ಭಾರತ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ಹಬ್?

ಭಾರತ ಮತ್ತು ಚೀನಾ ಮುಂತಾದ ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೆಚ್ಚಿನ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಯೋಜಿಸುತ್ತಿವೆ. ಪ್ಲಗ್ ಇನ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಕುರಿತು ಗ್ರಾಹಕರು ತೋರುವ ಆಸಕ್ತಿ ಮತ್ತು ಪ್ರತಿಕ್ರಿಯೆಗಳನ್ನು ಕಂಡು ಹೆಚ್ಚು ಕಂಪನಿಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳತ್ತ ಗಮನ ಹರಿಸಿವೆ ಎಂದು ಅರ್ನೆಸ್ಟ್ ಆಂಡ್ ಯಂಗ್ ನ ಇತ್ತೀಚಿನ ಅಧ್ಯಯನ ಬಹಿರಂಗಪಡಿಸಿದೆ.
ಈಗ ಹೈಬ್ರಿಡ್ ಮತ್ತು ಪ್ಲಗ್ ಇನ್ ಹೈಬ್ರಿಡ್ ಕಾರುಗಳಿಗೆ ಅಮೆರಿಕ, ಜಪಾನ್, ಯುರೋಪ್ ಮಾತ್ರವಲ್ಲದೇ ಚೀನಾ ಮತ್ತು ಭಾರತಗಳಲ್ಲಿಯೂ ಬೇಡಿಕೆಯಿದೆ ಎಂದು ಅರ್ನೆಸ್ಟ್ ವರದಿ ತಿಳಿಸಿದೆ. "ಇಂಧನ ದರ ಹೆಚ್ಚಳ ಮುಂತಾದ ಕಾರಣಗಳಿಂದ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳತ್ತ ಗಮನ ಹರಿಸುತ್ತಿದ್ದಾರೆ" ಎಂದು ವಾಹನ ವಿಶ್ಲೇಷಕರೊಬ್ಬರು ಹೇಳುತ್ತಾರೆ.
"ಮುಂಬರುವ ವರ್ಷಗಳಲ್ಲಿ ಹಲವು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಯೋಜಿಸಿದ್ದೇವೆ" ಎಂದು ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಕಲ್ ಸಿಒಒ ಆರ್. ಚಂದ್ರಮೌಲಿ ಹೇಳಿದ್ದಾರೆ. ಬಿಎಂಡಬ್ಲ್ಯು ಕೂಡ ಒಂದೆರಡು ವರ್ಷಗಳಲ್ಲಿ ದೇಶಕ್ಕೆ ಎಲೆಕ್ಟ್ರಿಕ್ ಕಾರುಗಳನ್ನು ಹೊರತರುವ ನಿರೀಕ್ಷೆಯಿದೆ.


Click it and Unblock the Notifications








