ಹೊಸ ಸ್ವಿಫ್ಟ್ ಮೈಲೇಜ್ ಮತ್ತು ದರ ಎಷ್ಟು ಗುರು?

ಪೆಟ್ರೊಲ್ ಆವೃತ್ತಿಯು 12.6 ಸೆಕೆಂಡಿನಲ್ಲಿ ಮತ್ತು ಡೀಸಲ್ ಆವೃತ್ತಿ 14.8 ಸೆಕೆಂಡಿನಲ್ಲಿ 100kmph ವೇಗ ಪಡೆದುಕೊಳ್ಳುತ್ತದೆ.
ಕಂಪನಿ ಹೇಳುವ ಪ್ರಕಾರ ನೂತನ ಸ್ವಿಫ್ಟ್ ಗೆ 140 ಹೊಸ ಬಿಡಿಭಾಗಗಳನ್ನು ಜೋಡಿಸಲಾಗಿದೆಯಂತೆ.
ಆದರೂ ಹೊಸ ಸ್ವಿಫ್ಟ್ ಲುಕ್ ನೋಡಲು ಕೊಂಚ ಹಳೆಯ ಕಾರಿನಂತೆ ಕಾಣುತ್ತದೆ. ಇಂಧನ ದಕ್ಷತೆ ಹೆಚ್ಚಾಗಿರುವ ವಿಷ್ಯ ಸ್ವಿಫ್ಟ್ ಪ್ರಿಯರಿಗೆ ಇಷ್ಟವಾದೀತು. ಪ್ಲಾಸ್ಟಿಕ್ ಇಂಧನ ಟ್ಯಾಂಕ್ ನಿಂದಾಗಿ ಕಾರು ಹಗುರವಾಗಿದ್ದು ಇಂಧನ ದಕ್ಷತೆಯನ್ನು ಹೆಚ್ಚಿಸಿದೆ. ನೂತನ ಸ್ವಿಫ್ಟ್ 3 ಪೆಟ್ರೊಲ್ ಮತ್ತು ಮೂರು ಡೀಸಲ್ ಆವೃತ್ತಿಯಲ್ಲಿ ದೊರಕುತ್ತದೆ.
ಬೆಂಗಳೂರು ಎಕ್ಸ್ ಶೋರೂಂ ದರ
ಪೆಟ್ರೊಲ್
ಎಲ್ಎಕ್ಸ್ಐ ದರ: 4.39 ಲಕ್ಷ ರುಪಾಯಿ
ವಿಎಕ್ಸ್ಐ ದರ: 4.79 ಲಕ್ಷ ರುಪಾಯಿ
ಝಡ್ಎಕ್ಸ್ಐ ದರ: 5.63 ಲಕ್ಷ ರು.
ಡೀಸೆಲ್
ಎಲ್ ಡಿಐ ದರ: 5.16 ಲಕ್ಷ ರುಪಾಯಿ
ವಿಡಿಐ ದರ: 5.66 ಲಕ್ಷ ರುಪಾಯಿ
ಝಡ್ ಡಿಐ ದರ: 6.48 ಲಕ್ಷ ರುಪಾಯಿ.


Click it and Unblock the Notifications








