ರೆಡಿ ಗೊ; ಸ್ವಿಫ್ಟ್‌ ಓವರ್‌ಟೇಕ್ ಮಾಡಿತೇ ಹ್ಯುಂಡೈ?

ನಿಮ್ಮ ನೆಚ್ಚಿನ ಕಾರು ಯಾವುದು ಎಂದು ನೀವು ಯಾರನ್ನಾದರೂ ವಿಚಾರಿಸಿದರೆ ಬಹುತೇಕರಲ್ಲೂ ಬರುವ ಮೊದಲ ಉತ್ತರ ಮಾರುತಿ ಸುಜುಕಿ 'ಸ್ವಿಫ್ಟ್' ಎಂದಾಗಿರುತ್ತದೆ. ದೇಶದ ಮಧ್ಯಮ ವರ್ಗದ ಜನರು ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಅತಿ ಹೆಚ್ಚು ಆಶ್ರಯಿಸಿಕೊಂಡಿರುತ್ತಾರೆ.

ಇದೇ ಕಾರಣಕ್ಕಾಗಿ ಪ್ರತಿ ವರ್ಷವೂ ಮಾರಾಟದಲ್ಲಿ ಅಗ್ರ ಐದರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವಲ್ಲಿ ಸ್ವಿಫ್ಟ್ ಯಶಸ್ವಿಯಾಗಿತ್ತು. ಡ್ರೈವಿಂಗ್ ಕೂಡಾ ಅಷ್ಟೇ ಆರಾಮದಾಯಕವಾಗಿರುವುದು, ಉತ್ತಮ ನಿರ್ವಹಣೆ ಹಾಗೂ ಮೈಲೇಜ್ ಸ್ವಿಫ್ಟ್ ವಿಶೇಷತೆಗಳಾಗಿವೆ.

ಏತನ್ಮಧ್ಯೆ ಮಾರುಕಟ್ಟೆಯಲ್ಲಿ ಮಾರುತಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ದೇಶದ ನಂ.2 ವಾಹನ ತಯಾರಕ ಕಂಪನಿ ಹ್ಯುಂಡೈ ಇದೀಗ ಮಾರುತಿಗೆ ಸೆಡ್ಡು ನೀಡಲು ತಯಾರಾಗುತ್ತಿದೆ. ಪ್ರಮುಖವಾಗಿಯೂ ಮಾರುತಿಯ ಸ್ವಿಫ್ಟ್ ಆವೃತ್ತಿಯನ್ನು ಗುರಿಯಾಗಿರಿಸಿಕೊಂಡಿರುವ ಈ ಕೊರಿಯಾ ವಾಹನ ತಯಾರಕ ಕಂಪನಿ 'ಹ್ಯುಂಡೈ ಬಿಎ' ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಈ ಮೂಲಕ ಮಾರುತಿ ಮಾರುಕಟ್ಟೆಯನ್ನು ಕೊಳ್ಳೆ ಹೊಡೆಯುವುದು ಹ್ಯುಂಡೈ ಗುರಿಯಾಗಿದೆ. ಭಾರತವು ಕಾರು ಉತ್ಸಾಹಿ ಗ್ರಾಹಕರ ಮಾರುಕಟ್ಟೆ ಹೊಂದಿರುವುದರಿಂದ ಹ್ಯುಂಡೈ ಬಿಎ ಕಾರಿಗೆ ಉತ್ತಮ ಪ್ರತಿಕ್ರಿಯೆ ದೊರಕಲಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಬೇಡ.

ಡೀಸೆಲ್ ವೆರಿಯಂಟ್ ಇದೆಯಾ..?
ಸಮಕಾಲೀನ ಪರಿಸ್ಥಿತಿಯಲ್ಲಿ ಪೆಟ್ರೋಲ್ ದರ ಗಣನೀಯವಾಗಿ ವರ್ಧಿಸುತ್ತಿರುವುದರಿಂದ ದೇಶದ ಗ್ರಾಹಕರು ಡೀಸೆಲ್ ಕಾರುಗಳತ್ತ ವಾಲುತ್ತಿರುವ ಪರಿಯನ್ನು ನಾವು ಕಂಡಿರುತ್ತೇವೆ. ಅಂದ ಹಾಗೆ ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲೂ ಹ್ಯುಂಡೈ ಬಿಎ ಲಭ್ಯವಿರಲಿದೆ. ಇದು ಕಾರು ಪ್ರಿಯರ ಉತ್ಸಾಹ ಇಮ್ಮಡಿಗೊಳಿಸಲು ಕಾರಣವಾಗಿದೆ.

ಐ10 ಬದಲಿಯಾಗಲಿದೆಯೇ...?
ಇನ್ನು ಕೆಲವರ ಪ್ರಕಾರ ಹ್ಯುಂಡೈ ಬಿಎ ಈಗಾಗಲೇ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿರುವ ಐ10 ಮಾದರಿಗೆ ಬದಲಿ ಆವೃತ್ತಿಯಾಗಿರಲಿದೆ. ಆದರೆ ಐ10 ಡೀಸೆಲ್ ವೆರಿಯಂಟ್ ಇನ್ನಷ್ಟೇ ಮಾರುಕಟ್ಟೆಗೆ ಅಪ್ಪಳಿಸಲಿರುವುದರಿಂದ ಐ10-ಐ20 ಮಾರುಕಟ್ಟೆಗೆ ಧಕ್ಕೆಯಾಗದಂತೆ ಹ್ಯುಂಡೈ ಬಿಎ ಪ್ರವೇಶಿಸುವ ನಿರೀಕ್ಷೆಯಿದೆ.

ವಿನ್ಯಾಸ, ಎಂಜಿನ್ ಹೇಗೆ..?
ನೂತನ ಹ್ಯುಂಡೈ ಬಿಎ ಜನಪ್ರಿಯ ಫ್ಲೂಯಡಿಕ್ ವಿನ್ಯಾಸವನ್ನು ಹೊಂದಿರಲಿದೆ. ಇದರ ಪೆಟ್ರೋಲ್ ಆವೃತ್ತಿಯು 1.2 ಲೀಟರ್ ಹಾಗೂ ಡೀಸೆಲ್ ಎಂಜಿನ್ 1.1 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಕೊರಿಯಾ ಆರ್ ಆಂಡ್ ಡಿ ಸೆಂಟರ್‌ನಲ್ಲಿ ಹ್ಯುಂಡೈ ಕಾರನ್ನು ವಿನ್ಯಾಸಗೊಳಿಸಲಾಗಿದ್ದು, ಹ್ಯುಂಡೈ ಮೋಟಾರ್ಸ್ ಇಂಡಿಯಾ ಇಂಜಿನಿಯರ್‌ಗಳು ಸಹ ಭಾಗಿಯಾಗಿದ್ದರು.

ಹ್ಯುಂಡೈ ಬಿಎ (Hyundai BA)

ಹ್ಯುಂಡೈ ಬಿಎ (Hyundai BA)

ದಕ್ಷಿಣ ಕೊರಿಯಾದಲ್ಲಿ ಹ್ಯುಂಡೈ ಬಿಎ ಪರೀಕ್ಷೆ ಯಶಸ್ವಿಯಾಗಿ ಸಾಗಿದೆ. ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ ಸ್ವಿಫ್ಟ್‌ಗೆ ಸೆಡ್ಡು ನೀಡಲಿರುವ ಹ್ಯುಂಡೈ ಬಿಎ ಮುಂಬರುವ ಹಬ್ಬದ ಸೀಸನ್‌ನಲ್ಲಿ ಬಿಡುಗಡೆಯಾಗಲಿದೆ.

ಹ್ಯುಂಡೈ ಬಿಎ (Hyundai BA)

ಹ್ಯುಂಡೈ ಬಿಎ (Hyundai BA)

ಇದರೊಂದಿಗೆ ದೇಶದಲ್ಲಿನ ಹ್ಯುಂಡೈ ಮಾರುಕಟ್ಟೆ ಮತ್ತಷ್ಟು ವ್ಯಾಪಿಸಲಿದೆ. ಈಗಾಗಲೇ ದೇಶದಲ್ಲಿ ಹ್ಯುಂಡೈ ಐ10, ಐ20 ಜತೆ ಸಾಂಟ್ರೊ ಹಾಗೂ ಇಯಾನ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿವೆ.

ಹ್ಯುಂಡೈ ಬಿಎ (Hyundai BA)

ಹ್ಯುಂಡೈ ಬಿಎ (Hyundai BA)

ಇನ್ನು ಸರಳವಾಗಿ ಹೇಳಬೇಕೆಂದರೆ ದೇಶದ ಕಾಂಪಾಕ್ಟ್ ಕಾರು ಸೆಗ್ಮೆಂಟ್‌ನಲ್ಲಿ ಮಾರುತಿ ಸ್ವಿಫ್ಟ್ ಆಳ್ವಿಕೆಯನ್ನು ಸ್ಥಾಪಿಸಿದೆ. ಹೀಗಾಗಿ 2012ನೇ ಸಾಲಿನ ಮಾರಾಟದಲ್ಲಿ ನಂ.1 ಸ್ಥಾನದಲ್ಲಿ ಮಾರುತಿ ಬಗ್ಗುಬಡಿಯುವುದು ಹ್ಯುಂಡೈ ಗುರಿಯಾಗಿದೆ.

ಹ್ಯುಂಡೈ ಬಿಎ (Hyundai BA)

ಹ್ಯುಂಡೈ ಬಿಎ (Hyundai BA)

ಕಾರ್ಸ್‌ಸ್ಕೂಪ್ ಬ್ಲಾಗ್‌ಸ್ಪಾಟ್ ಡಾಟ್ ಕಾಮ್‌ನಿಂದ ಸೆರೆಯಾಗಿರುವ ಆಕರ್ಷಕ ಹ್ಯುಂಡೈ ಬಿಎ ಸ್ಪೈ ಷಾಟ್ಸ್

Hyundai BA

Hyundai BA

ಹ್ಯುಂಡೈ ಬಿಎ

Hyundai BA

Hyundai BA

ಹ್ಯುಂಡೈ ಬಿಎ

Hyundai BA

Hyundai BA

ಹ್ಯುಂಡೈ ಬಿಎ

Hyundai BA

Hyundai BA

ಹ್ಯುಂಡೈ ಬಿಎ

Hyundai BA

Hyundai BA

ಹ್ಯುಂಡೈ ಬಿಎ

More from DriveSpark

Article Published On: Thursday, January 31, 2013, 14:24 [IST]
English summary
Hyundai Motors appears to be desperate to wrest back lost market share in India. The Korean carmaker is developing a new car under the code name BA that will be aimed at the segment leader, Maruti Suzuki Swift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+