ದೇಶಕ್ಕೆ ಹೊಸ ಮರ್ಸಿ: 61 ಲಕ್ಷ ರು. ಮಾತ್ರ!

New SLK350 Convertible
ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್ ಬೆಂಝ್ ನೂತನ ಎಸ್ಎಲ್ಕೆ350 ಎಂಬ ಲಕ್ಷುರಿ ಕಾರನ್ನು ಪರಿಚಯಿಸಿದೆ. ಇದನ್ನು ದೇಶಕ್ಕೆ ಪೂರ್ಣಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುವುದರಂತೆ. ನೂತನ SLK350 ಕಾರಿಗೆ ದೆಹಲಿ ಎಕ್ಸ್ ಶೋರೂಂನಲ್ಲಿ 61.9 ಲಕ್ಷ ರು. ಇದೆ.

ಎಸ್ಎಲ್ ಕೆ ಎಂಬುದು ಮರ್ಸಿಡಿಸ್ ಬೆಂಝ್ ನ ಪ್ರಮುಖ ಐಕಾನಿಕ್ ಬ್ರಾಂಡ್ ಆಗಿದೆ. ಈ ಹಿಂದೆ ಭಾರತದ ರಸ್ತೆಗೆ ಕಂಪನಿಯು ಎಸ್ ಎಲ್ ಕೆ 200 ಎಂಬ ಕಾರನ್ನು ಕಂಪನಿ ಪರಿಚಯಿಸಿತ್ತು. ನೂತನ ಎಸ್ಎಲ್ ಕೆ 350 ಕಾರು 3.5 ಲೀಟರಿನ ಪೆಟ್ರೊಲ್ ವಿ6 ಎಂಜಿನ್ ಹೊಂದಿದೆ. ಇದು ಪ್ರತಿಲೀಟರ್ ಪೆಟ್ರೊಲ್ ಗೆ 8 ಕಿ.ಮೀ. ಮೈಲೇಜ್ ನೀಡುತ್ತದೆ. ಇದು 9 ಬಣ್ಣಗಳಲ್ಲಿ ದೊರಕಲಿದೆ.

ನೂತನ ಎಸ್ಎಲ್ಕೆ 350 ಪವರ್ ಫುಲ್ ಎಂಜಿನ್ ಹೊಂದಿದ್ದು 272 ಹಾರ್ಸ್ ಪವರ್ ನೀಡುತ್ತದೆ. ಕೇವಲ 5.6 ಸೆಕೆಂಡಿನಲ್ಲಿ 100kmph ವೇಗ ಪಡೆದುಕೊಳ್ಳಬಹುದಾಗಿದೆ. ಇದರ ಗರಿಷ್ಟ ವೇಗ 250 ಕಿ.ಮೀ. ಆಗಿದೆ. ಕಂಪನಿಯು ಕಳೆದ ತಿಂಗಳು ಎಸ್ಎಲ್ಕೆ 200 ಮಾಡೆಲಿನ ನಾಲ್ಕು ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಿತ್ತಂತೆ!

ಈ ಹಿಂದೆ ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತದಲ್ಲಿ ಅತ್ಯಧಿಕ ಮಾರಾಟದ ಲಕ್ಷುರಿ ಬ್ರಾಂಡೆಂಬ ಖ್ಯಾತಿ ಪಡೆದಿತ್ತು. ಸದ್ಯ ಇದು ಬಿಎಂಡಬ್ಲ್ಯು ಪಾಲಾಗಿದೆ.

More from DriveSpark

Article Published On: Friday, August 12, 2011, 11:32 [IST]
English summary
Mercedes-Benz, the German premium carmaker yesterday launched the new SLK350 convertible. The new convertible which will be imported as a completely built unit will be priced at Rs.61.9 lakhs (ex-showroom New Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+