ಹ್ಯುಂಡೈ ಕಾರ್ ಬಂದ್ಮೇಲೆ ಎಲ್ನೋಡಿದ್ರೂ ಕಾರ್ ಕಾರ್!

ಕಾರಣ ಮಾರುತಿ ಸುಜುಕಿ ಆಲ್ಟೋ ಕಾರಿಗೆ ಮಾರುಕಟ್ಟೆಯಲ್ಲಿರುವ ಬೇಡಿಕೆ ಹ್ಯುಂಡೈ ಕಣ್ಣು ಕುಕ್ಕಿದೆ. ಹೀಗಾಗಿ ಕೋರಿಯನ್ ಈ ಸಂಸ್ಥೆ ಕಡಿಮೆ ಬಜೆಟ್ಟಿನ ಹೊಸ ಕಾರ್ ಉತ್ಪಾದಿಸಿ ಆಲ್ಟೋ ಕಾರಿಗೆ ಪ್ರತಿಸ್ಪರ್ಧಿಯಾಗಿ ರೋಡ್ ರೇಸ್ ನಡೆಸಲಿದೆ.
ಹ್ಯುಂಡೈ ಈ ಹೊಸ H800 ಕಾರಿನ ಎಂಜಿನ್ 800 ಸಿಸಿಯದಾಗಲಿದ್ದು, ಬೆಲೆ ಕೂಡ ಆಲ್ಟೋ ಕಾರಿಗೆ ಸಮೀಪವಾಗಿರಲಿದೆ. ನವೀನ ಮಾದರಿಯ ಡಿಸೈನ್ ಹೊಂದಲಿರುವ ಈ ಕಾರು ವೆರ್ನಾ ಕಾರಿನ ವಿನ್ಯಾಸವನ್ನು ತಕ್ಕಮಟ್ಟಿಗೆ ಹೋಲಲಿದೆ.
ಸಾಂಟ್ರೋ ಕಾರ್ ಪ್ಲಾಟ್ ಫಾರ್ಮ ಉಪಯೋಗಿಸುವ ಮೂಲಕ ಉತ್ಪಾದನೆಯ ವೆಚ್ಚ ಕಡಿತಗೊಳಿಸುವ ಯೋಜನೆಯನ್ನು ಹ್ಯುಂಡೈ ಕಾರ್ಯಗತಗೊಳಿಸಲಿದೆ.
ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿವ ವರ್ಷದ ಪ್ರಾರಂಭದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಹ್ಯುಂಡೈ ನ ಹೊಸ ಈ ಕಾರು, ಸಣ್ಣ ಕಾರುಗಳ ಹಾಗೂ ಕಡಿಮೆ ಬಜೆಟ್ಟಿನ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಮಾಡುವುದು ಖಂಡಿತ!


Click it and Unblock the Notifications








