ಟೊಯೊಟಾ ನೂತನ ಇನ್ನೋವಾ ಕ್ರಿಸ್ಟಾ ರಸ್ತೆಗೆ

ನೂತನ ಇನ್ನೋವಾ ಕ್ರಿಸ್ಟಾ ಕಾರಿನ ದರ ದೆಹಲಿ ಎಕ್ಸ್ ಶೋರೂಂನಲ್ಲಿ 13.3 ಲಕ್ಷ ರು.ನಿಂದ ಆರಂಭವಾಗುತ್ತದೆ. ನೂತನ ಕಾರನ್ನು ಸಣ್ಣ ಪಟ್ಟಣಗಳಿಗೂ ವಿಸ್ತರಿಸಲು ಕಂಪನಿ ನಿರ್ಧರಿಸಿದೆ ಎಂದು ಟೊಯೊಟಾ ಕಿರ್ಲೊಸ್ಕರ್ ಮೊಟಾರ್ ಪ್ರಕಟಣೆಯಲ್ಲಿ ಹೇಳಿದೆ. ಸಣ್ಣ ನಗರಗಳಿಗೆ 2.5 ಲೀಟರ್ ನ ಡೀಸಲ್ ಎಂಜಿನ್ ಇನ್ನೋವಾ ಹೊರತರುವ ಯೋಜನೆಯೂ ಕಂಪನಿಗಿದೆಯಂತೆ.
ನೂತನ ಇನ್ನೋವಾ ದುಬಾರಿಯೇಕೆ ಎಂಬ ಪ್ರಶ್ನೆ ಸಹಜ. ಇದರಲ್ಲಿ ಸ್ಮೊಕೊಡ್ ಅಲಾಯ್ ವೀಲ್, ಬಾಡಿ ಗ್ರಾಫಿಕ್ಸ್, ಸ್ಪೋರ್ಟಿ ಆಕರ್ಷಣೆಯ ಹಿಂಭಾಗದ ರೂಫ್, ಮಫ್ಲರ್ ಕಟ್ಟರ್, ಡ್ಯೂಯಲ್ ಟೊನ್ ಲೀದರ್ ಸೀಟ್ ಕವರ್ ಇತ್ಯಾದಿ ಆಕರ್ಷಕ ವಿನ್ಯಾಸಗಳಿವೆ. ನೋಡಲು ಆಕರ್ಷಕವಾಗಿ, ಲಕ್ಷುರಿಯಾಗಿ ರೂಪಿಸಿರುವುದರಿಂದ ದರ ಕೊಂಚ ದುಬಾರಿಯಾಗಿದೆ.
ಕಂಪನಿಯು ನೂತನ ಇನ್ನೋವಾ ಕ್ರಿಸ್ಟಾದ 1 ಸಾವಿರ ಮಾಡೆಲ್ ಗಳನ್ನು ರಸ್ತೆಗಿಳಿಸಲಿದೆ. ಇದು ಮಾರುಕಟ್ಟೆಯಲ್ಲಿ ಪ್ರಸಕ್ತ ವರ್ಷದ ಅಕ್ಟೋಬರ್ ವರೆಗೆ ಸಿಗಲಿದೆಯಂತೆ.


Click it and Unblock the Notifications








