ಇಂಡಿಯನ್ ಗ್ರಾಂಡ್ ಪ್ರಿಕ್ಸ್ ಗೆ ಮರ್ಸಿಡಿಸ್ ಪಾಲುದಾರ

ದೇಶದಲ್ಲಿ ನಡೆಯುವ ಫಾರ್ಮುಲಾ ಒನ್ ಗೆ ಮರ್ಸಿಡಿಸ್ ಬೆಂಝ್ ಅಫೀಶಿಯಲ್ ಆಟೋಮೊಬೈಲ್ ಪಾಲುದಾರ ಕಂಪನಿಯಾಗಿದೆ. ಇದಕ್ಕಾಗಿ ಮರ್ಸಿಡಿಸ್ ಬೆಂಝ್ ಮತ್ತು ಜೈಪಿ ಸ್ಪೋರ್ಟ್ಸ್ ಇಂಟರ್ ನ್ಯಾಷನಲ್(ಜೆಪಿಎಸ್ಐ) ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಒಪ್ಪಂದದ ಪ್ರಕಾರ ಕಾರ್ಯಕ್ರಮಕ್ಕೆ ಮರ್ಸಿಡಿಸ್ ಸುರಕ್ಷತೆಯ ಕಾರುಗಳನ್ನು ನೀಡಬೇಕಿದೆ.
ಇವೆರಡು ಕಂಪನಿಗಳು 2012ರಲ್ಲಿ ಡ್ರೈವಿಂಗ್ ಅಕಾಡಮಿ ಸ್ಥಾಪಿಸುವ ಕುರಿತು ಕೂಡ ಪ್ರಕಟಿಸಿವೆ. ಈ ಅಕಾಡಮಿಯಲ್ಲಿ ಆಯ್ಕೆಯಾದ ಚಾಲಕರು ಜರ್ಮನಿಯಲ್ಲಿ ತರಬೇತಿ ಪಡೆಯುವ ಅವಕಾಶ ಪಡೆಯಲಿದ್ದಾರೆ. ಇದರಿಂದಾಗಿ ಇಂತಹ ಅಕಾಡೆಮಿ ಇರುವ ವಿಶ್ವದ ಮೂರನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ. ಇತ್ತೀಚೆಗೆ ಇಂಡಿಯನ್ ಜಿಪಿ ಟೈಟಲ್ ಸ್ಪಾನ್ಸರ್ ಕಂಪನಿಯಾಗಿ ಏರ್ ಟೆಲ್ ಎಫ್1 ಜೊತೆಯಾಗಿದೆ.


Click it and Unblock the Notifications








