ಕಾರು ಕುಂಠಿತವಾದರೂ ಲೇಲ್ಯಾಂಡ್ ಟಾಪ್ ಗೇರ್

ಅಶೋಕ್ ಲೇಲ್ಯಾಂಡ್ ಜುಲೈ ತಿಂಗಳಿನಲ್ಲಿ ಸುಮಾರು 7,834 ವಾಣಿಜ್ಯ ವಾಹನ ಮಾರಾಟ ಮಾಡಿದೆ. ಕಂಪನಿಯು ಕಳೆದ ವರ್ಷ 6,747 ಯೂನಿಟ್ ವಾಹನ ಮಾರಾಟ ಮಾಡಿತ್ತು. ಆದರೂ ಕಳೆದ ತಿಂಗಳು ಕಂಪನಿಯ ಒಟ್ಟಾರೆ ವಾಹನ ಮಾರಾಟ ತುಸು ಇಳಿಕೆ ಕಂಡಿದೆ. ಕಂಪನಿಯು ಕಳೆದ ತಿಂಗಳು ಒಟ್ಟು 27,111 ಯೂನಿಟ್ ವಾಹನ ಮಾರಾಟ ಮಾಡಿದೆ. ಆದರೆ ಕಳೆದ ವರ್ಷದ ಇದೇ ಅವಧಿಯಲ್ಲಿ ಒಟ್ಟು 28,147 ಯೂನಿಟ್ ಮಾರಾಟ ಮಾಡಿತ್ತು.
ಇದರೊಂದಿಗೆ ಕಂಪನಿಯ ದೇಶೀಯ ವಾಹನ ಮಾರಾಟ ಕೂಡ ಏರಿಕೆ ಕಂಡಿದೆ. 2011ರ ಜುಲೈ ತಿಂಗಳಲ್ಲಿ ಕಂಪನಿಯು ದೇಶದಲ್ಲಿ 6,744 ವಾಹನ ಮಾರಾಟ ಮಾಡಿತ್ತು. ಇದಕ್ಕೂ ಹಿಂದಿನ ವರ್ಷ ಜುಲೈನಲ್ಲಿ ಕಂಪನಿಯ ವಾಹನ ಮಾರಾಟ 6,022 ಯೂನಿಟ್ ಆಗಿತ್ತು.
ಇದರೊಂದಿಗೆ ಕಂಪನಿಯ ರಫ್ತು ವಹಿವಾಟು ಕೂಡ ಗಮನಾರ್ಹವಾಗಿ ಏರಿಕೆ ಕಂಡಿದೆ. ಕಳೆದ ವರ್ಷ ಕಂಪನಿಯು 725 ವಾಹನ ರಫ್ತು ಮಾಡಿತ್ತು. ಆದರೆ ಕಳೆದ ತಿಂಗಳು ಕಂಪನಿಯ ವಿದೇಶಿ ಮಾರುಕಟ್ಟೆಗೆ 1,060 ವಾಹನ ರಫ್ತು ಮಾಡಿದೆ.


Click it and Unblock the Notifications








