ಬಿಡುಗಡೆಯಾಯ್ತು 2019ರ ಹೊಸ ಆಡಿ ಎ6 ಕಾರು
ಸ್ವಲ್ಪ ಅವಧಿಯ ಕಾಯುವಿಕೆಯ ನಂತರ ಆಡಿ ಕಂಪನಿಯು ಹೊಸ ತಲೆಮಾರಿನ ಎ6 ಐಷಾರಾಮಿ ಸೆಡಾನ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.54.20 ಲಕ್ಷಗಳಾಗಿದೆ.

ಆಡಿ ಎ6 ಸೆಡಾನ್ ಕಳೆದ ಒಂದು ವರ್ಷದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಜರ್ಮನ್ ಕಾರು ತಯಾರಕ ಕಂಪನಿಯು ಬಿಡುಗಡೆಗೊಳಿಸಿದ ಮೊದಲ ಹೊಸ ಕಾರ್ ಆಗಿದೆ. ಈ ಮಾದರಿಯ ಕಾರ್ ಅನ್ನು ಬಹಳ ವರ್ಷಗಳಿಂದ ನವೀಕರಿಸಿರಲಿಲ್ಲ.

ಮಾರುಕಟ್ಟೆಯಲ್ಲಿರುವ ಈ ಹಿಂದಿನ ಆಡಿ ಎ6 ಕಾರ್ ಅನ್ನು ಟಾಪ್ ಎಂಡ್ ಮಾದರಿಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಆ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍ನಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಹೊಸ ಕಾರ್ ಅನ್ನು ಸಹ ಪ್ರೀಮಿಯಂ ಪ್ಲಸ್ ಹಾಗೂ ಟೆಕ್ನಾಲಜಿ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಆದರೆ ಈ ಕಾರ್ ಅನ್ನು ಪೆಟ್ರೋಲ್ ಎಂಜಿನ್‍ನಲ್ಲಿ ಮಾತ್ರ ಮಾರಾಟ ಮಾಡಲಾಗುವುದು.

ಸ್ಟೈಲಿಂಗ್ ಬಗ್ಗೆ ಹೇಳುವುದಾದರೆ, ಹೊಸ ಎ6 ಆಡಿಯು ಹೊಸದಾದ, ಹೆಚ್ಚು ತೀಕ್ಷ್ಣವಾದ, ಸ್ಕ್ವೇರ್ ಆಫ್ ಲುಕ್ ಹಾಗೂ ಮುಂಭಾಗದಲ್ಲಿ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಇದರ ಜೊತೆಗೆ ಎಲ್ಇಡಿ ಡಿಆರ್‍ಎಲ್‍ಗಳೊಂದಿಗೆ ಆಂಗ್ಯುಲರ್ ಎಲ್ಇಡಿ ಹೆಡ್‍ಲ್ಯಾಂಪ್‍ಗಳನ್ನು ಹೊಂದಿದೆ.

ಕಾರಿನ ಹಿಂಭಾಗದಲ್ಲಿಯೂ ಬದಲಾವಣೆಗಳಾಗಿವೆ. ತೆಳುವಾದ ಕ್ರೋಮ್ ಸ್ಟ್ರಿಪ್‌ನಿಂದ ಕನೆಕ್ಟ್ ಆಗಿರುವ ಹೊಸ ವಿನ್ಯಾಸದ ಎಲ್ಇಡಿ ಟೇಲ್ ಲೈಟ್‌ಗಳಿವೆ. ಹೊಸ ಎ6 ಕಾರು ಹೊಸದಾದ 18 ಇಂಚಿನ ಅಲಾಯ್ ವ್ಹೀಲ್‍ಗಳನ್ನು ಹೊಂದಿದ್ದರೂ, ಸಿಲೂಯೆಟ್ ಹೆಚ್ಚು, ಕಡಿಮೆ ಬದಲಾಗದೆ ಹಾಗೆಯೇ ಉಳಿದಿದೆ.

ಹೊಸ ಕಾರು ಮಾರುಕಟ್ಟೆಯಲ್ಲಿರುವ ಹಳೆಯ ಎ6 ಕಾರಿಗಿಂತ ದೊಡ್ಡ ಗಾತ್ರವನ್ನು ಹೊಂದಿದೆ. ಎ6 ಕಾರು, ಐಬಿಸ್ ವೈಟ್‍ನ ಒಂದೇ ಸಾಲಿಡ್ ಎಕ್ಸ್ ಟಿರಿಯರ್ ಫಿನಿಶ್ ಅನ್ನು ಹೊಂದಿದ್ದರೂ ಸಹ ಈ ಕಾರ್ ಅನ್ನು ಫರ್ಮಮೆಂಟ್ ಬ್ಲೂ, ಮಿಥ್ ಬ್ಲ್ಯಾಕ್, ಸೆವಿಲ್ಲೆ ರೆಡ್ ಹಾಗೂ ವೆಸುವಿಯಸ್ ಗ್ರೇ ಎಂಬ ನಾಲ್ಕು ಮೆಟಾಲಿಕ್ ಎಕ್ಸ್ ಟಿರಿಯರ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಆಡಿ ಕಂಪನಿಯು ಎ6 ಕಾರಿನ ಇಂಟಿರಿಯರ್ ಡಿಸೈನ್ ಅನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಿರುವ ಕಾರಣ ಹೊಸ ಆಡಿ ಎ6 ನ ಒಳಭಾಗವು ಹಳೆಯ ಮಾದರಿಗಿಂತ ಬಹಳಷ್ಟು ಭಿನ್ನವಾಗಿದೆ. ಆಡಿ ಕಂಪನಿಯು ಈ ಕಾರ್ ಅನ್ನು ತನ್ನ ಕಂಪನಿಯ ಹೊಸ ಮಾದರಿಯ ಕಾರುಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಟಾಪ್ ಮಾದರಿಯ ಎ6 ಟೆಕ್ನಾಲಜಿ ಮಾದರಿಯು, ಇತ್ತೀಚಿನ ಎಂಎಂಐ ಸಿಸ್ಟಂ ಟ್ವಿನ್ ಟಚ್‌ಸ್ಕ್ರೀನ್‌ಗಳೊಂದಿಗೆ ಇನ್ಫೋಟೈನ್‌ಮೆಂಟ್ ಹಾಗೂ ಇನ್ ಕಾರ್ ಫಂಕ್ಷನ್‍ಗಳನ್ನು ಹೊಂದಿದೆ. ಟಾಪ್ ಎಂಡ್ ಮಾದರಿಯ ಪ್ಯಾಕೇಜ್‍ನ ಭಾಗವಾಗಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ (ವರ್ಚುವಲ್ ಕಾಕ್‌ಪಿಟ್), ಬ್ಯಾಂಗ್ ಹಾಗೂ ಒಲುಫ್‌ಸೆನ್ ಆಡಿಯೊ ಸಿಸ್ಟಂ, ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್ ಹಾಗೂ ಹ್ಯಾಂಡ್ಸ್ ಫ್ರೀ ಪಾರ್ಕಿಂಗ್ ಫಂಕ್ಷನ್‍ಗಳನ್ನು ಹೊಂದಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಎ6 45 ಟಿಎಫ್‌ಎಸ್‌ಐ ಪ್ರೀಮಿಯಂ ಪ್ಲಸ್ ಮಾದರಿಯಲ್ಲಿ ಚಾಲಕನ ಮುಂಭಾಗದ ಸೀಟಿನಲ್ಲಿ ಮೆಮೊರಿ ಫಂಕ್ಷನ್, ಪನೋರಾಮಿಕ್ ಸನ್‌ರೂಫ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಲೆದರ್ / ಲೆಥೆರೆಟ್ ಅಪ್‍ಹೊಲೆಸ್ಟರಿ ಹಾಗೂ ಲೇನ್ ಡಿಪಾರ್ಚರ್ ವಾರ್ನಿಂಗ್‌ಗಳಿವೆ.

ಮೆಕಾನಿಕಲ್ ಅಂಶಗಳ ಬಗ್ಗೆ ಹೇಳುವುದಾದರೆ, ಆಡಿ ಕಂಪನಿಯು ಹೊಸ ಐಷಾರಾಮಿ ಸೆಡಾನ್ ಅನ್ನು ಕೇವಲ 45 ಟಿಎಫ್‌ಎಸ್‌ಐ ಮಾದರಿಯಲ್ಲಿ ಮಾರಾಟ ಮಾಡಲಿದೆ. ಈ ಕಾರಿನಲ್ಲಿ 2.0 ಲೀಟರಿನ, ನಾಲ್ಕು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 245 ಬಿಹೆಚ್‌ಪಿ ಪವರ್ ಹಾಗೂ 370 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 7 ಸ್ಪೀಡಿನ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

2019ರ ಹೊಸ ಆಡಿ ಎ6 ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು 5 ಸೀರಿಸ್, ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಹಾಗೂ ಜಾಗ್ವಾರ್ ಎಕ್ಸ್‌ಎಫ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಆಡಿ ಎ6 ಪೆಟ್ರೋಲ್ ಕಾರು, ಬೇರೆ ಕಂಪನಿಯ ಪೆಟ್ರೋಲ್ ಎಂಜಿನ್ ಕಾರುಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿದೆ.


Click it and Unblock the Notifications








