ಹೈವೇ ನಲ್ಲಿ ಚಲಿಸುವ ಹೈ ಸ್ಪೀಡ್ ವಾಹನಗಳ ಮೇಲೆ ಗೂಗಲ್ ಹದ್ದಿನ ಕಣ್ಣು..!
ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ಬಹುತೇಕ ವಾಹನಗಳು ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಹೈ ಸ್ಪೀಡ್‌ನಲ್ಲಿ ಚಲಿಸುತ್ತಿರುತ್ತವೆ. ಹೀಗಾಗಿ ಸಾಮಾನ್ಯ ರಸ್ತೆಗಳಿಂತ ಹೆದ್ದಾರಿಗಳಲ್ಲೇ ಭೀಕರ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸಾರಿಗೆ ಇಲಾಖೆಯು ಹೊಸ ಅಸ್ತ್ರ ಪ್ರಯೋಗಿಸುತ್ತಿದೆ.

ಹೌದು, ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ದಿನಂಪ್ರತಿ ಸಂಭವಿಸುತ್ತಿರುವ ನೂರಾರು ಅಪಘಾತ ಪ್ರಕರಣಗಳಿಗೆ ಹೈ ಸ್ಪೀಡ್ ಪ್ರಮುಖ ಕಾರಣವಾಗಿದ್ದು, ವೇಗದ ಮಿತಿ ಮೀರಿ ಚಾಲನೆ ಮಾಡಿದ್ದಲ್ಲಿ ಇನ್ಮುಂದೆ ನೀವು ಟೋಲ್ ಶುಲ್ಕಕ್ಕಿಂತ ಹೆಚ್ಚು ಹೈ ಸ್ಪೀಡ್ ಚಾಲನೆ ಮಾಡಿದ್ದಕ್ಕಾಗಿಯೇ ಅಧಿಕ ಪ್ರಮಾಣದ ದಂಡ ತೆರಬೇಕಾದ ವ್ಯವಸ್ಥೆ ಜಾರಿಗೆ ಬರುತ್ತಿದೆ.

ಸದ್ಯ ಬಳಕೆಗೆ ಲಭ್ಯವಿರುವ ಗೂಗಲ್ ಮ್ಯಾಪ್‌ನಲ್ಲಿ ಹೊಸದಾಗಿ ಆರಂಭಿಸಲಾಗಿರುವ ಗೂಗಲ್ ಸ್ಪೀಡ್ ಕ್ಯಾಮೆರಾ ಮೂಲಕ ಹೈವೇ ನಲ್ಲಿ ಓಡಾಡುವ ಹೈ ಸ್ಪೀಡ್ ವಾಹನಗಳ ಮಾಹಿತಿ ತಿಳಿಯಬಹುದಾಗಿದ್ದು, ಆಗಬಹುದಾದ ದುರಂತಗಳಿಗೆ ಕಡಿವಾಣ ಹಾಕಬಹುದಾಗಿದೆ.

ಇಷ್ಟು ದಿನಗಳ ಕಾಲ ಈ ಪದ್ಧತಿಯನ್ನು ಮುಂದುವರಿದ ರಾಷ್ಟ್ರಗಳಾದ ಯುಕೆ, ಯುಎಸ್ಎ, ಆಸ್ಟ್ರೇಲಿಯಾ, ರಷ್ಯಾ, ಬ್ರೆಜಿಲ್, ಮೆಕ್ಸಿಕೋ, ಕೆನಡಾ ಮತ್ತು ಇಂಡೋನೇಷ್ಯಾದಲ್ಲೂ ಗೂಗಲ್ ಸ್ಪೀಡ್ ಕ್ಯಾಮೆರಾ ಫೀಚರ್ಸ್ ಬಳಕೆಯಲ್ಲಿದ್ದು, ವೇಗದ ಮಿತಿ ಮೀರುವ ವಾಹನಗಳ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ.

ಇದೀಗ ಗೂಗಲ್ ಭಾರತದಲ್ಲೂ ತನ್ನ ಬಳಕೆದಾರರಿಗೆ ಮ್ಯಾಪ್ ಅಪ್ಲಿಕೇಷನ್‌ನಲ್ಲಿ ಸ್ಪೀಡ್ ಕ್ಯಾಮೆರಾ ಫೀಚರ್ಸ್ ಸೌಲಭ್ಯವನ್ನು ನೀಡಿದ್ದು, ವಾಹನ ಚಾಲನೆ ವೇಳೆ ನೀವು ಸ್ಪೀಡ್ ಕ್ಯಾಮೆರಾ ಫೀಚರ್ಸ್ ಆನ್ ಮಾಡಿದ್ದಲ್ಲಿ ನಿಮ್ಮ ಹಿಂದೆ-ಮುಂದೆ ಬರುವ ಹೈ ಸ್ಪೀಡ್ ವಾಹನಗಳ ಮಾಹಿತಿಯನ್ನು ಗೂಗಲ್ ತನ್ನ ಅಪ್ಲಿಕೇಷನ್‌ನಲ್ಲಿ ಸಂಗ್ರಹಿಸುತ್ತಿರುತ್ತಿರುತ್ತದೆ.

ಆಗ ನೀವು ಅಪ್ಲಿಕೇಷನ್ ಮೂಲಕ ಗೂಗಲ್‌ಗೆ ರೀಪೋರ್ಟ್ ಮಾಡಿದ್ದಲ್ಲಿ ಅದು ಹೆದ್ದಾರಿ ಪೊಲೀಸರಿಗೆ ಮಾಹಿತಿ ರವಾನೆಯಾಗಲಿದ್ದು, ಕಾರಿನ ನೋಂದಣಿ ಸಂಖ್ಯೆ, ವಾಹನದ ವೇಗದ ಮಿತಿ ಮತ್ತು ಎಲ್ಲೆಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ನೀಡಲಿದೆ.

ವಾಹನ ಚಾಲನೆ ವೇಳೆ ಗೂಗಲ್ ಮ್ಯಾಪ್ ಆನ್ ಮಾಡಿದ್ದಲ್ಲಿ ಸ್ಪೀಡ್ ಕ್ಯಾಮೆರಾ ಫೀಚರ್ಸ್ ನಿಮಗೆ ವರದಿ ಮಾಡಲು ಅನುಮತಿಸಲಿದೆ. ಆಗ ನೀವು ಈ ಸೌಲಭ್ಯವನ್ನು ಆನ್ ಮಾಡಿದ್ದಲ್ಲಿ ಅದೇ ಮಾರ್ಗದಲ್ಲಿ ಬರುವ ಇತರೆ ಗೂಗಲ್ ಮ್ಯಾಪ್ ಬಳಕೆದಾರರರಿಗೆ ನೀವು ಸ್ಪೀಡ್ ಕ್ಯಾಮೆರಾ ಆನ್ ಮಾಡಿರುವ ಮಾಹಿತಿ ಗೊತ್ತಾಗುತ್ತೆ.
MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಆಗ ಹೈ ಸ್ಪೀಡ್ ಹೋಗುವ ಆ ವಾಹನದ ಚಾಲಕನು ರಿರ್ಪೋಟ್ ಮಾಡಬಹುದಾದ ಭಯದಿಂದ ತಮ್ಮಷ್ಟಕ್ಕೆ ತಾವೇ ವೇಗದ ಮಿತಿ ಪಾಲನೆ ಮಾಡಬಹುದಾದ ಸೌಲಭ್ಯ ಇದಾಗಿದ್ದು, ಜೊತೆಗೆ ನೀವು ಪ್ರಯಾಣ ಮಾಡುವ ಮಾರ್ಗ ಮಧ್ಯದಲ್ಲಿ ಯಾವುದಾದರೂ ಅಪಘಾತಗಳು ಸಂಭವಿಸಿದರೂ ಸಹ ಗೂಗಲ್ ರೀಪೋರ್ಟ್ ಮಾಡಬಹುದಾಗಿದೆ.

ಇದಕ್ಕಾಗಿಯೇ ಗೂಗಲ್ ಮ್ಯಾಪ್‌ನಲ್ಲಿ ಕೆಲವು ವಿಶೇಷ ಐಕಾನ್‌ಗಳನ್ನು ಸೇರಿಸಲಾಗಿದ್ದು, ಒಂದು ವೇಳೆ ನೀವು ಕೂಡಾ ಹೈ ಸ್ಪೀಡ್‌ನಲ್ಲಿ ಚಲಿಸುತ್ತಿದ್ದಲ್ಲಿ ಇತರೆ ಗೂಗಲ್ ಹೈ ಸ್ಪೀಡ್ ಕ್ಯಾಮೆರಾ ಬಳಕೆದಾರರಿಂದ ಹೈ ಸ್ಪೀಡ್ ನೋಟಿಫಿಕೇಷನ್ ಬರುವುದಲ್ಲದೇ ವೇಗದ ವಾಹನ ಚಾಲನೆಗಾಗಿ ಹಾಕಲಾಗುವ ದಂಡವನ್ನು ತಪ್ಪಿಸಬಹುದಾಗಿದೆ.
MOST READ: ಹೈವೇಯಲ್ಲಿ ಡ್ರೈವಿಂಗ್ ಮಾಡಲು ವಾಹನ ಸವಾರರಿಗಾಗಿ 11 ಬಹುಮೂಲ್ಯ ಟಿಪ್ಸ್

ಈ ಮೂಲಕ ಹೈವೇ ನಲ್ಲಿ ವೇಗದ ಮಿತಿಯನ್ನು ತಗ್ಗಿಸಲು ಗೂಗಲ್ ಮ್ಯಾಪ್‌ನಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದೆ. ಸದ್ಯ ಹೊಸ ಅಪ್ಲಿಕೇಷನ್ ಸೌಲಭ್ಯವು ಅಂಡ್ರಾಯಿಡ್ ಸಾಧನಗಳಲ್ಲಿ ಮಾತ್ರ ಲಭ್ಯವಿದ್ದು, ಐಒಎಸ್‌ನಲ್ಲೂ ಸದ್ಯದಲ್ಲೇ ಹೊಸ ಸೌಲಭ್ಯವನ್ನು ಒದಗಿಸಲು ಗೂಗಲ್ ತಯಾರಿ ನಡೆಸಿದೆ.
Source: AutoCar


Click it and Unblock the Notifications








