ಐಷಾರಾಮಿ ಸೆಡಾನ್ ಎ6 ಕಾರು ಭಾರತದಲ್ಲಿ ಬಿಡುಗಡೆ ಮಾಡಿದ ಆಡಿ

Written By:

ಭಾರತದಲ್ಲಿ ತನ್ನ ಐಷಾರಾಮಿ ಕಾರುಗಳಿಂದ ಪ್ರಖ್ಯಾತಿ ಪಡೆದಿರುವ ಆಡಿ ತನ್ನ ಎ6 ಸರಣಿಯ ಎ6 ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಕಾರು ರೂ. 56.78 ಲಕ್ಷ ಬೆಲೆ ಹೊಂದಿದೆ.

ಐಷಾರಾಮಿ ಸೆಡಾನ್ ಎ6 ಕಾರು ಭಾರತದಲ್ಲಿ ಬಿಡುಗಡೆ ಮಾಡಿದ ಆಡಿ

ಆಡಿ ಸಂಸ್ಥೆಯು ತನ್ನ ಸೀಮಿತ ಆವೃತ್ತಿಯ ಆಡಿ ಕ್ಯೂ7 ಕಾರಿನ ಜೊತೆ ಎ6 ಕಾರನ್ನು ಅನಾವರಣಗೊಳಿಸಿದ್ದು, ಈ ಕಾರು ಸಹ ಸೀಮಿತ ಅವಧಿಯವರೆಗೆ ಮಾರಾಟವಾಗಲಿದೆ. ಈ ಕಾರು ಸಹ ಹೆಚ್ಚು ಕಾಸ್ಮೆಟಿಕ್ ನವೀಕರಣ ಪಡೆದುಕೊಂಡಿದ್ದು, ಡಿಸೈನ್‌ಗೆ ಬಹಳಷ್ಟು ಪ್ರಾಮುಖ್ಯತೆ ನೀಡಲಾಗಿದೆ.

ಐಷಾರಾಮಿ ಸೆಡಾನ್ ಎ6 ಕಾರು ಭಾರತದಲ್ಲಿ ಬಿಡುಗಡೆ ಮಾಡಿದ ಆಡಿ

ಈ ವಿಶಿಷ್ಟ ಡಿಸೈನ್ ಎ6 ಆವೃತ್ತಿಯು ಸ್ಮಾರ್ಟ್‌ಫೋನ್ ಇಂಟರ್‌ಫೇಸ್ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಬಿಡುಗಡೆಗೊಂಡಿದ್ದು, ಹಿಂಬದಿಯ ಪ್ರಯಾಣಿಕರಿಗೆ ಪ್ರತ್ಯೇಕ ಮನೋರಂಜನೆ ಸೌಲಭ್ಯ ನೀಡಲಾಗಿದೆ.

ಐಷಾರಾಮಿ ಸೆಡಾನ್ ಎ6 ಕಾರು ಭಾರತದಲ್ಲಿ ಬಿಡುಗಡೆ ಮಾಡಿದ ಆಡಿ

ಈ ಐಷಾರಾಮಿ ಕಾರಿನಲ್ಲಿ 19 ಇಂಚಿನ ಅಲ್ಯೂಮಿನಿಯಂ ಚಕ್ರಗಳನ್ನು ಇರಿಸಲಾಗಿದ್ದು, ಮುಂಬದಿ ಮತ್ತು ಹಿಂಬದಿಯಲ್ಲಿ ಆಡಿ ಸಂಸ್ಥೆಯ ಲೊಗೊ ಹೊಂದಿರುವ ಡೋರ್ ಪುಡ್ಲ್ ಪ್ರೊಜೆಕ್ಷನ್ ಲ್ಯಾಂಪ್‌ಗಳನ್ನು ಕಾಣಬಹುದಾಗಿದೆ.

ಐಷಾರಾಮಿ ಸೆಡಾನ್ ಎ6 ಕಾರು ಭಾರತದಲ್ಲಿ ಬಿಡುಗಡೆ ಮಾಡಿದ ಆಡಿ

ಇನ್ನು ಈ ಎ6 ಕಾರಿನ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ 2.0-ಲೀಟರ್ಸ್ ತಂತ್ರಜ್ಞಾನದ ಎಂಜಿನ್ ಇರಿಸಿದ್ದು, 190 ರಷ್ಟು ಅಶ್ವಶಕ್ತಿಯನ್ನು ಉತ್ಪಾದಿಸಲಿದೆ ಮತ್ತು 7-ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್ ನೀಡಲಾಗಿದೆ.

ಐಷಾರಾಮಿ ಸೆಡಾನ್ ಎ6 ಕಾರು ಭಾರತದಲ್ಲಿ ಬಿಡುಗಡೆ ಮಾಡಿದ ಆಡಿ

ಸಾಮಾನ್ಯ ಮಾದರಿಯಲ್ಲಿ ಇಲ್ಲದೆ ಇರುವಂತಹ ಸೌಲಭ್ಯಗಳ ಪಟ್ಟಿಯು ಕೆಳಗೆ ವಿವರಿಸಲಾಗಿದೆ :

1 ಡೈನಾಮಿಕ್ ಇಂಡಿಕೇಟರ್ಸ್ ಜೊತೆ ಆಡಿ ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲ್ಯಾಂಪುಗಳು

2 ಕಾರಿನ ಬಣ್ಣದಲ್ಲಿ ಎಕ್ಸ್‌ಟೀರಿಯರ್ ಮಿರರ್ ಹೌಸಿಂಗ್

3 ಗ್ಲಾಸ್ ಸನ್‌ರೂಫ್

4 ಹೈ ಗ್ಲೋಸ್ ಪ್ಯಾಕೇಜ್

5 ಲೈಟ್ / ರೈನ್ ಸೆನ್ಸರ್

6 ಹಿಂಬದಿ ನೋಡುವ ಕ್ಯಾಮೆರಾ

ಐಷಾರಾಮಿ ಸೆಡಾನ್ ಎ6 ಕಾರು ಭಾರತದಲ್ಲಿ ಬಿಡುಗಡೆ ಮಾಡಿದ ಆಡಿ

ಇಂಟೀರಿಯರ್ :

ಅಪ್‌ಹೋಲ್‌ಸ್ಟ್ರೇ ಲೆದರ್ ಮಿಲಾನೊ

ಆಡಿ ಡ್ರೈವ್ ಸೆಲೆಕ್ಟ್ ಜೊತೆ ಅಡಾಪ್ಟಿವ್ ಏರ್ ಸೂಸ್ಪೆನ್‌ಷನ್

ಆಂಬಿಯೆಂಟ್ ಲೈಟಿಂಗ್ ಪ್ಯಾಕೇಜ್

ಹಿಂಬದಿ ಇಂದ ಫ್ರಂಟ್ ಸೀಟ್ ಅಡ್ಜಸ್ಟ್‌ಮೆಂಟ್

ಪಾರ್ಕಿಂಗ್ ಏಡ್ ಪ್ಲಸ್

ಕಂಫರ್ಟ್ ಕೀ

ಡ್ರೈವರ್ ಮಾಹಿತಿ ಸಿಸ್ಟಮ್ ಜೊತೆ ನೇವಿಗೇಶನ್ ಪರದೆ

ಐಷಾರಾಮಿ ಸೆಡಾನ್ ಎ6 ಕಾರು ಭಾರತದಲ್ಲಿ ಬಿಡುಗಡೆ ಮಾಡಿದ ಆಡಿ

ಇನ್ಫೋಟೈನ್ಮೆಂಟ್

ಬ್ಲೂಟೂತ್ ಇಂಟರ್ಫೇಸ್

ಎಂಎಂಐ ನೇವಿಗೇಶನ್ ಪ್ಲಸ್

ಬಾಸ್ ಸರೌಂಡ್ ಸೌಂಡ್ ಸಿಸ್ಟಮ್

ಎಂಎಂಐ ಟಚ್

ಹಿಂಬದಿಯ ಪ್ರಯಾಣಿಕರಿಗೆ ಎಂಎಂಐ ರಿಮೋಟ್ ಕಂಟ್ರೋಲ್

ಐಷಾರಾಮಿ ಸೆಡಾನ್ ಎ6 ಕಾರು ಭಾರತದಲ್ಲಿ ಬಿಡುಗಡೆ ಮಾಡಿದ ಆಡಿ

28 ರಿಂದ 32 ವಯಸ್ಸಿನ ವರ್ಗಕ್ಕೆ ತಲುಪುವ ಜನಕ್ಕೆ ಹೇಳಿ ಮಾಡಿಸಿದ ಕಾರು ಇದಾಗಿದ್ದು, ಪ್ರೀಮಿಯಂ ಸೆಡಾನ್ ಕಾರಿನಿಂದ ಐಷಾರಾಮಿ ಸೆಡಾನ್ ಕಾರುಗಳಿಗೆ ಅಪ್ಡೇಟ್ ಆಗುವವರಿಗೆ ಈ ಆಡಿ ಎ6 ಕಾರು ಹೆಚ್ಚು ಆಕರ್ಷಣೆ ಮಾಡಲಿರುವುದಂತೂ ಖಂಡಿತ.

Read more on ಆಡಿ audi
English summary
Audi A6 Design Edition Launched In India, priced at Rs 56.78 lakh. The A6 Design Edition was launched alongside the Q7 Design Edition, both of which will be limited edition models
Story first published: Thursday, August 17, 2017, 18:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark