ಸೂಪರ್ ರಂಗಾ.. ಸ್ಕೋಡಾ ಸೂಪರ್ಬ್ ಕಾರು

2011ರ ಸ್ಕೋಡಾ ಸೂಪರ್ಬ್ 1968 ಸಿಸಿಯ, ನಾಲ್ಕು ಸಿಲಿಂಡರ್, ನಾಲ್ಕು ಕವಾಟದ ಡೀಸಲ್ ಎಂಜಿನ್ ಹೊಂದಿದೆ. 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಪ್ರತಿಲೀಟರ್ ಡೀಸಲ್ ಗೆ ಇದು 12.5 ಕಿ.ಮೀ. ಮೈಲೇಜ್ ನೀಡುತ್ತದೆ. ಸುರಕ್ಷತೆಯ ಸವಾರಿಗೆ ಸೂಕ್ತವಾಗಿ 8 ಏರ್ ಬ್ಯಾಗ್, ಆಂಟಿಲಾಕ್ ಬ್ರೇಕಿಂಗ್, ಇಬಿಡಿ, ಟೈರ್ ಪ್ರೆಷರ್ ಮೊನಿಟರ್, ಎದುರು ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹತ್ತು ಹಲವು ಫೀಚರ್ ಗಳಿವೆ.
ಇಷ್ಟೇ ಅಲ್ಲದೇ ನೂತನ ಸ್ಕೋಡಾ ಸೂಪರ್ಬ್ ನಲ್ಲಿರುವ ಹಲವು ಆಕರ್ಷಕ ಫೀಚರ್ ಗಳು ಗಮನ ಸೆಳೆಯುತ್ತವೆ. ಕಳ್ಳರು ಬಂದರೆ ಎಚ್ಚರಿಸುವ ಆಂಟಿ-ಥೆಪ್ಟ್ ಅಲಾರಂ, ರಿಮೋಟ್ ಕಂಟ್ರೊಲ್ ಮೂಲಕ ಡೋರ್, ಬೂಟ್ ಲಿಡ್, ಎಲೆಕ್ಟ್ರಿಕ್ ಸನ್ ರೂಫ್ ನಿರ್ವಹಣೆ ಮಾಡಬಹುದು. ಇಂತಹ ಅಗಣಿತ ಫೀಚರ್ ಗಳ ಈ ಕಾರಿಗೆ ಸುಮಾರು 25 ಲಕ್ಷ ರು. ಹೆಚ್ಚಾಗದು. ಇದಕ್ಕಿಂತ ಕೊಂಚ ದುಬಾರಿಯ ಪಸ್ಸಾಟ್ ಕಾರಿಗೆ ಮುಂದಿನ ಪುಟ ನೋಡಿ.


Click it and Unblock the Notifications