ಮೈಸೂರು ರಾಜರ ಕಾರು ಮತ್ತು ಟಿಪ್ಪು ಲೋಲಕ ಹರಾಜು

ಭಾರತದ ರಾಜರುಗಳಿಗೆ ಐಷಾರಾಮಿ ಕಾರುಗಳೆಂದರೆ ಇಷ್ಟ. ಜಗತ್ತಿನ ದುಬಾರಿ ಕಾರುಗಳೆಲ್ಲವನ್ನು ತಮ್ಮ ಗ್ಯಾರೇಜಿನಲ್ಲಿ ತಂದಿಟ್ಟುಕೊಳ್ಳುತ್ತಿದ್ದರು. ಮೈಸೂರು ಮಹಾರಾಜರಿಗೂ ಕಾರೆಂದರೆ ಇಷ್ಟ. ಅವರ ಸಂಗ್ರಹದಲ್ಲಿ ವಿಶ್ವದ ಪ್ರಮುಖ ಐಕಾನಿಕ್ ಕಾರುಗಳೆಲ್ಲ ಇದ್ದವು.

1902ರಿಂದ 1940ರವರೆಗೆ ಮೈಸೂರಿನಲ್ಲಿ ಆಳ್ವಿಕೆ ನಡೆಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಕೂಡ ಅಪ್ಪಟ ಕಾರುಪ್ರೇಮಿಯಾಗಿದ್ದರು. ನಗರ ಸಂಚಾರಕ್ಕೆ, ಕೆಲವೊಮ್ಮೆ ಬೇಟೆ ಸ್ಥಳಗಳಿಗೆ ಇಂತಹ ಕಾರಿನಲ್ಲಿ ವಿಹಾರ ಮಾಡುತ್ತಿದ್ದರು.

ನಾಲ್ಕನೇ ಕೃಷ್ಣರಾಜ ಒಡೆಯರ್ ರೋಲ್ಸ್ ರಾಯ್ಸಿ ಸಿಲ್ವರ್ ಘೋಸ್ಟ್ ಹೊಂದಿದ್ದರು. ಘೋಸ್ಟ್ ನ್ನು ಅವರು 1920-1926 ಸಮಯದಲ್ಲಿ ಖರೀದಿಸಿದ್ದರು ಎನ್ನಲಾಗಿದೆ. ಇದಕ್ಕೂ ಮುನ್ನ ಈ ಕಾರನ್ನು ದೆಹಲಿ ದರ್ಬಾರಿಗೆ ಆಮದುಮಾಡಿಕೊಳ್ಳಲಾಗಿತ್ತಂತೆ. ನಂತರ ಇದನ್ನು ಮೈಸೂರಿಗೆ ತರಲಾಗಿತ್ತು.

ಮುಂದಿನ ತಿಂಗಳು 16ನೇ ತಾರೀಖು ಲಂಡನಿನ ಬೋನಾಮ್ಸ್ ನಲ್ಲಿ ಹಳೆಯ ವಸ್ತುಗಳ ಹರಾಜು ನಡೆಯಲಿದೆ. ಹರಾಜು ಪ್ರಕ್ರಿಯೆಯಲ್ಲಿ ಭಾರತದ ಮಹಾರಾಜರು ಬಳಸಿದ ಈ ಘೋಸ್ಟ್ ಕಾರು ಪ್ರಮುಖ ಆಕರ್ಷಣೆಯಾಗಲಿದೆ. ಈ ದುಬಾರಿ ಕಾರು ಹರಾಜಿನಲ್ಲಿ ಸುಮಾರು 3-4 ಕೋಟಿ ರು.ಗೆ ಬಿಕರಿಯಾಗುವ ನಿರೀಕ್ಷೆಯಿದೆ.

ಇದೇ ಸಮಯದಲ್ಲಿ ಟಿಪ್ಪು ಸುಲ್ತಾನ್ ನ ಚಿನ್ನದ ಪದಕವೊಂದು ಕೂಡ ಹರಾಜಾಗಲಿದೆ. ಈ ಪದಕವು 9 ಅಮೂಲ್ಯ ರತ್ನ ಖಚಿತವಾಗಿದ್ದು 38 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ.

More from DriveSpark

Article Published On: Friday, August 26, 2011, 11:33 [IST]
English summary
Krishnaraja Wadiyar IV, Mysore's Maharaja from 1902 - 1940 owned a Rolls Royce iconic Silver Ghost. This car will be auctioned by Bonham's London on September 16. Also to be auctioned will be a gold pendant once owned by Tippu Sultan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+