ಮಹೀಂದ್ರ ರೇವಾ ಎನ್ಎಕ್ಸ್ಆರ್ ಮುಂದಿನ ವರ್ಷ ರಸ್ತೆಗೆ

ನೂತನ ರೇವಾ ಎನ್ಎಕ್ಸ್ಆರ್ ಕಾರನ್ನು ಕಂಪನಿಯು ಈಗಲೂ ಅಭಿವೃದ್ಧಿಪಡಿಸುತ್ತಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಪರೀಕ್ಷಾರ್ಥ ಟೆಸ್ಟ್ ರೈಡ್ ನ್ನು ಕಂಪನಿ ಕೈಗೊಳ್ಳುತ್ತಿದೆ. ಗ್ರಾಹಕರಿಗೆ ಅತ್ಯುತ್ಕೃಷ್ಟ ಮಟ್ಟದ ಉತ್ಪನ್ನವನ್ನು ಕೊಡಲು ಕಂಪನಿಯು ಪ್ರಯತ್ನಿಸುತ್ತಿದೆ ಎಂದು ಮೂಲಗಳು ಹೇಳಿವೆ.
ನೂತನ ಎನ್ಎಕ್ಸ್ಆರ್ ಮಾಡೆಲ್ ಹಳೆಯ ರೇವಾಐ ಕಾರಿನ ಸ್ಥಾನ ತುಂಬಲಿದೆ. ರೇವಾಐ ಸುಮಾರು 80 ಕಿ.ಮೀ. ಪ್ರಯಾಣಕ್ಕೆ ಯೋಗ್ಯವಾಗಿ ಉಳಿದಿದೆ. ನೂತನ ರೇವಾ ಎನ್ಎಕ್ಸ್ಆರ್ ಇದಕ್ಕಿಂತಲೂ ಹೆಚ್ಚು ಶಕ್ತಿಶಾಲಿ, ಉಪಯೋಗಕಾರಿಯಾಗುವ ನಿರೀಕ್ಷೆಯಿದೆ.
ನೂತನ ಕಾರಿಗೆ ಕಂಪನಿಯು ಇತ್ತೀಚೆಗೆ ಎರಡು ಮಕ್ಕಳ ಸೀಟುಗಳನ್ನು ಜೋಡಿಸಲು ಪ್ರಯತ್ನಿಸಿದೆ. ಆದರೂ ನೂತನ ಎನ್ಎಕ್ಸ್ಆರ್ ಎರಡು ಡೋರಿನ ಕಾರಾಗಿ ಉಳಿದಿದೆ. ಇದರಲ್ಲಿ ಆರಾಮವಾಗಿ ಇಬ್ಬರು ಕುಳಿತುಕೊಳ್ಳಬಹುದಾಗಿದೆ. ಲಗೇಜ್ ಸ್ಥಳಾವಕಾಶವೂ ಇದೆ.
ಹಳೆಯ ರೇವಾ, ರೇವಾಐ ಕಾರುಗಳಿಗೆ ಹೋಲಿಸಿದರೆ ನೂತನ ಎನ್ಎಕ್ಸ್ಆರ್ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ನಿರೀಕ್ಷಿಸಬಹುದಾಗಿದೆ. ಇದರ ಇಂಟಿರಿಯರ್ ಮತ್ತು ಎಕ್ಸ್ ಟೀರಿಯರ್ ಲುಕ್ ಇನ್ನಷ್ಟು ಆಕರ್ಷಕವಾಗಲಿದೆ. ಇದರ ದರ ಸುಮಾರು 4ರಿಂದ 5 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.


Click it and Unblock the Notifications








