ಟೋಲ್‌ ಶುಲ್ಕ ಮಾಹಿತಿ ತಿಳಿಯಲು ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್ ಅಳವಡಿಕೆ

ನಿಗದಿತ ಸ್ಥಳಗಳನ್ನು ಯಾವುದೇ ಅಡೆತಡೆಗಳಿಲ್ಲದೆ ತಲುಪಲು ಗೂಗಲ್ ಮ್ಯಾಪ್ ಬಳಕೆಯು ಸಾಕಷ್ಟು ಸಹಕಾರಿಯಾಗಿದ್ದು, ಬಳಕೆದಾರರಿಗೆ ಮ್ಯಾಪ್ ಮೂಲಕ ಗೂಗಲ್ ಕಂಪನಿಯು ಸಾಕಷ್ಟು ಹೊಸ ವೈಶಿಷ್ಟ್ಯತೆಗಳನ್ನು ನೀಡುತ್ತಿದೆ.

ಟೋಲ್‌ ಶುಲ್ಕ ಮಾಹಿತಿ ತಿಳಿಯಲು ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್ ಅಳವಡಿಕೆ

ಗೂಗಲ್ ಕಂಪನಿಯು ಬಳಕೆದಾರರಿಗೆ ಸಹಕಾರಿಯಾಗಲು ನಿರಂತರವಾಗಿ ಗೂಗಲ್ ಮ್ಯಾಪ್‌‌ನಲ್ಲಿ ಹೊಸ ನವೀಕರಣಗಳನ್ನು ನೀಡುತ್ತಿದ್ದು, ಇದೀಗ ಹೊಸ ಅಪ್‌ಡೇಟ್ ಮೂಲಕ ಬಳಕೆದಾರರು ನ್ಯಾವಿಗೇಟ್ ಆರಂಭಿಸುವ ಪ್ರಾರಂಭಿಸುವ ಮುನ್ನು ಗೂಗಲ್ ನಕ್ಷೆಯಲ್ಲಿ ನಿಮ್ಮ ಗಮ್ಯಸ್ಥಾನದ ಅಂದಾಜು ಟೋಲ್ ಶುಲ್ಕ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಟೋಲ್‌ ಶುಲ್ಕ ಮಾಹಿತಿ ತಿಳಿಯಲು ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್ ಅಳವಡಿಕೆ

ಹೊಸ ವೈಶಿಷ್ಟ್ಯತೆಯನ್ನು ಕಂಪನಿಯು ಈ ವರ್ಷದ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಘೋಷಣೆ ಮಾಡಿದ ನಂತರ ಇದೀಗ ಟೆಕ್ ದೈತ್ಯ ಅಂಡ್ರಾಯಿಡ್ ಮತ್ತು ಐಎಸ್ಓ ಪ್ಲಾಟ್‌ಫಾರ್ಮ್‌ಗಳಲ್ಲಿ ಗೂಗಲ್ ಮ್ಯಾಪ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯತೆಯ ಸೇವೆಯನ್ನು ನೀಡಲಾಗುತ್ತಿದೆ.

ಟೋಲ್‌ ಶುಲ್ಕ ಮಾಹಿತಿ ತಿಳಿಯಲು ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್ ಅಳವಡಿಕೆ

ಕಂಪನಿಯ ಮಾಹಿತಿಗಳ ಪ್ರಕಾರ ಹೊಸ ವೈಶಿಷ್ಟ್ಯತೆಯೊಂದಿಗೆ ಬಳಕೆದಾರರು ಟೋಲ್ ರಸ್ತೆಗಳು ಮತ್ತು ಸಾಮಾನ್ಯ ರಸ್ತೆಗಳನ್ನು ಆಯ್ಕೆ ಮಾಡಲು ಸುಲಭಗೊಳಿಸುವುದಲ್ಲದೆ ನಿಖರವಾದ ವಿವರಗಳಿಗಾಗಿ ಕಂಪನಿಯು ಸ್ಥಳೀಯ ಟೋಲ್ ಬೂತ್ ಅಧಿಕಾರಿಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತದೆ.

ಟೋಲ್‌ ಶುಲ್ಕ ಮಾಹಿತಿ ತಿಳಿಯಲು ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್ ಅಳವಡಿಕೆ

ಜೊತೆಗೆ ಹೊಸ ಫೀಚರ್ಸ್ ಬಳಕೆ ಮಾಡುವಾದ ವಾರದ ಯಾವ ದಿನ, ಹಾಗೆಯೇ ನೀವು ದಾಟಿದ ನಿರ್ದಿಷ್ಟ ಸಮಯದಲ್ಲಿ ಎಷ್ಟು ಟೋಲ್‌ಗಳನ್ನು ನಿರೀಕ್ಷಿಸಬಹುದು ಎಂಬ ಮಾಹಿತಿಯನ್ನು ಸಹ ಒಳಗೊಂಡಿದ್ದು, ಸೆಟ್ಟಿಂಗ್‌ಗಳಲ್ಲಿ ಟೋಲ್ ಪಾಸ್‌ನೊಂದಿಗೆ ಅಥವಾ ಇಲ್ಲದೆಯೇ ಟೋಲ್ ಬೆಲೆಯನ್ನು ತೋರಿಸುವ ಆಯ್ಕೆಯನ್ನು ಸಹ ನೀವು ಹೊಂದಿರುತ್ತೀರಿ.

ಟೋಲ್‌ ಶುಲ್ಕ ಮಾಹಿತಿ ತಿಳಿಯಲು ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್ ಅಳವಡಿಕೆ

ಇದಲ್ಲದೆ ನೀವು ಬಳಸುವ ಪಾವತಿ ವಿಧಾನವನ್ನು ಅವಲಂಬಿಸಿ ಬೆಲೆ ಬದಲಾಯಿಸುವ ಗೂಗಲ್ ಮ್ಯಾಪ್ ಸೇವೆಯು ಸೆಟ್ಟಿಂಗ್‌ ಮೂಲಕ 'ಟೋಲ್‌ಗಳನ್ನು ತಪ್ಪಿಸಿ' ಅನ್ನು ಆಯ್ಕೆಯನ್ನು ಸಹ ನೀಡಲಿದ್ದು, ಸಾಧ್ಯವಾದರೆ ಟೋಲ್ ರಸ್ತೆಗಳನ್ನು ದಾಟುವ ಮಾರ್ಗಗಳನ್ನು ತಪ್ಪಿಸಬಹುದು.

ಟೋಲ್‌ ಶುಲ್ಕ ಮಾಹಿತಿ ತಿಳಿಯಲು ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್ ಅಳವಡಿಕೆ

ಈ ಸೌಲಭ್ಯವು ಪ್ರಸ್ತುತ ಯುಎಸ್ಎನಲ್ಲಿ ವ್ಯಾಪಾಕವಾಗಿ ಬಳಕೆಯಾಗುತ್ತಿದ್ದು, ಇದೀಗ ಭಾರತ, ಜಪಾನ್ ಮತ್ತು ಇಂಡೋನೇಷ್ಯಾದಲ್ಲಿ ಸರಿಸುಮಾರು 2000 ಟೋಲ್ ರಸ್ತೆಗಳಿಗೆ ಕಾರ್ಯನಿರ್ವಹಿಸುತ್ತಿದೆ.

ಟೋಲ್‌ ಶುಲ್ಕ ಮಾಹಿತಿ ತಿಳಿಯಲು ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್ ಅಳವಡಿಕೆ

ಕಂಪನಿಯು ಈ ವೈಶಿಷ್ಟ್ಯತೆಯನ್ನು ಶೀಘ್ರದಲ್ಲಿಯೇ ಇನ್ನಷ್ಟು ದೇಶಗಳಿಗೆ ವಿಸ್ತರಿಸಲಿದ್ದು, ಇದಲ್ಲದೆ ಗೂಗಲ್ ನಕ್ಷೆಗಳು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಏರ್ ಕ್ವಾಲಿಟಿ ಇಂಡೆಕ್ಸ್ (ಎಕ್ಯೂಐ) ಅನ್ನು ಸಹ ತೋರಿಸುತ್ತವೆ.

ಟೋಲ್‌ ಶುಲ್ಕ ಮಾಹಿತಿ ತಿಳಿಯಲು ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್ ಅಳವಡಿಕೆ

ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಗೂಗಲ್ ಮ್ಯಾಪ್ಸ್ ಬಳಕೆದಾರರು ಈಗ ಹೊರಹೋಗುವ ಮೊದಲು ಗೂಗಲ್ ಮ್ಯಾಪ್‌ನಲ್ಲಿ ಗಾಳಿಯ ಗುಣಮಟ್ಟದ ಲೇಯರ್ ಅನ್ನು ಪರಿಶೀಲಿಸಬಹುದಾಗಿದ್ದು, ಬ್ಲಾಗ್ ಪೋಸ್ಟ್‌ನಲ್ಲಿ ಟೆಕ್ ದೈತ್ಯರು ಪ್ರಸ್ತಾಪಿಸಿದಂತೆ ನ್ಯಾವಿಗೇಟಿಂಗ್ ಅಪ್ಲಿಕೇಶನ್ ಈಗ ನಿಮಗೆ ಎಕ್ಯೂಐ ಅನ್ನು ತೋರಿಸುತ್ತದೆ.

ಟೋಲ್‌ ಶುಲ್ಕ ಮಾಹಿತಿ ತಿಳಿಯಲು ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್ ಅಳವಡಿಕೆ

ಹೊಸ ವೈಶಿಷ್ಟ್ಯತೆಯ ಮೂಲಕ ಗಾಳಿ ಎಷ್ಟು ಆರೋಗ್ಯಕರ ಅಥವಾ ಅನಾರೋಗ್ಯಕರ ಎಂದು ಬಳಕೆದಾರರಿಗೆ ತಿಳಿಯುತ್ತದೆ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಮಾರ್ಗದರ್ಶನ ಸಿಗಲಿದ್ದು, ಬಳಕೆದಾರರು ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮುನ್ನ ಎಲ್ಲಾ ಒಂದೇ ಪ್ಲ್ಯಾಟ್‌ಫಾರ್ಮ್ ಮೂಲಕ ಹಲವು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಟೋಲ್‌ ಶುಲ್ಕ ಮಾಹಿತಿ ತಿಳಿಯಲು ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್ ಅಳವಡಿಕೆ

ಇನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಪಾವತಿಯನ್ನು ಮತ್ತಷ್ಟು ಸರಳಗೊಳಿಸಲು ಮುಂದಾಗಿರುವ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಬದಲಾಗಿ ಶೀಘ್ರದಲ್ಲಿಯೇ ಮತ್ತೊಂದು ಮಹತ್ವದ ಹೆಜ್ಜೆಯಿರಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿಗಳನ್ನು ಹೊಸ ಶುಲ್ಕ ಪಾವತಿ ಸೌಲಭ್ಯದೊಂದಿಗೆ ಟೋಲ್ ಪ್ಲಾಜಾ ಮುಕ್ತಗೊಳಿಸುವ ಯೋಜನೆಯಲ್ಲಿದೆ.

ಟೋಲ್‌ ಶುಲ್ಕ ಮಾಹಿತಿ ತಿಳಿಯಲು ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್ ಅಳವಡಿಕೆ

ಹೌದು, ಪ್ರಸ್ತುತ ಜಾರಿಯಲ್ಲಿರುವ ಫಾಸ್ಟ್‌ಟ್ಯಾಗ್‌ಗಿಂತಲೂ ವೇಗವಾಗಿ ಶುಲ್ಕ ಸಂಗ್ರಹಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಿರ್ಧರಿಸಿರುವ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಟೋಲ್ ಪ್ಲಾಜಾಗಳನ್ನು ತೆಗೆದುಹಾಕಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೊಳಿಸುತ್ತಿದ್ದು, ಹೊಸ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದೆ.

ಟೋಲ್‌ ಶುಲ್ಕ ಮಾಹಿತಿ ತಿಳಿಯಲು ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್ ಅಳವಡಿಕೆ

ರಷ್ಯಾ ಸರ್ಕಾರದೊಂದಿನ ಸಹಭಾಗೀತ್ವ ಯೋಜನೆ ಅಡಿ ದೇಶದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರವು ಟೋಲ್ ಪ್ಲಾಜಾಗಳನ್ನು ಹಂತ-ಹಂತವಾಗಿ ತೆಗೆದುಹಾಕುತ್ತಿದೆ.

ಟೋಲ್‌ ಶುಲ್ಕ ಮಾಹಿತಿ ತಿಳಿಯಲು ಗೂಗಲ್ ಮ್ಯಾಪ್‌ನಲ್ಲಿ ಹೊಸ ಫೀಚರ್ಸ್ ಅಳವಡಿಕೆ

ಸ್ಯಾಟ್‌ಲೈಟ್ ತಂತ್ರಜ್ಞಾನ ಸಹಾಯದೊಂದಿಗೆ ಜಿಪಿಎಸ್ ಟೋಲ್ ಸಿಸ್ಟಂ ನಿರ್ವಹಿಸಲಿರುವ ಕೇಂದ್ರ ಹೆದ್ದಾರಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ಕಡಿತಕ್ಕಾಗಿ ಟೋಲ್‌ಗಳಲ್ಲಿ ವಾಹನ ಸವಾರರು ಕಾಯುವುದನ್ನು ಸಹ ಇದು ತಪ್ಪಿಸಲಿದೆ. ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ಸಂಗ್ರಹಿಸುವ ತಾಂತ್ರಿಕ ಕಾರಣಗಳಿಂದ ತಡವಾದಲ್ಲಿ ಕೆಲವೊಮ್ಮೆ ಇತರೆ ವಾಹನ ಸವಾರರು ಸಹ ಕಾಯಬೇಕಿದ್ದು, ಜಿಪಿಎಸ್ ಟೋಲ್ ಸಂಗ್ರಹ ಸೌಲಭ್ಯ ಜಾರಿ ಬಂದಲ್ಲಿ ಇಂತಹ ಯಾವುದೇ ತೊಂದರೆ ಉಂಟಾಗುವುದಿಲ್ಲ ಎನ್ನಬಹುದು.

Most Read Articles

Kannada
English summary
Google maps will now show estimated toll price in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X