ಬೈಕ್ ಸವಾರರಿಗೆ 'ಗೂಗಲ್'ನಿಂದ ಗುಡ್ ನ್ಯೂಸ್..!!

ಗೂಗಲ್ ಮ್ಯಾಪ್ ದಿನೇ ದಿನೇ ಅಪ್‌ಡೇಟ್ ಆಗುತ್ತಿದ್ದು, ಹೊಸ ಹೊಸ ಆಯ್ಕೆಗಳನ್ನು ಬಳಕೆದಾರರಿಗೆ ನೀಡಲಾಗುತ್ತಿದೆ. ಇತ್ತೀಚೆಗೆ ಕನ್ನಡ ಭಾಷೆಯಲ್ಲಿ ಜಾಗಗಳ ಹೆಸರು ನಮೂದಿಸುತ್ತಿದ್ದ ಗೂಗಲ್‌, ಇದೀಗ ಬೈಕ್‌ ಸವಾರರಿಗೆ ವಿನೂತನ ಸೌಲಭ್ಯ ಒದಗಿಸಿದೆ.

By Praveen

ವಾಹನ ಸವಾರರಿಗೆ ಅನುಕೂಲವಾಗುವ ಉದ್ದೇಶದಿಂದ ಗೂಗಲ್ ಮ್ಯಾಪ್ ದಿನೇ ದಿನೇ ಅಪ್‌ಡೇಟ್ ಆಗುತ್ತಿದ್ದು, ಹೊಸ ಹೊಸ ಆಯ್ಕೆಗಳನ್ನು ಬಳಕೆದಾರರಿಗೆ ನೀಡಲಾಗುತ್ತಿದೆ. ಇತ್ತೀಚೆಗೆ ಕನ್ನಡ ಭಾಷೆಯಲ್ಲಿ ಜಾಗಗಳ ಹೆಸರು ನಮೂದಿಸುತ್ತಿದ್ದ ಗೂಗಲ್‌, ಇದೀಗ ಬೈಕ್‌ ಸವಾರರಿಗೆ ವಿನೂತನ ಸೌಲಭ್ಯ ಒಂದನ್ನು ಒದಗಿಸುತ್ತಿದೆ.

ಬೈಕ್ ಸವಾರರಿಗೆ 'ಗೂಗಲ್'ನಿಂದ ಗುಡ್ ನ್ಯೂಸ್..!!

ನಗರ ಪ್ರದೇಶಗಳಲ್ಲಿ ನಿರ್ದಿಷ್ಟ ಸ್ಥಳ ಗುರುತಿಸಲು ಗೂಗಲ್ ಮ್ಯಾಪ್‌ಗೆ ಭಾರೀ ಬೇಡಿಕೆಯಿದ್ದು, ಈ ಹಿನ್ನೆಲೆ ಬೈಕ್ ಸವಾರರಿಗೆ ಅನಕೂಲಕರವಾಗುವ ಉದ್ದೇಶದಿಂದ ಟೂ ವೀಲ್ಹರ್‌ ಮೋಡ್‌ ಪರಿಚಯಿಸಿರುವ ಗೂಗಲ್ ಸಂಸ್ಥೆಯು ಬೈಕ್ ಸವಾರಿಯನ್ನು ಮತ್ತಷ್ಟು ಸುಲಭಗೊಳಿಸಿದೆ.

ಬೈಕ್ ಸವಾರರಿಗೆ 'ಗೂಗಲ್'ನಿಂದ ಗುಡ್ ನ್ಯೂಸ್..!!

ಗೂಗಲ್ ಮ್ಯಾಪ್‌ನಲ್ಲಿ ದ್ವಿಚಕ್ರ ಮೋಡ್‌ನಲ್ಲಿ ವೇಗದ ಡೈರೆಕ್ಷನ್, ಮಾರ್ಗಗಳನ್ನು ದ್ವಿಚಕ್ರ ಸವಾರರು ಪಡೆಯಬಹುದು, ಇದರಿಂದ ಅವರು ತಮ್ಮ ಗುರಿಯನ್ನು ಅತಿ ಶೀಘ್ರದಲ್ಲಿ ತಲುಪಲು ಸಹಾಯಕವಾಗಲಿದೆ.

Recommended Video

Bangalore City Police Use A Road Roller To Crush Loud Exhausts
ಬೈಕ್ ಸವಾರರಿಗೆ 'ಗೂಗಲ್'ನಿಂದ ಗುಡ್ ನ್ಯೂಸ್..!!

ಮಹಾನಗರಗಳಲ್ಲಿನ ಟ್ರಾಫಿಕ್ ಜಾಮ್ ಕಿರಿಕಿರಿ ಹಿನ್ನಲೆಯಲ್ಲಿ ಅಡ್ಡದಾರಿಗಳು ಮತ್ತು ಒಳದಾರಿಗಳು ಕೆಲವೇ ಕೆಲವು ಬೈಕ್ ಸವಾರರಿಗೆ ತಿಳಿದಿವೆ. ಈ ಹಿನ್ನಲೆಯಲ್ಲಿ ಬೈಕ್ ಸವಾರರಿಗೆ ಹತ್ತಿರದ ದಾರಿಯನ್ನು ತೋರಿಸಿಕೊಡಲು ಈ ನೂತನ ಟೆಕ್ನಾಲಜಿ ಬಳಕೆಯಾಗಲಿದೆ.

ಬೈಕ್ ಸವಾರರಿಗೆ 'ಗೂಗಲ್'ನಿಂದ ಗುಡ್ ನ್ಯೂಸ್..!!

ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ದ್ವಿಚಕ್ರ ವಾಹನಗಳನ್ನು ಕಾಣಬಹುದಾಗಿದ್ದು, ಈ ಹಿನ್ನಲೆಯಲ್ಲಿ ಗೂಗಲ್ ತನ್ನ ಕಾರ್, ಫೂಟ್ ಹಾಗೂ ಟ್ರೈನ್ ಜತೆಯಲ್ಲಿ ಈಗ ದ್ವಿಚಕ್ರವಾಹನ ಸವಾರರಿಗೆ ದಾರಿ ತೋರಲು ಗೂಗಲ್ ಮುಂದಾಗಿದೆ.

ಬೈಕ್ ಸವಾರರಿಗೆ 'ಗೂಗಲ್'ನಿಂದ ಗುಡ್ ನ್ಯೂಸ್..!!

ಹೀಗಾಗಿ ಹೊಸ ಸೌಲಭ್ಯವು ಬೈಕ್ ಸವಾರರಿಗೆ ಸಾಕಷ್ಟು ಅನಕೂರಕರವಾಗಲಿದ್ದು, ಮುಖ್ಯ ರಸ್ತೆಗಳಲ್ಲಿನ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬಹುದು. ಜೊತೆಗೆ ನಿರ್ದಿಷ್ಟ ಅವಧಿಯಲ್ಲಿ ತಲುಪಬಹುದಾದ ಮಾರ್ಗವನ್ನು ಕಂಡುಕೊಳ್ಳಲು ನೆರಲಾಗಲಿದೆ.

ಬೈಕ್ ಸವಾರರಿಗೆ 'ಗೂಗಲ್'ನಿಂದ ಗುಡ್ ನ್ಯೂಸ್..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದೆ ನಗರ ಪ್ರದೇಶಗಳ ಸ್ಥಳಗಳನ್ನು ಕನ್ನಡದಲ್ಲಿ ನಮೂದಿಸಿ ವಾಹನ ಸವಾರರಿಗೆ ಸಾಕಷ್ಟು ಅನಕೂಲತೆ ಮಾಡಿರುವ ಗೂಗಲ್ ಸಂಸ್ಥೆಯು ಇದೀಗ ಬೈಕ್ ಸವಾರರಿಗಾಗಿ ಪ್ರತ್ಯೇಕ್ ಸೌಲಭ್ಯವನ್ನು ಒದಗಿಸುವುದು ಒಳ್ಳೆಯ ವಿಚಾರ ಎನ್ನಬಹುದು.

Most Read Articles

Kannada
Read more on google ಗೂಗಲ್
English summary
Google Maps now offers a ‘two wheeler mode’ in India.
Story first published: Wednesday, December 13, 2017, 13:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X