600 ಸಿಬ್ಬಂದಿ ನೇಮಕಕ್ಕೆ ಆಡಿ ಇಂಡಿಯಾ ನಿರ್ಧಾರ

Audi Hire 600 Workers
ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿಯ ಅಂಗಸಂಸ್ಥೆ ಆಡಿ ಇಂಡಿಯಾ, ದೇಶದಲ್ಲಿ ಸುಮಾರು 600 ಸಿಬ್ಬಂದಿಗಳನ್ನು ನೇಮಕಮಾಡಿಕೊಳ್ಳಲು ನಿರ್ಧರಿಸಿದೆ. ಕಂಪನಿಯು ಔರಂಗಾಬಾದ್ ಘಟಕಕ್ಕೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕಮಾಡಿಕೊಳ್ಳಲಿದೆ.

"ದೇಶದ ಲಕ್ಷುರಿ ಮಾರುಕಟ್ಟೆಯಲ್ಲಿ ನಂಬರ್ ಒನ್ ಗುರಿಸಾಧಿಸಲು ಆಡಿ ಹಲವು ವಿಸ್ತರಣಾ ಯೋಜನೆಗಳನ್ನು ಹೊಂದಿದೆ. ಇದರ ಒಂದು ಭಾಗವಾಗಿ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ" ಎಂದು ಆಡಿ ಇಂಡಿಯಾ ಮುಖ್ಯಸ್ಥ ಮೈಕಲ್ ಪಾರ್ಷ್ಕೆ ಹೇಳಿದ್ದಾರೆ.

ಸಣ್ಣಪಟ್ಟಣಗಳಲ್ಲೂ ಕಂಪನಿಯು ಡೀಲರ್ಷಿಪ್ ನೆಟ್ ವರ್ಕ್ ಗಳನ್ನು ವಿಸ್ತರಿಸಲು ಯೋಜಿಸಿದೆ. ಈಗಾಗಲೇ 13 ಹೊಸ ಶೋರೂಂಗಳನ್ನು ತೆರೆದಿರುವುದಾಗಿ ಅವರು ಹೇಳಿದ್ದಾರೆ. ಉತ್ಪಾದನಾ ವಿಭಾಗ, ಶೋರೂಂ ಮತ್ತು ಕಾರ್ಪೊರೇಟ್ ವಿಭಾಗಗಳಿಗಾಗಿ ಸಿಬ್ಬಂದಿಗಳನ್ನು ನೇಮಕಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಆಡಿ ಇಂಡಿಯಾ ಇತ್ತೀಚೆಗೆ ಆಡಿ ಎ6 ಎಂಬ ಐಷಾರಾಮಿ ಕಾರನ್ನು ಹೊರತಂದಿತ್ತು. ಪ್ರಸಕ್ತ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲೊಂದನ್ನು ಹೊರತರಲು ಕೂಡ ಕಂಪನಿ ಯೋಜಿಸಿದೆ. ಜಾಗತಿಕವಾಗಿ ಕಂಪನಿಯು ಹತ್ತು ಸಾವಿರ ಸಿಬ್ಬಂದಿಗಳನ್ನು ನೇಮಕಮಾಡಿಕೊಳ್ಳಲು ಯೋಜಿಸಿದೆ ಎಂದು ಪಾರ್ಷ್ಕೆ ಹೇಳಿದ್ದಾರೆ.

More from DriveSpark

Article Published On: Friday, August 19, 2011, 14:17 [IST]
English summary
Audi India, The Indian subsidiary of the German premium carmaker is hiring big time. The company is conducting recruitment drives to appoint more than 600 workers at its plant in Aurangabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+