ಭಾರತಕ್ಕೆ ಮುಂದಿನ ವರ್ಷ ಫೋಕ್ಸ್ ವ್ಯಾಗನ್ ಬೀಟಲ್

ಬೀಟಲೆಂಬ ಪುಟ್ಟ ಕಾರು ತನ್ನ ವಿನ್ಯಾಸದಿಂದಲೇ ಗಮನಸೆಳೆಯುತ್ತದೆ. ಈ ಐಕಾನಿಕ್ ಕಾರಿನ ಮೊದಲ ಆವೃತ್ತಿ ರಸ್ತೆಗಿಳಿದದ್ದು ನಾಜಿಕಾಲದಲ್ಲಿ. ಅಂದ್ರೆ 1938ರಲ್ಲಿ. ಅಲ್ಲಿಂದ ಇಲ್ಲಿವರೆಗೆ ಜನಪ್ರಿಯತೆ ಕಳೆದುಕೊಳ್ಳದ ಬೀಟಲ್ ಕಾರು ಈಗಿನ ತಲೆಮಾರಿಗೆ ಸೂಕ್ತವಾಗಿ ರಸ್ತೆಗಿಳಿದಿದೆ.
ಫೋಕ್ಸ್ ವ್ಯಾಗನ್ ಕಂಪನಿಯು ಈಗಾಗಲೇ ಬೀಟಲ್ ಕಾರನ್ನು ಅಮೆರಿಕದಲ್ಲಿ ಅನಾವರಣ ಮಾಡಿದೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ ನೂತನ ಬೀಟಲ್ ಏಷ್ಯಾ ರಾಷ್ಟ್ರಗಳಿಗೆ ಪ್ರವೇಶಿಸಲಿದೆ. ಇದರಲ್ಲಿ ಭಾರತ ಬೀಟಲಿಗೆ ಪ್ರಮುಖ ಮಾರುಕಟ್ಟೆಯಂತೆ!
ನೂತನ ಜೆಟ್ಟಾ ಕಾರನ್ನು ಮಾರುಕಟ್ಟೆಗೆ ಅನಾವರಣ ಮಾಡಿದ ಸಂದರ್ಭದಲ್ಲಿ ಈ ಬೀಟಲ್ ಸುದ್ದಿಯನ್ನು ಮುಂಬೈನಲ್ಲಿ ಫೋಕ್ಸ್ ವ್ಯಾಗನ್ ಇಂಡಿಯಾ ನಿರ್ದೇಶಕ ನೀರಜ್ ಗಾರ್ಗ್ ಹೇಳಿದ್ದಾರೆ.
ಭಾರತದ ರಸ್ತೆಗೆ ಬೀಟಲ್ ಪದಾರ್ಪಣೆ ಮಾಡಿದ್ದು 2009ರಲ್ಲಿ. ದೇಶದ ರಸ್ತೆಯಲ್ಲಿ ಈಗ ಸುಮಾರು 617 ಬೀಟಲ್ ಕಾರುಗಳಿವೆ. ಜರ್ಮನಿಯ ಹುಡುಗಿಯರ ಉರುಂಟು ಚಟ್ಟೆ ಮುಖದಂತೆ ಕಾಣುವ ಬೀಟಲ್ ವಿನ್ಯಾಸದಲ್ಲಿ ಸವಾರಿ ಮಾಡಲು ಇಚ್ಚಿಸುವರು ಮುಂದಿನ ಫೆಬ್ರವರಿವರೆಗೆ ಕಾಯುವುದು ಅನಿವಾರ್ಯ.


Click it and Unblock the Notifications








