ನೂತನ ಆಡಿ ಎ6 ರಸ್ತೆಗೆ, ದರ 37.7 ಲಕ್ಷ ಮಾತ್ರ!

ಆಡಿ ಎ6 ಕಾರು ಸದ್ಯ ರಸ್ತೆಯಲ್ಲಿರುವ ಮರ್ಸಿಡಿಸ್ ಬೆಂಝ್ ಮತ್ತು ಬಿಎಂಡಬ್ಲ್ಯು ಕಾರುಗಳೊಂದಿಗೆ ಪೈಪೋಟಿ ನಡೆಸಲಿದೆ. ಈ ಕಂಪನಿಯ ಕಾರುಗಳ ದರಕ್ಕೆ ಹೋಲಿಸಿದರೆ ನೂತನ ಕಾರಿನ ದರ ಹೆಚ್ಚೇನಿಲ್ಲ ಎಂದು ಹೇಳಬಹುದು.
ಆಡಿ ಎ6 ಕಾರು ಆಕರ್ಷಕ ಸೌಂದರ್ಯ, ವರ್ಧಿತ ಸುರಕ್ಷತಾ ಫೀಚರ್ ಗಳಿಂದ ಹೆಚ್ಚು ಇಷ್ಟವಾಗುತ್ತದೆ. ಈ ಕಾರಿನ ವಿಶಾಲ ಮತ್ತು ಹಗುರ ಅಲ್ಯುಮಿನಿಯಂ ಬಾಡಿಯಿಂದಾಗಿ ಇಂಧನ ದಕ್ಷತೆಯೂ ಹೆಚ್ಚಾಗಿದೆ.
ಹೊಸದಾಗಿ ಅನಾವರಣ ಮಾಡಿದ ಸೆಡಾನ್ ಆಡಿ ಎ6 ನಾಲ್ಕು ಆಯ್ಕೆಗಳಲ್ಲಿ ದೊರಕುತ್ತಿದೆ. ಎರಡು ಡೀಸಲ್ ಮತ್ತು ಎರಡು ಪೆಟ್ರೊಲ್ ಇಂಜಿನ್ ಗಳಲ್ಲಿ ಬೇಕಾದ್ದನ್ನು ಖರೀದಿಸಬಹುದು.
ಈ ಕಾರಿನಲ್ಲಿ ಲವ್ಲಿಯಾದ ಫೀಚರ್ಸ್ ಗಳು ಇವೆ. ಅಂದರೆ ಸುರಕ್ಷಿತ ಪ್ರಯಾಣಕಕ್ಕೆ ಇಎಸ್ಪಿ, ಟ್ರಾಕ್ಷನ್ ಕಂಟ್ರೊಲ್, ಏರ್ ಬ್ಯಾಗ್ ಮತ್ತು ಆಂಟಿ ಲಾಕ್ ಬ್ರೇಕಿಂಗ್ ಸೇರಿದಂತೆ ಹಲವು ಫೀಚರ್ಸ್ ಗಳು ಇವೆ.


Click it and Unblock the Notifications








