ಸೆಪ್ಟಂಬರ್ ನಲ್ಲಿ ಮಹೀಂದ್ರ ಎಸ್ ಯುವಿ ರಸ್ತೆಗಿಳಿಯುತ್ತಾ?

ಡಬ್ಲ್ಯು201 ದರ ಸುಮಾರು 13-15 ಲಕ್ಷ ರು. ಇರುವ ನಿರೀಕ್ಷೆಯಿದೆ. ನೂತನ ಎಸ್ ಯುವಿನಲ್ಲಿ ಹಲವು ಫೀಚರ್ ಗಳಿರುವ ನಿರೀಕ್ಷೆಯಿದೆ. ನೂತನ ಕಾರು ಫೋರ್ ವೀಲ್ ಮತ್ತು ಟೂವೀಲ್ ಡ್ರೈವ್ ಆಯ್ಕೆಗಳಲ್ಲಿ ದೊರಕುವ ನಿರೀಕ್ಷೆಯಿದೆ. ಇವೆರಡು ಕಾರುಗಳು ಒಂದೇ ಶುಭ ಮಹೂರ್ಥದಲ್ಲಿ ರಸ್ತೆಗಿಳಿಯುವ ನಿರೀಕ್ಷೆಯನ್ನು ವಾಹನೋದ್ಯಮದ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ.
ನೂತನ ಡಬ್ಲ್ಯು201 ಕಾರು 2.2 ಲೀಟರಿನ ಮೆವಾಕ್ ಡೀಸಲ್ ಎಂಜಿನ್ ಹೊಂದಿರಲಿದೆ. ಇದು 204 ಹಾರ್ಸ್ ಪವರ್ ನೀಡಲಿದೆ. ಡೀಸಲ್ ಮತ್ತು ಪೆಟ್ರೊಲ್ ಆವೃತ್ತಿಗಳೆರಡೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ನಿರೀಕ್ಷೆಯಿದೆ.
ಒಂದು ವರದಿಯ ಪ್ರಕಾರ ನೂತನ ಕಾರಿಗೆ ಗ್ರಾಹಕರನ್ನು ಸೆಳೆಯಲು ಸಿದ್ಧವಾಗುವಂತೆ ಡೀಲರ್ ಗಳಿಗೆ ಕಂಪನಿ ಸೂಚಿಸಿದೆ ಎನ್ನಲಾಗಿದೆ. ಮಹೀಂದ್ರ ಕಾರು ಅಭಿಮಾನಿ ಬಳಗವು ನೂತನ ಕಾರಿಗೆ ಹೆಚ್ಚು ತಿಂಗಳು ಕಾಯುವ ಅಗತ್ಯವಿಲ್ಲವೆಂದು ಮೂಲಗಳು ಹೇಳಿವೆ.


Click it and Unblock the Notifications








