ಫಸ್ಟ್ ಕ್ಲಾಸ್ ಆಗಿದೆ ಪಸ್ಸಾಟ್ ಹೈಲೈನ್ ಕಾರು

ನೂತನ ಹೆಡ್ ಲೈಟ್, ಟೈಲ್ ಲೈಟ್, ಫಾಗ್ ಲ್ಯಾಂಪ್, ಬಂಪರ್ ಮತ್ತು ಎದುರಿನ ಗ್ರಿಲಿನ ನೂತನ ವಿನ್ಯಾಸ 2011ರ ಪಸ್ಸಾಟಿನ ಪ್ರಮುಖ ಹೈಲೈಟ್ಸ್. ಪಸ್ಸಾಟ್ ದರ 20 ಲಕ್ಷ ರು.ನಿಂದ ಆರಂಭವಾಗುತ್ತದೆ. ಅದರಲ್ಲಿ ಕೊಂಚ ದುಬಾರಿಯೆನಿಸುವ ಮಾಡೆಲ್ ಪಸ್ಸಾಟ್ ಹೈಲೈನ್. ಇದರ ದರ 29.31 ಲಕ್ಷ ರು.
ಸಾಕಷ್ಟು ಆಕರ್ಷಕ ಗ್ಯಾಜೆಟ್, ಸ್ಪೋರ್ಟಿ ಲುಕ್ ನೊಂದಿಗೆ ಬಂದಿರುವ ಪಸ್ಸಾಟ್ ಹೈಲೈನ್ ಬ್ಲೂಮೋಷನ್ ತಂತ್ರಜ್ಞಾನ ಹೊಂದಿದೆ. ಇದು ಇಂಧನ ಉಳಿತಾಯ ಮಾಡುವ ನೂತನ ತಂತ್ರಜ್ಞಾನವಾಗಿದೆ. ಈ ಕಾರಿನಲ್ಲಿ ಹಲವು ಸುರಕ್ಷಿತ ಮತ್ತು ಆರಾಮದಾಯಕತೆಯ ಫೀಚರ್ ಗಳಿವೆ.
ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೊಲ್ ಸಿಸ್ಟಮ್, ಡ್ಯಾಷ್ ಗೆ ಜೋಡಿಸಿರುವ ಮ್ಯೂಸಿಕ್ ಸಿಸ್ಟಮ್, ಎಸ್ಆರ್ಎಸ್ ಏರ್ ಬ್ಯಾಗ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಬ್ರೇಕ್ ವಿತರಣೆ ವ್ಯವಸ್ಥೆ, ಕ್ಷೆನನ್ ಹೆಡ್ ಲ್ಯಾಂಪ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಇದೆ.


Click it and Unblock the Notifications








