ಬಾಪೂಜಿ ಪ್ರಯಾಣಿಸಿದ ಕಾರಿನೊಳಗೆ ಇಣುಕು

Mahatma Gandhi Travelled In This Ford T Series
ಮಹಾತ್ಮಗಾಂಧೀಜಿ ಬಗ್ಗೆ ಹೆಚ್ಚು ಬರೆಯುವ ಅಗತ್ಯವಿಲ್ಲ. ಆದರೆ ಅವರು ಬಳಸಿದ ಕನ್ನಡಕ, ತಟ್ಟೆ ಇತ್ಯಾದಿಗಳು ಕೋಟಿ ಕೋಟಿ ರುಪಾಯಿಗೆ ಹರಾಜಾಗುವ ಸಂಗತಿ ನಿಮಗೆ ಗೊತ್ತೆ ಇದೆ. ಇಲ್ಲೊಂದು ಕಾರಿದೆ. ಇದರಲ್ಲಿ ಬಾಪೂಜಿ ಪ್ರಯಾಣಿಸಿದ ಕಾರಣಕ್ಕೆ ಇದಕ್ಕೆ ಮಹತ್ವ ನೀಡಲಾಗಿದೆ.

ಬಾಪೂಜಿಯದ್ದು ಸರಳ ವ್ಯಕ್ತಿತ್ವ. ಐಷಾರಾಮಿ ಬದುಕನ್ನು ತಿರಸ್ಕರಿಸಿದವರು. ಒಂದು ಲುಂಗಿ, ಒಂದು ಕನ್ನಡಕ, ಒಂದು ತಟ್ಟೆ... ಹೀಗೆ ಅವರದ್ದು ಸಿಂಪಲ್ ಜೀವನ. ಹೀಗಾಗಿ ಅವರ ಸ್ವಂತ ಕಾರಿನ ಕುರಿತು ಹುಡುಕಾಡುವುದು ವ್ಯರ್ಥ. ಆದರೆ 1927ರ ಕಾಲದಲ್ಲಿ ಫೋರ್ಡ್ ಟಿ ಸೀರಿಸ್ ಕಾರಿನಲ್ಲಿ ಗಾಂಧೀಜಿ ಪ್ರಯಾಣಿಸಿದ್ದರು.

ಉತ್ತರ ಪ್ರದೇಶದ ರಾಯ್ ಬರೇಲಿ ಪ್ರದೇಶದಲ್ಲಿ ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದರಂತೆ. ಹೀಗಾಗಿ ಈ ವಿಂಟೇಜ್ ಕಾರಿಗೆ ಸಾಕಷ್ಟು ಮಹತ್ವವಿದೆ. ಇದು ಹಲವು ಜನರ ಕೈಯಿಂದ ಕೈಗೆ ಹೋಗಿ ಈಗ ಪುಣೆ ಮೂಲದ ಅಬ್ಬಾಸ್ ಬಳಿಯಿದೆ. ಅವರ ವಿಂಟೇಜ್ ಕಾರು ಸಂಗ್ರಹದಲ್ಲಿ ಸುಮಾರು 30 ಕಾರುಗಳಿವೆ ಅಂದ್ರೆ ಅಚ್ಚರಿಯಾದೀತು.

ಈ ಫೋರ್ಡ್ ಟಿ ಸೀರಿಸ್ ಕಾರು ಮಹಾರಾಷ್ಟ್ರದ ವಾರ್ಷಿಕ ವಾಹನ ಪ್ರದರ್ಶನದಲ್ಲಿ ಪ್ರದರ್ಶನಗೊಂಡು ಸಾಕಷ್ಟು ವಾಹನ ಪ್ರೇಮಿಗಳ ಗಮನ ಸೆಳೆದಿದೆ. ಗಾಂಧೀಜಿ ತನ್ನ ಬದುಕಿನ ಹಲವು ಘಟ್ಟಗಳಲ್ಲಿ ಹಲವು ಕಾರುಗಳಲ್ಲಿ ಪ್ರಯಾಣಿಸಿದ್ದಾರೆ. ಅವರ ಪ್ರಯಾಣದಿಂದ ಪಾವನವಾದ ಕಾರುಗಳು ದೇಶದ ಹಲವು ಮ್ಯೂಸಿಯಂಗಳಲ್ಲಿ, ವಾಹನ ಸಂಗ್ರಹಕರ ಬಳಿಯಿದೆ.

ಅವನೊಬ್ಬನಿದ್ದ ಗೋಡ್ಸೆ.. ಗಾಂಧಿ ಹತ್ಯೆ ಸಮಯದಲ್ಲಿ ನಾತೂರಂ ಗೋಡ್ಸೆ ಬಳಸಿದ ಕಾರು Next ಪುಟದಲ್ಲಿದೆ.

More from DriveSpark

Article Published On: Saturday, August 13, 2011, 11:11 [IST]
English summary
Vintage cars: Gandhiji travelled from the Bareilly central jail in Uttar Pradesh in 1927 in a Ford T series. The car has changed hands several times and is now owned by Abbas Jasdanwalla from Pune. Mr Jasdanwalla is vintage car collector and this Ford T series is the most priceless model in his collection of 30 vintage cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+