600 ಸಿಬ್ಬಂದಿ ನೇಮಕಕ್ಕೆ ಆಡಿ ಇಂಡಿಯಾ ನಿರ್ಧಾರ

ಕಂಪನಿಯ ಹಲವು ಕಾರುಗಳು ದೇಶದ ರಸ್ತೆಗಿಳಿಯಲು ಸರತಿ ಸಾಲಿನಲ್ಲಿವೆ. ಇಂದು ಆಡಿ ಎ6 ಕಾರು ರಸ್ತೆಗಿಳಿದಿದೆ. ವಿಸ್ತರಣಾ ಯೋಜನೆಗಳಿಗಾಗಿ ಸುಮಾರು 600 ಸಿಬ್ಬಂದಿ ನೇಮಕ ಮಾಡಿಕೊಳ್ಳುವುದಾಗಿ ಕಂಪನಿ ಹೇಳಿದೆ.
"ಮಹಾನಗರಗಳು ಮಾತ್ರವಲ್ಲದೇ ದೇಶಾದ್ಯಂತ ಕಂಪನಿಯು ಡೀಲರ್ ನೆಟ್ ವರ್ಕ್ ಹೆಚ್ಚಿಸಿಲಿದೆ. ಇದರೊಂದಿಗೆ ಹಲವು ಕಾರುಗಳನ್ನು ಹೊರತರಲಿದ್ದೇವೆ. ಈಗಾಗಲೇ ಕಂಪನಿಯು ದೇಶದಲ್ಲಿ 13 ಪ್ರಬಲ ಡೀಲರ್ಷಿಪ್ ನೆಟ್ ವರ್ಕ್ ಹೊಂದಿದೆ" ಎಂದು ಆಡಿ ಇಂಡಿಯಾದ ಮುಖ್ಯಸ್ಥ ಮೈಕಲ್ ಪೆರ್ಷೆಕ್ ಹೇಳಿದ್ದಾರೆ. 2011ರ ಅಂತ್ಯದ ವೇಳೆಗೆ ಡೀಲರ್ಷಿಪ್ ನೆಟ್ ವರ್ಕನ್ನು 18ಕ್ಕೆ ಹೆಚ್ಚಿಸುವುದಾಗಿ ಕಂಪನಿ ಹೇಳಿದೆ.
"ಸದ್ಯ ಕಂಪನಿಯ ಉತ್ಪಾದನಾ ವಿಭಾಗದಲ್ಲಿ ಸುಮಾರು 200 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಕಂಪನಿಗೆ ಅಗತ್ಯವಿರುವಷ್ಟು ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಿದ್ದೇವೆ. ಕಡಿಮೆಯೆಂದರೆ ಕಂಪನಿಗೆ ಸುಮಾರು 200 ಸಿಬ್ಬಂದಿಗಳ ಅಗತ್ಯವಿದೆ" ಎಂದು ಅವರು ಹೇಳಿದ್ದಾರೆ.


Click it and Unblock the Notifications








