ಹೊಸ ಅಂಬಾಸಡರ್ "ವೀರ್": 3.30 ಲಕ್ಷ ರು.

ನೂತನ ವೀರ್ ಅಂಬಾಸಡರ್ ಪ್ಲಾಟ್ ಫಾರ್ಮ್ ನಲ್ಲಿ ರಸ್ತೆಗಿಳಿದಿದೆ. ವೀರ್ ಡೀಸಲ್(ಬಿಎಸ್ 3) ಮತ್ತು ಸಿಎನ್ ಜಿ ಬಿಎಸ್ 5) ಆಯ್ಕೆಗಳಲ್ಲಿ ದೊರಕುತ್ತಿದೆ. ಇದರೊಂದಿಗೆ ಕಂಪನಿಯು ವೀರ್ ಎಲ್ ಎಕ್ಸ್ ಎಂಬ ಆವೃತ್ತಿಯನ್ನೂ ಪರಿಚಯಿಸಲಿದೆ. ವೀರ್ ದರ 3.30 ಲಕ್ಷ ರು.ನಿಂದ ಆರಂಭವಾಗುತ್ತದೆ.
ಈ ಆರ್ಥಿಕ ವರ್ಷದಲ್ಲಿ ಇನ್ನಷ್ಟು ಆಕರ್ಷಕ ಕಾರುಗಳು ರಸ್ತೆಗಿಳಿಯುವ ನಿರೀಕ್ಷೆಯಿದೆ. ನೂತನ ವೀರ್ 0.8 ಟನ್ ಅಂದ್ರೆ 800 ಕೆ.ಜಿ. ಭಾರ ಹೊರುವ ಸಾಮರ್ಥ್ಯದ ಎಸ್ ಸಿವಿ ಆಗಿದೆ. ಸದ್ಯ ವೀರ್ ಪಿಕಪ್ ಕಾರನ್ನು ಕಲ್ಕತ್ತಾ ಮಾರುಕಟ್ಟೆಗೆ ಪರಿಚಯಿಸಲಾಗಿದೆ.. ಈ ವಾಹನ ಕರ್ನಾಟಕದ ಮಾರುಕಟ್ಟೆಗೆ ಪ್ರಸಕ್ತ ಆರ್ಥಿಕ ವರ್ಷದೊಳಗೆ ತಲುಪುವ ನಿರೀಕ್ಷೆಯಿದೆ.
ಇತ್ತೀಚೆಗೆ ವಾರ್ಷಿಕ ವಿತ್ತ ಸಭೆಯಲ್ಲಿ ಕಂಪನಿಯ ಚೇರ್ಮನ್ ಸಿ ಕೆ ಬಿರ್ಲಾ ನೂತನ ವಾಹನಗಳನ್ನು ಪರಿಚಯಿಸುವ ಇಂಗಿತ ವ್ಯಕ್ತಪಡಿಸಿದ್ದರು. ನೂತನ ಕಾರುಗಳನ್ನು ಪಶ್ಚಿಮ ಬಂಗಾಳದ ಉತ್ತರಪುರ ಘಟಕದಲ್ಲಿ ನಿರ್ಮಿಸುವ ನಿರೀಕ್ಷೆಯಿದೆ. ಕಂಪನಿಯು ಚೆನ್ನೈ ಘಟಕದಲ್ಲಿ ಮಿತ್ಸುಬಿಸಿ ಮಾದರಿಯ ಕಾರುಗಳನ್ನು ಉತ್ಪಾದಿಸುತ್ತಿದೆ.


Click it and Unblock the Notifications








