ಬುಗಾಟಿ ಹಿಂದಕ್ಕೆ, ಅವೆಂಟಡೊರ್ ಜಗತ್ತಿನ ವೇಗದ ಕಾರು?

ಲಂಬೊರ್ಗಿನಿ ಅವೆಂಟಡೊರ್ ಎಂಬ ಸೆನ್ಶೆಷನಲ್ ಸೂಪರ್ ಕಾರು ಬುಗಾಟಿ ವೆರೋನ್ ಹಿಂದಿಕ್ಕಲಿದೆ ಎಂದು ಕೆಲವು ವರದಿಗಳು ಹೇಳಿವೆ. ಈ ಕುರಿತು ಕಂಪನಿಯ ಕಡೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ. ಆದರೆ ಅದಕ್ಕಿಂತಲೂ ಮುಂದೆ ವೇಗವಾಗಿ ಹರಡುತ್ತಿರುವ ಸುದ್ದಿಗಳನ್ನು ನಂಬುವುದೋ ಬಿಡುವುದೋ ಆಮೇಲೆ ಯೋಚಿಸೋಣ.
ಈಗಾಗಲೇ ಆನ್ ಲೈನ್ ಬ್ಲಾಗುಗಳಲ್ಲಿ ಲಂಬೊರ್ಗಿನಿ ಅವೆಂಟಡೊರ್ ನ ಸ್ಪೈ ಶಾಟ್ ಚಿತ್ರಗಳನ್ನು ಹಾಕಲಾಗಿದೆ. ಆ ಚಿತ್ರಗಳನ್ನು ನೋಡುತ್ತಿದ್ದರೆ ನೂತನ ಕಾರು ಬುಗಾಟಿ ವೆರೊನ್ ರೀತಿಯೇ ಕಾಣಿಸುತ್ತದೆ. ಆದರೆ ಈ ಕಾರಿನಲ್ಲಿ ಡ್ಯೂಯಲ್ ಎಗ್ಷಾಟ್ ಹೊಂದಿರಲಿದೆಯೆಂದು ಹೇಳಲಾಗಿದೆ.
ಮಾರುಕಟ್ಟೆ ಊಹಾಪೋಹಗಳ ಪ್ರಕಾರ ರಸ್ತೆಗಿಳಿಯಲಿರುವ ಸೂಪರ್ ಕಾರು ಅವೆಂಟಡೊರ್ 1 ಸಾವಿರ ಹಾರ್ಸ್ ಪವರಿನ ಎಂಜಿನ್ ಹೊಂದಿರಲಿದೆಯಂತೆ. ಈ ಹಿಂದೆ 700 ಹಾರ್ಸ್ ಪವರ್ ಎಂಜಿನ್ ಹೊಂದಿರಲಿದೆ ಎಂಬ ವದಂತಿಯಿತ್ತು. ಆದರೆ ಈ ಕಾರು ಯಾವಾಗ ರಸ್ತೆಗಿಳಿಯಲಿದೆ ಎಂದು ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ.
ಆದರೆ ಈಗಾಗಲೇ ಬುಗಾಟಿ ವೆರೊನ್ ಗರಿಷ್ಠ ವೇಗ ಪ್ರತಿಗಂಟೆಗೆ 431.07 ಕಿ.ಮೀ.(267.85 ಮೈಲು) ಇದೆ. ಭಾರತದಲ್ಲಿ ಇದರ ಸುಮಾರು 13.63 ಕೋಟಿ ರು. ಆಸುಪಾಸಿನಲ್ಲಿದೆ. ಅವೆಂಟಡೊರ್ ಇದಕ್ಕಿಂತ ವೇಗದ ಕಾರೆಂದು ಕಂಪನಿ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.


Click it and Unblock the Notifications








