ಧಾರವಾಡದಲ್ಲಿ ಟಾಟಾ ಮೋಟರ್ಸ್ ಹೊಸ ಘಟಕ

Tata Motors New plant in Dharwad
ದೇಶದ ಬೃಹತ್ ಟ್ರಕ್ ತಯಾರಿಕಾ ಕಂಪನಿ ಟಾಟಾ ಮೋಟರ್ಸ್ ದಕ್ಷಿಣ ಭಾರತದಲ್ಲಿ ವಾಹನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ನಿರ್ಧರಿಸಿದೆ. ಆಸಕ್ತಿದಾಯಕ ವಿಷಯವೆಂದರೆ ಕಂಪನಿಯು ಕರ್ನಾಟಕದಲ್ಲಿ ಇನ್ನೊಂದು ಘಟಕ ನಿರ್ಮಿಸಲಿದೆಯಂತೆ!

ಟಾಟಾ ಮೋಟರ್ಸ್ ಈಗಾಗಲೇ ಧಾರವಾಡದಲ್ಲಿ ಉತ್ಪಾದನಾ ಘಟಕ ಹೊಂದಿದೆ. ಹಗುರ ವಾಣಿಜ್ಯ ವಾಹನ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಕಂಪನಿಯು ಧಾರವಾಡದಲ್ಲೇ ಇನ್ನೊಂದು ಘಟಕವನ್ನು ನಿರ್ಮಿಸಲು ಉದ್ದೇಶಿಸಿಸಲಾಗಿದೆ ಎಂದು ಟಾಟಾ ಮೋಟರ್ಸ್ ವಕ್ತಾರರು ಹೇಳಿದ್ದಾರೆ. ಕಂಪನಿಯು ನೂತನ ಘಟಕಕ್ಕೆ 900 ಕೋಟಿ ರು. ಹೂಡಿಕೆ ಮಾಡಲು ನಿರ್ಧರಿಸಿದೆ.

"ಕಂಪನಿಯು ಧಾರವಾಡ ಘಟಕದಲ್ಲಿ ಟಾಟಾ ಏಸ್ ಝಿಪ್ ಮತ್ತು ಟಾಟಾ ಮ್ಯಾಜಿಕ್ ಐರಿಷ್ ವಾಹನಗಳನ್ನು ಉತ್ಪಾದಿಸುತ್ತಿದೆ. ಈ ಘಟಕದ ವಾರ್ಷಿಕ ಉತ್ಪಾದನಾ ಸಾಮರ್ಥ್ಯ ಒಂದು ಲಕ್ಷ ಯೂನಿಟ್ ಆಗಿದೆ" ಎಂದರು.

"ಟಾಟಾ ಮೋಟರ್ಸ್ ಹಗುರ ವಾಹನಗಳ ಉತ್ಪಾದನೆ ಹೆಚ್ಚಿಸುವ ದೃಷ್ಟಿಯಿಂದ ನೂತನ ಘಟಕ ನಿರ್ಮಿಸಲಿದೆ. ನೂತನ ಘಟಕ ಮುಂದಿನ ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಆರಂಭವಾಗುವ ನಿರೀಕ್ಷೆಯಿದೆ" ಎಂದು ಟಾಟಾ ಮೋಟರ್ಸ್ ವಕ್ತಾರರು ಹೇಳಿದ್ದಾರೆ.

ಕಂಪನಿಯು ಟಾಟಾ ಏಸ್ ಝಿಪ್ ಮತ್ತು ಟಾಟಾ ಮ್ಯಾಜಿಕ್ ಐರಿಷ್ ಹಗುರ ವಾಹನಗಳನ್ನು ಮೇ ತಿಂಗಳಿನಲ್ಲಿ ರಸ್ತೆಗಿಳಿಸಿತ್ತು. ಕಂಪನಿಯು ಪಾಟ್ನಾಗರ್ ಘಟಕದಲ್ಲಿ ಎಲ್ ಸಿವಿ ಮತ್ತು ಟಾಟಾ ಏಸ್ ಸೇರಿದಂತೆ ಹೆಚ್ಚಿನ ಸಣ್ಣ ವಾಣಿಜ್ಯ ವಾಹನಗಳನ್ನು ಉತ್ಪಾದಿಸುತ್ತಿದೆ.

More from DriveSpark

Article Published On: Thursday, August 25, 2011, 13:26 [IST]
English summary
Tata Motors to set up another plant in Dharwad(Karnataka). Company will invest Rs. 900 crore in the new Plant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+