ಗೂಗಲ್ ನಲ್ಲಿ ವಾಹನ ಹುಡುಕಾಟ, ಯಾರು ಫಸ್ಟ್

ಭಾರತದಲ್ಲಿ ಹೆಚ್ಚು ಜನರು ವಾಹನ ಖರೀದಿಸುವ ಮುನ್ನ ಇಂಟರ್ ನೆಟ್ ಮುಂದೆ ಸಾಕಷ್ಟು ತಡಕಾಡುತ್ತಾರೆ ಎಂಬುದನ್ನು ಗೂಗಲ್ ಇಂಡಿಯಾ ಆಟೋ ರಿಪೋರ್ಟ್ ಹೇಳಿದೆ. ಗೂಗಲ್ ಕನ್ನಡ ವಾಹನ ವಿಭಾಗದಲ್ಲಿ ದಟ್ಸ್ ಕನ್ನಡ ಆಟೋಮೊಬೈಲ್ಸ್ ಮುಂದಿದೆ ಎಂಬುದನ್ನು ಕೂಡ ಮರೆಯುವಂತ್ತಿಲ್ಲ.
"ಗ್ರಾಹಕರ ವಾಹನ ಖರೀದಿ ನಿರ್ಧಾರವನ್ನು ಇಂಟರ್ ನೆಟ್ ಮೂಲಕ ಗಟ್ಟಿಗೊಳಿಸುತ್ತಾರೆ" ಎಂದು ಗೂಗಲ್ ಇಂಡಿಯಾದ ಉಪಾಧ್ಯಕ್ಷರಾದ ರಾಜನ್ ಆನಂದನ್ ಹೇಳಿದ್ದಾರೆ. ಕೇವಲ ಗ್ರಾಹಕರು ಮಾತ್ರವಲ್ಲದೇ ಕಂಪನಿಗಳು ಜಾಹೀರಾತು, ಪ್ರಚಾರಕ್ಕೆ ಹೆಚ್ಚಾಗಿ ಇಂಟರ್ ನೆಟ್ ಅವಲಂಬಿಸಿದ್ದಾರೆ ಎಂದು ವರದಿ ಹೇಳಿದೆ.
ಪತ್ರಿಕೆ, ಟೆಲಿವಿಷನ್ ಗಳಿಗಿಂತ ವಾಹನ ಮಾಹಿತಿಯನ್ನು ಇಂಟರ್ ನೆಟ್ ಮೂಲಕ ಹೆಚ್ಚು ಜನರು ಪಡೆದುಕೊಳ್ಳುತ್ತಾರೆ ಎಂಬುದು ವರದಿಯ ಪ್ರಮುಖ ಸಾರ. ಕಳೆದೆರಡು ವರ್ಷಗಳಲ್ಲಿ ಈ ಟ್ರೆಂಡ್ ಗಣನೀಯವಾಗಿ ಏರಿಕೆ ಕಂಡಿದೆ.
ಗೂಗಲ್ ನಲ್ಲಿ ವಾಹನ ಹುಡುಕಾಟ ಟ್ರೆಂಡ್ 2009ರಲ್ಲಿ ಶೇಕಡ 110ರಷ್ಟು ಮತ್ತು 2010ರಲ್ಲಿ ಶೇಕಡ 110ರಷ್ಟು ಪ್ರಗತಿ ಕಂಡಿದೆ. 2011ರ ಮೊದಲ ಆರು ತಿಂಗಳಲ್ಲಿ ಈ ಟ್ರೆಂಡ್ ಶೇಕಡ 72ರಷ್ಟು ಪ್ರಗತಿ ಕಂಡಿದೆ. ಭಾರತೀಯ ಗ್ರಾಹಕರು ವಾಹನ ಖರೀದಿಯ ಮುನ್ನ ಸಾಕಷ್ಟು ಅಧ್ಯಯನ ಮಾಡುತ್ತಾರೆ ಎಂದು ವರದಿ ಹೇಳಿದೆ.
ದೇಶದ ಗ್ರಾಹಕರು ಎರಡರಿಂದ 6 ಲಕ್ಷ ರು.ವರೆಗಿನ ಕಾರುಗಳನ್ನು ಇಂಟರ್ ನೆಟ್ ನಲ್ಲಿ ಹೆಚ್ಚು ಹುಡುಕುತ್ತಾರೆ. 2010ರಲ್ಲಿ ಡೀಸಲ್ ಕಾರುಗಳ ಹುಡುಕಾಟ ಶೇಕಡ 114ರಷ್ಟು ಏರಿಕೆ ಕಂಡಿದೆ. 2010ರಿಂದ ಮೇ 2011ರ ತನಕ ಸುಮಾರು 25 ಹೊಸ ಕಾರುಗಳು, ಆವೃತ್ತಿಗಳು ರಸ್ತೆಗಿಳಿದಿವೆ. ಇದರಲ್ಲಿ ಮಾರುತಿ ಕಾರನ್ನು ಹೆಚ್ಚು ಜನರು ಸರ್ಚ್ ಮಾಡಿದ್ದಾರೆ.
ಗ್ರಾಹಕರು ಸರ್ಚ್ ಮಾಡಿದ ಟಾಪ್ ಟೆನ್ ಕಾರುಗಳು
* ಮಾರುತಿ ಆಲ್ಟೊ ಕೆ10
* ಫೋರ್ಡ್ ಫಿಗೊ
* ಹ್ಯುಂಡೈ ಐ10 ನೆಕ್ಸ್ಟ್ ಜೆನ್
* ಮಾರುತಿ ಕಿಝಾಷಿ
* ಷೆವರ್ಲೆ ಬೀಟ್
* ನಿಸ್ಸಾನ್ ಮೈಕ್ರಾ
* ಫೋಕ್ಸ್ ವ್ಯಾಗನ್ ಪೊಲೊ
* ಟೊಯೊಟಾ ಎಟಿಯೋಸ್
* ಮಾರುತಿ ಎಸ್ಎಕ್ಸ್4 ಡೀಸಲ್
ಜನರು ಹೆಚ್ಚು ಸರ್ಚ್ ಮಾಡಿದ ವಾಹನ ಕಂಪನಿಗಳು
* ಮಾರುತಿ
* ಹೋಂಡಾ
* ಹ್ಯುಂಡೈ
* ಟಾಟಾ ಮೋಟರ್ಸ್
* ಟೊಯೊಟಾ,
* ಫೋರ್ಡ್
* ಫೋಕ್ಸ್ ವ್ಯಾಗನ್
* ಫಿಯೆಟ್
ಹೆಚ್ಚು ಸರ್ಚ್ ಮಾಡಿದ ಬೈಕ್ ಬ್ರಾಂಡ್
* ಹೀರೋ ಹೋಂಡಾ
* ಬಜಾಜ್
* ಯಮಾಹ
* ಟಿವಿಎಸ್


Click it and Unblock the Notifications








