ಅಗ್ಗದ ಕಾರಿನ ಸಹವಾಸವೇ ಬೇಡವೆಂದ ಫೋರ್ಡ್

ಅತಿಕಡಿಮೆ ದರದ ಕಾರುಗಳು ಹೆಚ್ಚು ಬೇಡಿಕೆ ಪಡೆಯುವಲ್ಲಿ ವಿಫಲವಾಗುತ್ತಿವೆ. ಹೀಗಾಗಿ ಸದ್ಯ ಅಗ್ಗದ ಕಾರು ತರುವ ಯೋಜನೆ ಕಂಪನಿಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಕಳೆದ ತಿಂಗಳು ಜುಲೈನಲ್ಲಿ ಟಾಟಾ ನ್ಯಾನೊ ಮಾರಾಟ ಶೇಕಡಾ 64ರಷ್ಟು ಇಳಿಕೆ ಕಂಡಿತ್ತು. ಪ್ರತಿತಿಂಗಳು ಕನಿಷ್ಠ ಹತ್ತು ಸಾವಿರವಾದರೂ ನ್ಯಾನೊ ಮಾರಾಟ ಮಾಡಲು ಟಾಟಾ ಮೋಟರ್ಸ್ ಯತ್ನಿಸುತ್ತಿದೆ. ಆದರೆ ಕಂಪನಿಗೆ ಸದ್ಯ 9 ಸಾವಿರ ಯೂನಿಟ್ ಗಡಿದಾಟಲು ಸಾಧ್ಯವಾಗುತ್ತಿಲ್ಲ.
ಫಿಗೊದ ಅರ್ಧದಷ್ಟು ಮಾರಾಟವಿಲ್ಲದ ನ್ಯಾನೊ ಕಾರು ಮಾರುಕಟ್ಟೆಗೆ ಪೈಪೋಟಿ ನೀಡಲು ಇಚ್ಚಿಸುವುದಿಲ್ಲವೆಂದು ಫೋರ್ಡ್ ಇಂಡಿಯಾ ಅಧ್ಯಕ್ಷರಾದ ಮೈಕಲ್ ಬೊನೆಹ್ಹಾಮ್ ಹೇಳಿದ್ದಾರೆ. ಗ್ರಾಹಕರು ಹೆಚ್ಚು ಹ್ಯಾಚ್ ಬ್ಯಾಕ್ ಕಾರು ಖರೀದಿಸಲು ಇಚ್ಚಿಸುತ್ತಾರೆ. ಹೆಚ್ಚುವರಿ ಕಾರಿನ ಅಗತ್ಯ ಬಿದ್ದರೆ ನ್ಯಾನೊ ಕಾರು ಖರೀದಿಸುತ್ತಾರೆ ಎಂದು ನಮ್ಮ ಸ್ನೇಹಿತರು ಹೇಳಿದ್ದಾರೆ.


Click it and Unblock the Notifications