ಡೀಸಲ್ ಕಾರು ಖರೀದಿದಾರರಿಗೆ ಎಚ್ಚರಿಕೆಯ ಕರೆಗಂಟೆ!!

FM Considering Luxury Tax on Diesel
ಡೀಸಲ್ ಕಾರು ಖರೀದಿದಾರರಿಗಿದು ಅಪ್ರಿಯ ಸುದ್ದಿ. ಅಪ್ರಿಯವಾದರೂ ಹೇಳಲೇಬೇಕು. ಸಂಸತ್ತಿನ ಕಲಾಪದಲ್ಲಿ ಪ್ರಣಬ್ ಮುಖರ್ಜಿ ಹೊಸ ಡೀಸಲ್ ಬಾಂಬ್ ಸಿಡಿಸಿದ್ದಾರೆ. ಹಣದುಬ್ಬರ ತಗ್ಗಿಸಲು ಡೀಸಲ್ ಕಾರುಗಳಿಗೆ ಐಷಾರಾಮಿ ತೆರಿಗೆ ವಿಧಿಸುವ ಪ್ರಸ್ತಾಪ ಮಾಡಿದ್ದಾರೆ. ಇದು ಡೀಸಲ್ ಕಾರು ಖರೀದಿಸಬಯಸುವ ಗ್ರಾಹಕರಿಗೆ ಮತ್ತು ಉತ್ಪಾದಿಸುವ ಕಂಪನಿಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ಕೇಂದ್ರ ಸರಕಾರ ಕೃಷಿಕರಿಗೆ ಸಬ್ಸಿಡಿ ದರದಲ್ಲಿ ಡೀಸಲ್ ಮಾರಾಟ ಮಾಡುತ್ತಿದೆ. ಆದರೆ ಈ ಸಬ್ಸಿಡಿ ಲಾಭ ನಿಜವಾದ ಕೃಷಿಕರ ಪಾಲಾಗುವುದು ಕಡಿಮೆ. ಈ ಸಬ್ಸಿಡಿಯ ಲಾಭವನ್ನು ಡೀಸಲ್ ಕಾರು ಹೊಂದಿರುವರು ಪಡೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಡೀಸಲ್ ಕಾರುಗಳಿಗೆ ಐಷಾರಾಮಿ ತೆರಿಗೆ ವಿಧಿಸುವುದು ಸೂಕ್ತವಾಗಿದೆ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಡೀಸಲ್ ಕಾರುಗಳ ಮೇಲೆ ಐಷಾರಾಮಿ ತೆರಿಗೆ ವಿಧಿಸಿದರೆ ಏನಾಗುತ್ತದೆ ಎಂದು ಕೇಳಬಹುದು. ಈಗಾಗಲೇ ಕಂಪನಿಗಳು ಡೀಸಲ್ ಕಾರು ಉತ್ಪಾದನೆಗಾಗಿ ಕೋಟ್ಯಾಂತರ ರು. ಹೂಡಿಕೆ ಮಾಡಿವೆ. ಸದ್ಯ ಪೆಟ್ರೊಲ್ ಮತ್ತು ಡೀಸಲ್ ಕಾರುಗಳ ನಡುವೆ ದರದಲ್ಲಿ ಅಂತಹ ವ್ಯತ್ಯಾಸವೇನಿಲ್ಲ. ತೆರಿಗೆ ವಿಧಿಸಿದ ಮೇಲೆ ಡೀಸಲ್ ಕಾರು ದುಬಾರಿಯಾಗಲಿದೆ. ಜನರು ಮತ್ತೆ ಪೆಟ್ರೊಲ್ ಕಾರುಗಳತ್ತ ಸಾಗಬೇಕಾಗುತ್ತದೆ. ಕಾರು ಕಂಪನಿಗಳ ಹೂಡಿಕೆ ವ್ಯರ್ಥವಾಗುತ್ತದೆ.

ಕಂಪನಿಗಳು ಹಾಳಾಗಿ ಹೋಗಲಿ. ಗ್ರಾಹಕರಿಗೆ ಏನು ನಷ್ಟ ಎಂದು ಕೇಳಬಹುದು. ಗ್ರಾಹಕರು ಡೀಸಲ್ ಕಾರು ಖರೀದಿಸಲು ಪ್ರಮುಖ ಕಾರಣ. ಇಂಧನ ದಕ್ಷತೆ ಮತ್ತು ನಿರ್ವಹಣಾ ವೆಚ್ಚ ಕಡಿಮೆ ಮಾಡುವುದಾಗಿದೆ. ಡೀಸಲ್ ಕಾರು ದುಬಾರಿಯಾದ್ಮೆಲೆ ಒಂದೋ ಇಂಧನ ದಕ್ಷತೆ ಆಸೆ ಬಿಡಬೇಕಾಗುತ್ತದೆ. ಅಥವಾ ಅತ್ಯಧಿಕ ದರ ಪಾವತಿಸಿ ಡೀಸಲ್ ಕಾರು ಖರೀದಿಸುವ ಅನಿವಾರ್ಯತೆಗೆ ಸಿಲುಕುತ್ತಾರೆ.

ಸದ್ಯ ಡೀಸಲ್ ಕಾರು ಖರೀದಿ ಹೆಚ್ಚಾಗಿದೆ. ನೂತನ ತೆರಿಗೆಯಿಂದ ಹಣದುಬ್ಬರ ಹತೋಟಿಯಾಗಬಹುದು. ಆದರೆ ಕಾರು ಮಾರಾಟದ ಮೇಲೆ ಉಂಟಾಗುವ ನಷ್ಟವನ್ನೂ ಸರಕಾರ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಈಗಾಗಲೇ ಕಂಪನಿಗಳು ಬಡ್ಡಿದರ ಹೆಚ್ಚಳ ಮತ್ತು ಇಂಧನ ದರ ಹೆಚ್ಚಳದಿಂದ ಗ್ರಾಹಕರನ್ನು ಕಳೆದುಕೊಳ್ಳುತ್ತಿವೆ. ಮಧ್ಯಮ ವರ್ಗದವರಿಗೆ ವಿನೂತನ ಸಣ್ಣ ಡೀಸಲ್ ಕಾರುಗಳನ್ನು ಹೊರತರಲು ಆಲೋಚಿಸುತ್ತಿರುವ ಕಂಪನಿಗಳು ಹಿಂದೆ ಸರಿಯುವ ಸಾಧ್ಯತೆಯೂ ಇದೆ.

ಪ್ರಣಬ್ ಮುಖರ್ಜಿ ಗಮನಕ್ಕೆ ಇವೆಲ್ಲ ಸಂಗತಿಗಳು ಅರಿವಾದರೆ ಸಾಕು.

More from DriveSpark

Article Published On: Thursday, August 4, 2011, 15:17 [IST]
English summary
Finance minister Pranab Mukherjee has said that he is considering to enforce a luxury tax on diesel sold to passenger cars as a measure to control inflation. This luxury tax on diesel will not only affect carmakers but also car buyers as well as the economy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+