ನಿಮ್ಮ ಲೋ ಬಜೆಟಿಗೆ ಮಾರುತಿ ಝೆನ್ ಎಸ್ಟಿಲೊ

ನೂತನ ಟ್ರಾನ್ಸ್ ಮಿಷನ್ ತಂತ್ರಜ್ಞಾನದಿಂದಾಗಿ ಮಾರುತಿ ಝೆನ್ ಎಸ್ಟಿಲೊ ಗೇರನ್ನು ಸ್ಮೂತಾಗಿ ಶಿಫ್ಟ್ ಮಾಡಬಹುದು. ಇಂಟಿರಿಯರ್ ಕೂಡ ಫ್ಯಾಬ್ರಿಕ್, ಕಾರ್ಪೆಟ್ ಮತ್ತು ಟ್ರಿಮ್ ಕಲರ್ ಗಳಿಂದ ಇಷ್ಟವಾಗುತ್ತದೆ. ಪುಟ್ಟ ಕುಟುಂಬ ಆರಾಮವಾಗಿ ಸವಾರಿ ಮಾಡಬಹುದಷ್ಟು ಸ್ಥಳಾವಕಾಶವೂ ಈ ಕಾರಿನಲ್ಲಿದೆ.
ಇದು ಸಿಟಿ ಮತ್ತು ಹೆದ್ದಾರಿಗಳಲ್ಲಿ ಅತ್ಯುತ್ತಮ ಇಂಧನ ದಕ್ಷತೆ ನೀಡುವ ಕಾರಾಗಿದೆ. ಹೆದ್ದಾರಿಯಲ್ಲಿ ಪ್ರತಿಲೀಟರ್ ಗೆ 19 ಕಿ.ಮೀ.ಗಿಂತ ಹೆಚ್ಚು ಮತ್ತು ನಗರಪಟ್ಟಣಗಳಲ್ಲಿ ಸುಮಾರು 15 ಕಿ.ಮೀ. ಮೈಲೇಜ್ ನೀಡುತ್ತದೆ. ಮಾರುತಿ ಝೆನ್ ಎಸ್ಟಿಲೊ ದರ ಹೆಚ್ಚೇನಿಲ್ಲ. ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 3.3 ಲಕ್ಷ ರು.ನಿಂದ 4.40 ಲಕ್ಷ ರು. ಇದೆ.


Click it and Unblock the Notifications








