಹಕರಿಗೆ ಶಿಪ್ರಡಿ ಟ್ರೇಡಿಂಗ್ ಕಂಪನಿಯು ನ್ಯಾನೊ ಕಾರು ಡೀಲಿಂಗ್ ಮಾಡುತ್ತಿದೆ. ಶಿಪ್ರಡಿ ಕಂಪನಿಗೆ ಕೆಲವು ಗ್ರಾಹಕರು ಪೂರ್ಣ ಪ್ರಮಾಣದ ಹಣ ಪಾವತಿ ಮಾಡಿ ನ್ಯಾನೊ ಖರೀದಿಸುತ್ತಿರುವುದು ವಿಶೇಷ. ಕೆಲವು ಗ್ರಾಹಕರು ಬ್ಯಾಂಕ್ ಲೋನ್ ಮಾಡುತ್ತಿದ್ದಾರೆ. ಹೆಚ್ಚಿನ ನೇಪಾಳಿಗರು ನ್ಯಾನೊ ಕಾರು ಖರೀದಿಸಲು ಉತ್ಸಾಹ ತೋರುತ್ತಿದ್ದಾರೆ ಎಂದು ಡೀಲರ್ ಕಂಪನಿ ಹೇಳಿದೆ.


Click it and Unblock the Notifications