ಜಾನ್ ಅಬ್ರಹಾಂ ಖರೀದಿಸಿದ ಆಡಿ ಕ್ಯೂ7 ನೋಡಿ
ಬಾಲಿವುಡ್ ಬೆರಗಿನ ನಟ ಜಾನ್ ಅಬ್ರಹಾಂ ಕಾರು ಕ್ರೇಜಿನಲ್ಲಿ ಹೊಸ ಪ್ರಿಯತಮೆಯ ತೆಕ್ಕೆಗೆ ಬಿದ್ದಿದ್ದಾನೆ. ಆತ ಇತ್ತೀಚೆಗೆ ಮುಂಬೈನಲ್ಲಿರುವ ಆಡಿ ಶೋರೂಂಗೆ ಭೇಟಿ ನೀಡಿದ್ದ. ಆತನ ಕೈಗೆ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಆಡಿಯ ಕ್ಯೂ7 ಕೀಲಿಕೈ ಹಸ್ತಾತರಿಸಲಾಯಿತು. ಆಗ ನಮ್ಮ ಫೋಟೊಗ್ರಾಫರುಗಳು ಹಲವು ಫೋಟೊ ತೆಗೆದು ಸಂಭ್ರಮಿಸಿದರು.
ದೇಶದ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ SUV ಅಂದ್ರೆ ಆಡಿ ಕ್ಯೂ7. ದೇಶದ ಹಲವು ಸೆಲೆಬ್ರಿಟಿಗಳು ಆಡಿ ಕ್ಯೂ7 ಕಾರನ್ನು ಈಗಾಗಲೇ ಖರೀದಿಸಿದ್ದಾರೆ. ಜಾಬ್ ಅಬ್ರಹಾಂ ಕ್ಯೂ7 ಕಾರು ಖರೀದಿಗೆ ಹೋದರೂ ಪಕ್ಕದಲ್ಲಿದ್ದ ಆರ್8 ಕಾರಿನ ಮುಂದೆ ನಿಂತು ಪೋಸ್ ನೀಡಿದ್ದಾರೆ.
ಆಡಿ ಕ್ಯೂ7 ಕಾರಿನ ದರ ಸುಮಾರು 60 ಲಕ್ಷ ರುಪಾಯಿ ಇದೆ. ಇದು ಮೂರು ಆವೃತ್ತಿಗಳಲ್ಲಿ ದೊರಕುತ್ತಿದೆ. ಪೆಟ್ರೊಲ್ ಆವೃತ್ತಿ ಮೂರು ಲೀಟರ್ ಎಂಜಿನ್ ಹೊಂದಿದೆ. ಡೀಸೆಲ್ ಆವೃತ್ತಿಗಳೆರಡು ಮೂರು ಲೀಟರ್ ಟಿಡಿಐ ಮತ್ತು 4.2 ಲೀಟರ್ ಟಿಡಿಐ ಎಂಜಿನ್ ಹೊಂದಿವೆ. (ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ).


Click it and Unblock the Notifications








